‘ರವಿಚಂದ್ರ ವಿ’ ಆದ ಕ್ರೇಜಿಸ್ಟಾರ್!

ವಿ.ರವಿಚಂದ್ರನ್ ಎಂದರೆ ಕನ್ನಡ ಚಿತ್ರರಂಗಕ್ಕೆ ಅದ್ಧೂರಿತನದ ಹೆಸರು ತಂದವರು. ಆದರೆ ಪ್ರಸ್ತುತ ಅವರೇ ತಮ್ಮ ಹೆಸರನ್ನು ಬದಲಿಸಿಕೊಂಡಿರುವುದಾಗಿ ಸಿನಿಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಕ್ರೇಜಿಸ್ಟಾರ್ ಎನ್ನುವ ಬಿರುದಿಗೆ ತಕ್ಕಂತೆ ಕ್ರೇಜಿ ಐಡಿಯಾಗಳನ್ನು ಪರದೆಯ ಮೇಲೆ ನೀಡುವಲ್ಲಿ ರವಿಚಂದ್ರನ್ ಅವರೇ ಮೊದಲಿಗರು. ಇದೀಗ ತಮ್ಮ ಹೆಸರಿನ ಮೇಲೆಯೂ... Read more »

‘ದೃಶ್ಯ 2’ ಚಿತ್ರದಲ್ಲಿ ಅನಂತನಾಗ್ !

ಸರಿಯಾಗಿ ಏಳು ವರ್ಷಗಳ ಹಿಂದೆ ರವಿಚಂದ್ರನ್ ನಾಯಕತ್ವದಲ್ಲಿ ತೆರೆಕಂಡು ಯಶಸ್ವಿಯಾದ ಚಿತ್ರ ‘ದೃಶ್ಯ’ದ ಎರಡನೇ ಭಾಗಕ್ಕೆ ಚಾಲನೆ ದೊರಕಿದೆ. ಸಿನಿಮಾದಲ್ಲಿನ‌ ಪ್ರಮುಖ ಪಾತ್ರವೊಂದನ್ನು ಅನಂತನಾಗ್ ಅವರು ನಿಭಾಯಿಸುತ್ತಿರುವುದು ವಿಶೇಷ. ದೃಶ್ಯ 2 ಚಿತ್ರದ ಮುಹೂರ್ತ ಸಮಾರಂಭವು ಯಲಹಂಕದ ಬಳಿಯ ವೈಟ್ ಹೌಸ್ ನಲ್ಲಿ ಸರಳವಾಗಿ... Read more »

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಸಾವು

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಿಧನರಾಗಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಕೊನೆಯುಸಿರೆಳೆದಿದ್ದು ಅವರ ಸಾವಿಗೆ ಹೃದಯಾಘಾತವೇ ಕಾರಣ ಎನ್ನಲಾಗಿದೆ. ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯವರಾದ ಸುನೀಲ್ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದು ಬೆಂಗಳೂರಲ್ಲಿ. ಅದರಲ್ಲಿಯೂ ‘ಹಾಯ್ ಬೆಂಗಳೂರ್!’ ಸೇರಿಕೊಂಡು ಸುಮಾರು ಹದಿನೈದು ವರ್ಷಗಳ ಕಾಲ ರವಿಬೆಳಗೆರೆಯವರ ಆತ್ಮೀಯರಾಗಿ... Read more »

ಧನುಷ್ ಗೌಡರ ಮಾತಿನ ಬಾಣ!

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿನ ವಿಜಯ್ ಎನ್ನುವ ಪಾತ್ರ ಸಾಕಷ್ಟು ಜನಪ್ರಿಯತೆ ಕಂಡುಕೊಂಡಿದೆ. ಧಾರಾವಾಹಿಯ ಮುಖ್ಯಪಾತ್ರವಾದ ವಿಜಯ್ ಆಗಿ ನಟಿಸುತ್ತಿರುವ ಕಲಾವಿದರ ನಿಜವಾದ ಹೆಸರು ಧನುಷ್ ಗೌಡ. ಧನುಷ್ ಹುಟ್ಟಿ ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ. ಮಾಡಿದ್ದು ಡಿಪ್ಲೊಮಾ ಇನ್ ಇಂಜಿನಿಯರಿಂಗ್. ಆದರೆ ಆಸಕ್ತಿ... Read more »

ಈ ‘ಗುರು’ ಚಿತ್ರರಂಗದ ವಿದ್ಯಾರ್ಥಿ!

ಕನ್ನಡದಲ್ಲಿ ಸಂಭಾಷಣಾಕಾರರಿಗೆ ಕೊರತೆ ಇದೆ ಎನ್ನಲಾಗುತ್ತದೆ. ಆ ನಿಟ್ಟಿನಲ್ಲಿ ನೋಡಿದರೆ ಸಿನಿಮಾ ಕ್ಷೇತ್ರದ ಸಂಬಂಧವೇ ಇರದಿದ್ದರೂ ಬೆಂಗಳೂರಿಗೆ ಬಂದು ತಮ್ಮ ಪುಸ್ತಕ ಓದುವ, ಬರೆಯುವ ಹವ್ಯಾಸಗಳಿಂದ ಸಂಭಾಷಣಾಕಾರಾಗಿ ಭಡ್ತಿ ಪಡೆಯುತ್ತಿರುವ ಹೊಸ ಪ್ರತಿಭೆಗಳು ಆಶಾದಾಯಕವೆನಿಸುತ್ತವೆ‌. ಅಂಥದೊಂದು ಪ್ರತಿಭೆ ಎನ್ನಬಹುದಾದ ಗುರುಪ್ರಸಾದ್ ಚಂದ್ರಶೇಖರ್ ಅವರ ಕುರಿತು... Read more »

ನಿರ್ದೇಶಕ ಮಂಸೋರೆ ನಿಶ್ಚಿತಾರ್ಥ

ಹರಿವು, ನಾತಿಚರಾಮಿ ಮತ್ತು ಆಕ್ಟ್-1978 ಚಿತ್ರಗಳ ನಿರ್ದೇಶಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಗಳ ನಿರ್ದೇಶಕ ‘ಮಂಸೋರೆ’ ಅವರು ಇಂದು ಬೆಂಗಳೂರಿನಲ್ಲಿ ಅಖಿಲಾ ಅವರೊಂದಿಗೆ ನಿಶ್ಚಿತಾರ್ಥಗೊಂಡು ಉಂಗುರ ಬದಲಾಯಿಸಿದ್ದಾರೆ. ಕೋವಿಡ್ ಕಾರಣದಿಂದಾಗಿ ಹೆಚ್ಚು ಜನರನ್ನು ಆಹ್ವಾನಿಸದೇ, ಕುಟುಂಬದವರು ಹಾಗೂ ಕೆಲವು ಗೆಳೆಯರ ಸಮಕ್ಷಮದಲ್ಲಿ ನಿಶ್ಚಿತಾರ್ಥ ನಡೆದಿದೆ. ಮಂಸೋರೆಯವರ... Read more »

ಭರದಿಂದ ಸಿದ್ಧವಾದ ‘ಕಪೋಕಲ್ಪಿತಂ’

ಕಪೋಲ‌ ಕಲ್ಪಿತ ಎನ್ನುವ ಪದವನ್ನು ನಾವೆಲ್ಲರೂ ಕೇಳಿದ್ದೇವೆ. ತಮ್ಮ ಚಿತ್ರದ ಹೆಸರಿಗೂ ಅದೇ ಅರ್ಥ ಎನ್ನುತ್ತಾ ‘ಕಪೋಕಲ್ಪಿತಂ’ ಎನ್ನುವ ಸಿನಿಮಾದೊಂದಿಗೆ ಬಂದಿದ್ದಾರೆ ನವನಿರ್ದೇಶಕಿ ಸುಮಿತ್ರಾ ಗೌಡ. ಅವರು ಚಿತ್ರದ ನಾಯಕಿಯೂ ಹೌದು. ಇದು ಹಾರರ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ವಿಚಾರಗಳನ್ನು ಹೊಂದಿರುವ ಚಿತ್ರ. ಸಿನಿಮಾ... Read more »

ರಕ್ಷಿತ್ ಬೆಂಬಲಕ್ಕೆ ಯಾರಿದ್ದಾರೆ..?!

ನಟ ರಕ್ಷಿತ್ ಶೆಟ್ಟಿ ಸಾಮಾನ್ಯವಾಗಿ ಯಾರ ಬಗ್ಗೆಯೂ ಮಾತನಾಡುವವರಲ್ಲ. ತಮ್ಮ ಕಾಲೆಳೆದವರ ಬಗ್ಗೆ ಕೂಡ ಮಾತನಾಡದ ರಕ್ಷಿತ್ ಏಕಾಏಕಿ ಚೇತನ್ ಅವರಿಗೊಂದು ಉತ್ತರ ನೀಡಿದ್ದರು. ಅದು ಅವರು ನಮ್ಮ ಕನ್ನಡ ಚಿತ್ರರಂಗವನ್ನು ತಮಾಷೆ ಮಾಡಿದವರ ಜೊತೆ ಸೇರಿದರು ಎನ್ನುವ ಕಾರಣಕ್ಕಾಗಿ. ಆದರೆ ನಿಜಕ್ಕೂ ಕನ್ನಡ... Read more »

ಅವಮಾನಕ್ಕೆ ಉತ್ತರಿಸಿದ ರಕ್ಷಿತ್ ಶೆಟ್ಟಿ

ಜನಪ್ರಿಯ ನಟ ರಕ್ಷಿತ್ ಶೆಟ್ಟಿ ವಿರುದ್ಧ ಖಾಸಗಿ ವಾಹಿನಿಯೊಂದು ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಅವಮಾನಿಸಲಾಗಿರುವುದು ಸಿಂಪಲ್ ಸ್ಟಾರ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಘಟನೆಯ ಬಗ್ಗೆ ರಕ್ಷಿತ್ ಶೆಟ್ಟಿಯವರು ಸಾಮಾಜಿಕ ‌ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರೀತಿ ಕುತೂಹಲಕಾರಿಯಾಗಿದೆ. ನಟ ರಕ್ಷಿತ್ ಶೆಟ್ಟಿಯವರನ್ನು ನಿಂದಿಸಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.... Read more »

ಶರತ್ ‘ಫಿಟ್ನೆಸ್’ ಸಮಾಚಾರ

ಇಂಜಿನಿಯರಿಂಗ್ ಓದಿ,ಐಟಿ ಹುದ್ದೆಯಲ್ಲಿ ಉದ್ಯೋಗ ಮಾಡುತ್ತಿದ್ದ ಶರತ್ ಅವರಿಗೆ ಸಿನಿಮಾ ಲೋಕದ ಮೇಲೆ ಆಕರ್ಷಣೆ ಮೂಡಿತು. ಆದರೆ ಸಿನಿಮಾ ಕ್ಷೇತ್ರಕ್ಕೆ ಹೇಗೆ ಹೆಜ್ಜೆ ಇಡುವುದು ಎಂದು ತಿಳಿಯದೆ ಅವಕಾಶಕ್ಕಾಗಿ ಕಾದು ಕುಳಿತರು. ಆದರೆ ವಿಶೇಷವೇನೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೊಟೋ ನೋಡಿ ಸ್ಟಾರ್ ಸುವರ್ಣ... Read more »

ಮಗುವಿಗೆ ಆಟ; ಕ್ಯಾಬ್ ಗಳ ಕಾಟ..!

ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಟ್ಟರೆ ಏನೆಲ್ಲ ಆಗಬಹುದು? ಅದಕ್ಕೊಂದು ಒಳ್ಳೆಯ ಘಟನೆ ಉದಾಹರಣೆಯಾಗಿ ಸಿಕ್ಕಿದೆ. ಅದು ಕತೆಗಾರ ಟಿ.ಕೆ ದಯಾನಂದ್ ಅವರ ಮನೆಯಿಂದ. ಅವರ ನಾದಿನಿಯ ನಾಲ್ಕು ವರ್ಷದ ಮಗಳು ಆದ್ಯ ಮಾಡಿದ ಕಿತಾಪತಿ ಏನು ಎನ್ನುವುದನ್ನು ತಮ್ಮದೇ ಮಾತುಗಳಲ್ಲಿ ಹೀಗೆ ಹೇಳಿಕೊಂಡಿದ್ದಾರೆ!... Read more »

‘ಮಾನಾಡು’ ಚಿತ್ರದ ಹಾಡು ಬಿಡುಗಡೆ

ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್ ಟಿ.ಆರ್ ಪನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುವಿನಲ್ಲಿ ರವಿತೇಜ ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್ ಟೈಟಲನ್ನು ಲೋಕಾರ್ಪಣೆ ಮಾಡಲಾಗಿದೆ. ಸದ್ಯ ಕನ್ನಡದ ಶೀರ್ಷಿಕೆಯನ್ನು ತಂಡವು ರಿವೀಲ್ ಮಾಡಿರುವುದಿಲ್ಲ.... Read more »

ಪತ್ನಿಗೆ ಬರ್ತ್ ಡೇ! ಕಾರ್ಮಿಕರಿಗೆ ಗಿಫ್ಟ್!!

ಆರಂಭದಿಂದಲೂ ಚಿತ್ರರಂಗದ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲಿ ಸದಾ ಕೈ ಜೋಡಿಸಿರುವ ನಟ ಡಾ. ಶಿವರಾಜ್ ಕುಮಾರ್. ಇದೀಗ ತಮ್ಮ ಖಾಸಗಿ ಸಂತೋಷವನ್ನು ಕೂಡ ಚಿತ್ರರಂಗದ ಸದಸ್ಯರೊಡನೆ ಹಂಚಿಕೊಂಡಿದ್ದಾರೆ. ಅದಕ್ಕೆ ಎಡೆ ಮಾಡಿಕೊಟ್ಟಿರುವುದು ಅವರ ಮುದ್ದಿನ ಮಡದಿ ಗೀತಾ ಅವರ ಜನ್ಮದಿನ. ಇಂದು ಹುಟ್ಟಿದ ದಿನಾಚರಣೆಯ... Read more »

ನಮ್ಮಲ್ಲಿ ಪ್ರಶಸ್ತಿ ಬಂದರೂ ಫಲವಿಲ್ಲವೇಕೆ..?!

ಅನಿರುದ್ಧ ಜಟ್ಕರ್ ಅವರು ಈಗ ಜನಪ್ರಿಯತೆಯ ತುದಿ ತಲುಪಿರುವುದು ‘ಜೊತೆ ಜೊತೆಯಲಿ ಎನ್ನುವ ಕಿರುತೆರೆ ಧಾರಾವಾಹಿಯ ಮೂಲಕ. ಆದರೆ ಅವರ ಹಿನ್ನೆಲೆ, ಬೆಳೆದು ಬಂದ ದಾರಿ, ಅವರಿಗಿರುವ ಅನುಭವ, ಪ್ರತಿಭೆಯನ್ನು ಗಮನಿಸಿದರೆ ಇಂದಿನ ಯಾವ ಸಿನಿಮಾ ಸ್ಟಾರ್ ಗೂ ಕಡಿಮೆ ಇಲ್ಲ. ಆದರೆ ಇಂಥ... Read more »

‘ಸಂಚಾರಿ’ಗಾಗಿ‌ ಕವಿರಾಜ ಮಾರ್ಗ

ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ನಟ ಸಂಚಾರಿ ವಿಜಯ್ ಅವರು ಜೀವನದಲ್ಲಿ ಸಾಕಷ್ಟು ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು. ಅದರಲ್ಲಿ ‘ಉಸಿರು’ ಎನ್ನುವ ಸಂಘಟನೆಯೊಂದಿಗೆ ಅವರು ಹಂಚಿಕೊಂಡ ವಿಚಾರಗಳೂ ಇದ್ದವು. ಅವುಗಳನ್ನು ನೆರವೇರಿಸಲು ‘ಉಸಿರು’ ಕೋವಿಡ್ ಆಕ್ಸಿಜನ್ ಕೇರ್ ಸೇವಾ ಸಂಸ್ಥೆಯ ಸ್ಥಾಪಕ‌ ಕವಿರಾಜ್ ತಮ್ಮ ಸಂಘಟನೆಯೊಂದಿಗೆ ಮುಂದೆ... Read more »

ಮುಂದುವರಿದ ‘ಬಿಗ್ ಬಾಸ್..!’

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಥಮ ಬಾರಿಗೆ ಅರ್ಧಕ್ಕೆ ಸ್ಥಗಿತವಾಗಿತ್ತು. ಆದರೆ ಕಲರ್ಸ್ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ ಗುಂಡ್ಕಲ್ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮುಂದುವರಿಸುವ ಪಣ ತೊಟ್ಟಿದ್ದಾರೆ. ಈ ಬಗ್ಗೆ ಅವರು ಫೇಸ್ಬುಕ್ ನಲ್ಲಿ ಹಂಚಿಕೊಂಡ ಮಾಹಿತಿಯನ್ನು ಅದೇ ರೀತಿ ಇಲ್ಲಿ... Read more »

ವಿದಾಯ ಹೇಳಿದ ಸಂಚಾರಿ ವಿಜಯ್

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಮೆದುಳು ನಿಧನವಾಗಿದೆ. ಶನಿವಾರ ರಾತ್ರಿ ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಏಟು ಮಾಡಿಕೊಂಡಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಇದನ್ನು ವೈದ್ಯರು ಬ್ರೈನ್ ಡೆತ್ ಎಂದಿದ್ದಾರೆ. ಲಾಕ್ಡೌನ್ ದಿನಗಳಲ್ಲಿಯೂ ಕೋವಿಡ್ ಸೋಂಕಿತರ ಸಹಾಯ... Read more »

ಕೆಸಿಎನ್ ಚಂದ್ರು ನಿಧನ

ಭಾರತೀಯ ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲೋರ್ವರಾದ ಕನ್ನಡಿಗ ಕೆ.ಸಿ.ಎನ್ ಚಂದ್ರಶೇಖರ್ ಅವರು ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ನಿರ್ಮಾಪಕ ಕೆ ಸಿ ಎನ್ ಚಂದ್ರು ಅವರ ನಿಧನಕ್ಕೆ ವಯೋಸಹಜ ಕಾಯಿಲೆಯೇ ಕಾರಣ ಎಂದು ತಿಳಿದು ಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಭಾನುವಾರ ತಡರಾತ್ರಿ... Read more »

ಅಪಘಾತದಲ್ಲಿ ಅಪಾಯಕ್ಕೊಳಗಾದ ವಿಜಯ್

ನಟ ಸಂಚಾರಿ ವಿಜಯ್ ಅವರಿಗೆ ಅಪಘಾತವಾಗಿದೆ. ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಏಟು ಮಾಡಿಕೊಂಡಿರುವ ವಿಜಯ್ ಬನ್ನೇರುಘಟ್ಟ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ರಾತ್ರಿ ಸ್ನೇಹಿತನ ಜೊತೆಗೆ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಹಿಂಬದಿ ಸವಾರನಾಗಿ ಕುಳಿತಿದ್ದ... Read more »

ಕಣ್ಮರೆಯಾದರು ‘ದಲಿತ ಕವಿ’

ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾಗಿ, ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿದ್ದ ಹಿರಿಯ ಕವಿ ಸಿದ್ದಲಿಂಗಯ್ಯ (67) ಇಂದು ನಿಧನರಾಗಿದ್ದಾರೆ. ಅವರ ಸಾವಿಗೆ ಕೂಡ ಕೋವಿಡ್ 19 ಕಾರಣವಾಗಿರುವುದು ದುರಂತದ ಸಂಗತಿಯಾಗಿದೆ. ತಿಂಗಳ ಹಿಂದೆ ಕೊರೊನಾ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಲಿಂಗಯ್ಯ ಗೆದ್ದು ಬರುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು.... Read more »

ನಟ, ಪತ್ರಕರ್ತ ಸುರೇಶ್ಚಂದ್ರ ಸಾವು

ಹಿರಿಯ ನಟ ಮತ್ತು ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಸುರೇಶ್ಚಂದ್ರ (69) ನಿಧನರಾಗಿದ್ದಾರೆ. ಕೊರೊನಾ ಕಾರಣದಿಂದಾಗಿ ಈ ಸಾವು ಸಂಭವಿಸಿದೆ ಎಂದು ಅವರ ಪುತ್ರ ವಿನಯ ಚಂದ್ರ ಸಿನಿಕನ್ನಡ.ಕಾಮ್ ಗೆ ತಿಳಿಸಿದ್ದಾರೆ. ‘ಚೆಲುವಿನ ಚಿತ್ತಾರ’ ಸಿನಿಮಾದಲ್ಲಿ ಅಮೂಲ್ಯನ ತಂದೆಯ ಪಾತ್ರ ನಿರ್ವಹಿಸಿದ್ದ ಸುರೇಶ್ಚಂದ್ರ ಅವರು ಆ ಮೂಲಕವೇ... Read more »
error: Content is protected !!