ಕನ್ನಡ ಚಿತ್ರರಂಗದ ಸಮಸ್ತರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಅಭಿಯಾನವನ್ನು ಕಳೆದ ತಿಂಗಳಾಂತ್ಯದಲ್ಲಿ ಆರಂಭಿಸಿದ್ದು ಕಲಾವಿದರ ಭವನದಲ್ಲಿ. ಆದರೆ ಅದರ ಪೋಸ್ಟರ್ ಒಂದರ ಬಿಡುಗಡೆಯ ವಿಚಾರದಲ್ಲಿ ಮೂಡಿರುವ ವಿವಾದ ಮತ್ತು ಮುಂದುವರಿದ ಪ್ರತಿಕ್ರಿಯೆಗಳಿಗೆ ಚಿತ್ರ ಸಾಹಿತಿ, ನಿರ್ದೇಶಕ ವಿ ನಾಗೇಂದ್ರ ಪ್ರಸಾದ್ ಅವರು ಸಿನಿಕನ್ನಡದ... Read more »
ಹಿರಿಯ ನಟಿ ಜಯಾ ಅವರು ನಿನ್ನೆ ನಿಧನರಾದ ಬಗ್ಗೆ ಈಗಾಗಲೇ ನಾವು ಮಾಹಿತಿ ನೀಡಿದ್ದೇವೆ. ಆದರೆ ಇಂದು ಅವರ ಮೃತದೇಹವನ್ನು ರಸ್ತೆ ಬದಿಯಲ್ಲಿರಿಸಿ ಅವಮಾನ ಮಾಡಲಾಗಿದೆ ಎನ್ನುವ ವಿಡಿಯೋ ಒಂದು ಹರಿದಾಡುತ್ತಿದ್ದು, ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ. ಇದು ನಟಿ ಜಯಾ... Read more »
ರಾಕ್ಷಸ ಎನ್ನುವ ಪದವನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ತಮ್ಮ ಪ್ರೀತಿಯ ಕೆಲವರಿಗೆ ಬಳಸುತ್ತಿದ್ದರು. ಅದು ಅವರ ಮೆಚ್ಚಿನ ಮಂದಿಯ ಅಗಾಧ ಪ್ರತಿಭೆಯನ್ನು ವರ್ಣಿಸಲು ಪದ ಸಿಗದೆ ಹಾಗೆ ಹೇಳುತ್ತಿದ್ದರು. ನಮ್ಮ ಪಾಲಿಗೆ ಅಂಥ ರಾಕ್ಷಸರಲ್ಲಿ ಎಸ್ ಪಿ ಬಿಯವರೂ ಒಬ್ಬರು. ಇನ್ನು ಒಂದೇ... Read more »
ಹಿರಿಯ ನಟಿ ಜಯಾ ಬಿ (75) ನಿಧನರಾಗಿದ್ದಾರೆ. ಇಂದು ಅವರು ಸಾವಿಗೆ ಒಳಗಾಗಿದ್ದಾರೆ. ಎರಡು ತಿಂಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿದ್ದ ಅವರು ಒಂದಷ್ಟು ಕಾಲ ಚಿಕಿತ್ಸೆಯಲ್ಲಿದ್ದರು ಎಂದು ಅವರ ಸಹೋದರನ ಪುತ್ರಿ ಸಿನಿಕನ್ನಡ.ಕಾಮ್ ಗೆ ಮಾಹಿತಿ ನೀಡಿದ್ದಾರೆ. ‘ಕುಳ್ಳಿ ಜಯಮ್ಮ’ ಎಂದೇ ಖ್ಯಾತರಾಗಿರುವ ನಟಿ... Read more »
ಪೊರ್ಕಿ ಚಿತ್ರ ನೋಡಿದವರು ಇದು ಪರಭಾಷೆಯ ನಟಿ ಎಂದೇ ತಿಳಿದಿದ್ದರು. ಆ ಮಟ್ಟಿಗೆ ಆಮದು ಬೆಡಗಿಯದ ಅಂಗಸೌಂದರ್ಯದೊಡನೆ ಆಗಮಿಸಿದ ನಟಿ ಪ್ರಣೀತಾ. ನಿನ್ನೆ ಭಾನುವಾರ ಅವರ ವಿವಾಹ ನೆರವೇರಿರುವುದಾಗಿ ತಿಳಿದು ಬಂದಿದೆ. ಕೋವಿಡ್ ಕಾಲದ ನಿಯಮಗಳಂತೆ ಬೆರಳೆಣಿಕೆಯ ಮಂದಿಯ ಉಪಸ್ಥಿತಿಯಲ್ಲಿ ಪ್ರಣೀತಾ ವಿವಾಹಿತೆಯಾಗಿದ್ದಾರೆ. ಬೆಂಗಳೂರಿನ... Read more »
ಸಮಸ್ತ ಚಿತ್ರರಂಗಕ್ಕಾಗಿ ವ್ಯಾಕ್ಸಿನ್ ಡ್ರೈವ್ ನಾಳೆಯಿಂದ ಪ್ರಾರಂಭವಾಗುತ್ತಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಲಭ್ಯವಾಗಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ. ನಾಳೆ ಸೋಮವಾರ ದಿನಾಂಕ 31.5.2021ರಿಂದ ನಿರಂತರವಾಗಿ ಎರಡು ದಿನ ಬೆಳಗ್ಗೆ 10 ಘಂಟೆ ಯಿಂದ ಸಂಜೆ 5.00 ಘಂಟೆಯ ವರೆಗೂ ಚಾಮರಾಜಪೇಟೆ ಎಲ್ಲಿರುವ ನಮ್ಮ... Read more »
ರವಿಚಂದ್ರನ್ ಅವರ ವಿನೂತನ ಸಿನಿಮಾ ‘ಕನ್ನಡಿಗ’ದ ಟೀಸರ್ ನಾಳೆ ಬಿಡುಗಡೆಯಾಗಲಿದೆ. ಕನಸುಗಾರ ಅರವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಕ್ರೇಜಿಸ್ಟಾರ್ ಅಂದರೇನೇ ಕನ್ನಡ ಚಿತ್ರರಂಗದ ಅದ್ಧೂರಿ ಆಸ್ತಿ. ಅವರನ್ನು ಇರಿಸಿಕೊಂಡು ಕನ್ನಡಿಗ ಹೆಸರಿನಚಿತ್ರ ಮಾಡಿರುವವರು... Read more »
ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಅಭಿರಾಮ್ (34) ಕೋವಿಡ್ ನಿಂದ ನಿಧನರಾಗಿದ್ದಾರೆ. ಚಿತ್ರರಂಗಕ್ಕೆ ಸಂಬಂಧಿಸಿದಂತೆ ಕೋವಿಡ್ ಎರಡನೇ ಅಲೆ ಆರಂಭದಲ್ಲಿ ಉಸಿರು ಚೆಲ್ಲಿದ ಮೊದಲ ವ್ಯಕ್ತಿ ಡಿ.ಎಸ್. ಮಂಜುನಾಥ್. ಸಂಯುಕ್ತ-2 ಸಿನಿಮಾದ ಮೂಲಕ ನಿರ್ಮಾಪಕರಾಗಿ ಮತ್ತು ನಟನಾಗಿ ಮಂಜುನಾಥ್ ಚಿತ್ರರಂಗಕ್ಕೆ ಬಂದಿದ್ದವರು. ನಂತರ ಕೆಮಿಸ್ಟ್ರಿ... Read more »
ರೆಬಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಾಳೆ ದಿನಾಂಕ 29ರಂದು ಶನಿವಾರ ಮಂಡ್ಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಮತೆಯ ಮಡಿಲು ಸಂಸ್ಥೆಯ ಸಹಕಾರದೊಡನೆ ನೀಡಲಾಗುವುದಾಗಿ ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಹೊರ ರೋಗಿಗಳಿಗೆ... Read more »
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆಯವರು ಮಾಧ್ಯಮದ ಮೂಲಕ ಚಲನಚಿತ್ರ ಅಕಾಡೆಮಿ ಮತ್ತು ಮುಖ್ಯಮಂತ್ರಿಗಳಿಗೆ ಒಂದು ವಿಶೇಷ ಮನವಿ ಸಲ್ಲಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬದಲಾಗಿ ಅದಕ್ಕೆ ಕಾಯ್ದಿರಿಸಿದ ಹಣವನ್ನು ದುಸ್ಥಿತಿಯಲ್ಲಿರುವ ಚಿತ್ರರಂಗದ ಕಾರ್ಮಿಕರ, ಕಲಾವಿದರಿಗಾಗಿ ವಿನಿಯೋಗಿಸಲು ವಿನಂತಿಸಿದ್ದಾರೆ. ಸಿನಿಕನ್ನಡ.ಕಾಮ್ ಗೆ ದೊರಕಿರುವ ಅವರ... Read more »
ದೇವರ ಸೃಷ್ಟಿ ಎಷ್ಟು ಆಕರ್ಷಕವೋ ಮನುಷ್ಯನ ಕಲ್ಪನೆಯ ದೇವರು ಕೂಡ ಅಷ್ಟೇ ಆಕರ್ಷಕ. ಈ ಮಾತು ಹೆಚ್ಚು ಅರ್ಥಪೂರ್ಣವೆನಿಸುವುದು ಹಿಂದೂ ಸಂಪ್ರದಾಯದಲ್ಲಿರುವ ಆರಾಧ್ಯ ದೈವಗಳಿಗೆ ಕುಂಚದಲ್ಲಿ ರೂಪ ಸಿಕ್ಕಾಗ. ಅಂಥದೊಂದು ಅಪರೂಪದ ಅವಕಾಶದಲ್ಲಿ ದುರ್ಗಾಂಬಿಕಾ ದೇವಿಗೆ ಸಾಂಪ್ರದಾಯಿಕ ಮೈಸೂರು ಶೈಲಿಯ ಕಳೆ ನೀಡಿದ ಕಲೆಗಾರ... Read more »
ಕನ್ನಡ ಕಿರುತೆರೆಯಲ್ಲಿ ಜನಪ್ರಿಯ, ಹೊಸ ಕನ್ನಡ ಸಿನಿಮಾಗಳನ್ನು ನೀಡುವಲ್ಲಿ ಜೀ಼ ಕನ್ನಡದ ಪಾತ್ರ ಪ್ರಮುಖ. ಆ ನಿಟ್ಟಿನಲ್ಲಿ ಕನ್ನಡದ ಎರಡು ಖ್ಯಾತ ಚಿತ್ರಗಳನ್ನು ಈ ವಾರ ಜೀ ಕನ್ನಡ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ. ಕಥಾಸಂಗಮ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ಕಥಾ ಸಂಗಮ’ದ ಬಳಿಕ ಅದೇ... Read more »
ಕನ್ನಡ ಚಿತ್ರರಂಗ ಎಂದರೆ ಸ್ಟಾರ್ ಕಲಾವಿದರು ಮಾತ್ರವಲ್ಲ. ಅವರನ್ನು ಸ್ಟಾರ್ ಆಗಿಸುವಂಥ ಚಿತ್ರ ನೀಡಿದ ನಿರ್ದೇಶಕರಿಂದ ಹಿಡಿದು ಲೈಟ್ ಬಾಯ್ ವರೆಗಿನ ಕಾರ್ಮಿಕರು ಕೂಡ ಸೇರುತ್ತಾರೆ. ಹಾಗಾಗಿಯೇ ಕೆಲಸವಿರದೆ ಸೊರಗಿರುವ ಚಿತ್ರರಂಗದಲ್ಲಿ ದೊಡ್ಡ ಹೊಡೆತ ತಿನ್ನುತ್ತಿರುವ ಕಾರ್ಮಿಕ ವರ್ಗ ಸೇರಿದಂತೆ ಸಂಕಷ್ಟಕ್ಕೆ ಒಳಗಾಗಿರುವ ಪ್ರತಿಯೊಬ್ಬರಿಗು... Read more »
ಚಲನಚಿತ್ರ ಸಾಹಿತಿಯಾಗಿ, ಸಂಭಾಷಣೆಕಾರರಾಗಿ ‘ಭಂಗೀರಂಗ’ ಎಂದೇ ಖ್ಯಾತರಾಗಿದ್ದ ಶ್ರೀರಂಗ(86) ನಿಧನರಾಗಿದ್ದಾರೆ. ಭಾನುವಾರ ಸಂಜೆ ಕಾಲವಾದ ಅವರು ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಶ್ರೀರಂಗ ಅವರ ರಚನೆಯಲ್ಲಿರುವ ‘ನಂಜುಂಡಿ ಕಲ್ಯಾಣ’ ಚಿತ್ರದ ‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ’, ಸೇರಿದಂತೆ ‘ರಂಭೆ ನೀ ವೈಯ್ಯಾರದ... Read more »
ಇನ್ನೇನು ಮೂರು ವಾರದ ದಾಟಿದರೆ ಕನ್ನಡ ಕಿರುತರೆಯ ಜನಪ್ರಿಯ ರಿಯಾಲಿಟಿ ಶೋ `ಬಿಗ್‌ಬಾಸ್ ಸೀಸನ್’8ರ ಫಿನಾಲೇ ನಡೆಯುತ್ತಿತ್ತು. ಆದರೆ ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣ ನಡೆಸದಂತೆ ಒಮ್ಮತದ ತೀರ್ಮಾನ ಕೈಗೊಂಡಿರುವುದಾಗಿ ಕರ್ನಾಟಕ ಟೆಲಿವಿಶನ್ ಅಸೋಸಿಯೇಶನ್... Read more »
ಹಿರಿಯ ನಟ ಶಂಖನಾದ ಅರವಿಂದ್ (70) ಅವರು ನಿಧನರಾಗಿದ್ದಾರೆ. ಅವರು ಕೋವಿಡ್ ಸೋಂಕಿತರಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಹೃದಯಾಘಾತದಿಂದ ಮಧ್ಯಾಹ್ನ ನಿಧನರಾಗಿದ್ದಾರೆ. ಶಂಖನಾದ ಅರವಿಂದ್ ಅವರು ಶಂಖನಾದ ಮತ್ತು ಅನುಭವ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ಹಾಗಾಗಿ ಆ ಸಿನಿಮಾಗಳ ಹೆಸರಿನೊಂದಿಗೆ ಇವರನ್ನು ನೆನಪಿಸಿಕೊಳ್ಳಲಾಗುತ್ತಿತ್ತು.... Read more »
ಕನ್ನಡ ಚಿತ್ರರಂಗದಲ್ಲಿ ಕವಿರತ್ನ ಕಾಳಿದಾಸ, ಅಂಜದ ಗಂಡು ಅಂತಹ ಹಿಟ್, ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾಗೆ ಬಲಿಯಾಗಿದ್ದಾರೆ. 81 ವರ್ಷದವರಾಗಿದ್ದ ರೇಣುಕಾ ಶರ್ಮಾ ಕೊರೊನಾ ಸೋಂಕು ತಗುಲಿದ್ದು, ಕಳೆದ ದಿನಗಳಿಂದ ಗಿರಿನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.... Read more »
ಇದು ವೆಬ್ ಸೀರೀಸ್ ಗಳ ಕಾಲ. ಆದರೂ ಪರಭಾಷೆಗಳಲ್ಲಿ ಇರುವಷ್ಟು ಜನಪ್ರಿಯತೆ ಕನ್ನಡದ ವೆಬ್ ಸೀರೀಸ್ ಗಳಿಗೆ ಈಗಲೂ ದೊರಕಿಲ್ಲ ಎಂದೇ ಹೇಳಬಹುದು. ಆದರೆ ಇಂಥ ಸಂದರ್ಭದಲ್ಲಿ ‘ಸೂಪರ್ ಕಪಲ್’ ಒಂದು ವಿಭಿನ್ನ ಪ್ರಯತ್ನವಾಗಿ ಗುರುತಿಸಿಕೊಂಡಿತ್ತು. ಈಗ ಅದರ ಎರಡನೇ ಸೀಸನ್ ತಯಾರಾಗಿದೆ. ಬೆಂಗಳೂರಿನಂಥ... Read more »
ರವಿಚಂದ್ರನ್ ನಟನೆಯ ಅಣ್ಣಯ್ಯ', ಸುದೀಪ್ ನಟನೆಯರನ್ನ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಪಕರಾಗಿದ್ದ ಚಂದ್ರಶೇಖರ್ ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರ ಸಾವಿಗೆ ಕೋವಿಡ್ ಕಾರಣವಾಗಿದೆ. ಸಿನಿಕನ್ನಡದ ಜೊತೆ ಮಾತನಾಡಿದ ಮೃತರ ಅಳಿಯ ಸಾಯಿ ಅಶೋಕ್ ಅವರು ಈ ಮಾಹಿತಿಯನ್ನು ದೃಢೀಕರಿಸಿದ್ದಾರೆ.... Read more »
ಜನಪ್ರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ರಾಮುಕಣಗಾಲ್ ನಿಧನರಾಗಿದ್ದಾರೆ. ಅವರ ಸಾವಿಗೆ ಕೂಡ ಕೊರೊನ ವೈರಸ್ ಕಾರಣವಾಗಿರುವುದು ದುರಂತ ಎಂದೇ ಹೇಳಬಹುದು. ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿದ ರಾಮು ಕಣಗಾಲ್ ಅವರ ಅಕ್ಕನ ಮಗ ಕಾರ್ತಿಕ್ “ರಾಮು ಕಣಗಾಲ್ ಅವರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ... Read more »
ಕಳೆದ ಒಂದು ವಾರದ ಹಿಂದೆ ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ಕೋಟಿ ನಿರ್ಮಾಪಕ ರಾಮು ಇಂದು ಸಂಜೆ ನಿಧನರಾಗಿದ್ದಾರೆ. ಅದರೊಂದಿಗೆ ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕಿನಿಂದ ಸಾವಿಗೊಳಗಾಗುತ್ತಿರುವವರ ಪಟ್ಟಿಗೆ ರಾಮು ಅವರು ಕೂಡ ಸೇರಿದ್ದಾರೆ. ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಾಮು... Read more »