
ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ವಂಶಪಾರಂಪರ್ಯದಲ್ಲಿ ಬಂದು ಸ್ಟಾರ್ ಆಗಿರುವವರ ಮೇಲೆ ಸಿನಿ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದಾರೆ! ಅದಕ್ಕೆ ಪೂರಕವಾಗಿ ಸುಶಾಂತ್ ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸದ ಉದ್ಯಮದ ಸ್ಟಾರ್ ಗಳು ಇನ್ನಷ್ಟು ಕೆಂಗಣ್ಣಿಗೆ ಗುರಿಯಾಗಿದ್ದರು. ಅದರಲ್ಲಿ ಮುಖೇಶ್... Read more »

ನಟ, ಸಾಹಿತಿ ಶೇಖರ ಭಂಡಾರಿ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಕೋವಿಡ್ ಬಾಧಿತರಾಗಿ ಸಾವನ್ನಪ್ಪಿದ ಕಲಾವಿದ ಹುಲಿವಾನ್ ಗಂಗಾಧರಯ್ಯ ಅವರ ಬಳಿಕ ಕನ್ನಡ ಸಿನಿಮಾ ಲೋಕದಿಂದ ಕೊರೊನಾದಿಂದಾಗಿ ಸಾವು ಕಾಣುತ್ತಿರುವ ಮತ್ತೋರ್ವ ನಟ ಇವರಾಗಿದ್ದಾರೆ. ಶೇಖರ ಭಂಡಾರಿಯವರು ಕಾರ್ಕಳ ಘಟ್ಟದ ಮನೆ ಬಾಬು ಭಂಡಾರಿ ಮತ್ತು ಅಭಯಾ... Read more »

ಕಳೆದ ವರ್ಷಾರಂಭದಲ್ಲೇ ತೆರೆಕಂಡು ವರ್ಷಪೂರ್ತಿ ಸುದ್ದಿಯಲ್ಲಿದ್ದ ಸಿನಿಮಾ `ಬೆಲ್ ಬಾಟಂ’. ಎಂಬತ್ತರ ದಶಕದಲ್ಲಿ ಹಳ್ಳಿಯೊಂದರಲ್ಲಿ ನಡೆಯುವ ಕಳ್ಳತನದ ಘಟನೆಯನ್ನು ಆಧಾರವಾಗಿಸಿದ ಚಿತ್ರದ ಪ್ರಮುಖ ಆಕರ್ಷಣೆ ನಾಯಕ ರಿಷಭ್ ಶೆಟ್ಟಿ ಮತ್ತು ರೆಟ್ರೋ ಕಾಲದ ಮೇಕಿಂಗ್ ಆಗಿತ್ತು. ಕನ್ನಡದ ಉತ್ತಮ, ಸಭ್ಯ ಚಿತ್ರಗಳ ನಿರ್ದೇಶಕ ಎಂದು... Read more »

‘ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸುಗಳ ಅಂತರಂಗದ ಚಳವಳಿ’ ಎನ್ನುವ ವಾಕ್ಯದ ಕೊನೆಯಲ್ಲಿ ವಿವೇಕಾನಂದ ಹೆಚ್.ಕೆ ಎನ್ನುವ ಹೆಸರು! ಇಂಥದೊಂದು ಅಂಕಿತದೊಂದಿಗೆ ಕಳೆದ ಐದು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಲೇಖನಗಳಿಗೆ ಲೆಕ್ಕವಿಲ್ಲ. ನಿತ್ಯವೂ ಒಂದು ಪ್ರಚಲಿತ ವಿದ್ಯಮಾನವನ್ನೆತ್ತಿಕೊಂಡು... Read more »

ಜನಪ್ರಿಯ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರುಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ವಿಶ್ವದಲ್ಲೇ ಹರಡಿರುವ ಕೊರೊನಾ ಇದೀಗ ನಮ್ಮ ದೇಶದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದು, ಇತ್ತೀಚೆಗೆ ಮನೆಯಲ್ಲೇ ಇರುವ ಖ್ಯಾತನಾಮರೂ ಕೂಡ ಸೋಂಕಿಗೊಳಗಾಗಿ ಸುದ್ದಿಗೆ ಗ್ರಾಸವಾಗುತ್ತಿರುವುದು ವಿಶೇಷ. ತಮಗೆ ಆಗಿರುವ ವೈರಸ್ ಅಟ್ಯಾಕ್ ಬಗ್ಗೆ ಸ್ವತಃ ಎಸ್.ಪಿ... Read more »

ಇಂದು ಬೆಳಗ್ಗಿನಿಂದ ಎಲ್ಲ ಕಡೆ ಶ್ರೀರಾಮಚಂದ್ರ ದೇವರ ಚಿತ್ರಗಳೇ ರಾರಾಜಿಸುತ್ತಿದ್ದವು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದರ ಸಹಜ ಖುಷಿಯನ್ನು ಜನಗಳು ಹೀಗೆ ವ್ಯಕ್ತಪಡಿಸುತ್ತಿದ್ದರು. ಆದರೆ ಕೆಲವರು ತಮ್ಮ ಕಲಾಕೃತಿಯನ್ನು ಮೋದಿಗೆ ಸಮರ್ಪಿಸುವ ಭರದಲ್ಲಿ ಶ್ರಿರಾಮನನ್ನೇ ಮೋದಿ ಕೈ ಹಿಡಿದು ಕರೆದೊಯ್ಯುವಂಥ ಅರ್ಥಹೀನ ಚಿತ್ರಗಳನ್ನು ನೋಡಿ... Read more »

ದುನಿಯಾ ವಿಜಯ್ ನಟನೆಯ ಸಲಗ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಲಾಕ್ಡೌನ್ ಮತ್ತು ಚಿತ್ರ ಮಂದಿರಗಳ ಮುಚ್ಚುವಿಕೆಯಿಂದ ಬಿಡುಗಡೆಗೆ ಕಾಯುತ್ತಿರುವ `ಸಲಗ’ ತಂಡ ಕೊರೊನಾ ಕಾಟದಿಂದ ಸರ್ವರಿಗೂ ಆದಷ್ಟು ಬೇಗ ಮುಕ್ತಿ ಸಿಗಲೆಂದು ದೇವರ ಮೊರೆ ಹೋಗಿದೆ. ಇಂದು ಬೆಳಿಗ್ಗೆ ಗವಿಪುರಂ... Read more »

ಒರಟ ಖ್ಯಾತಿಯ ಪ್ರಶಾಂತ್ ಸುದ್ದಿಯಲ್ಲಿದ್ದಾರೆ. ಅದು ಕೂಡ ಒರಟ ಚಿತ್ರಕ್ಕೆ ಸಂಬಂಧಿಸಿದ ಹಾಗೆಯೇ ಎನ್ನುವುದು ವಿಶೇಷ. ಇದರ ನಡುವೆ ಒಂದಷ್ಟು ಕಾಲ ಸುದ್ದಿಯೇ ಇರಲಿಲ್ಲ ಯಾಕೆ ಎಂದು ಅವರನ್ನೇ ಪ್ರಶ್ನಿಸಿದಾಗ ಸಿನಿಕನ್ನಡ.ಕಾಮ್ ಗೆ ಅವರು ನೀಡಿರುವ ಉತ್ತರ ಇಲ್ಲಿದೆ. “ಸುಮ್ಸುಮ್ನೇ ನಮ್ಮ ಸುದ್ದಿ ಚಾಲ್ತಿಯಲ್ಲಿರಬೇಕು... Read more »

ಇವರನ್ನು ಕಂಡರೆ ಉರ್ಕೊಳ್ಳೋರು ಒಬ್ರೋ ಇಬ್ರೋ ಇರಬಹುದು. ಆದರೆ ಊರು ತುಂಬ ಅಣ್ತಮ್ಮನಂಥ ಫ್ರೆಂಡ್ಸು, ಫ್ಯಾನ್ಸು. ಮನೆಯೊಳಗೊಬ್ಬ ಒಡಹುಟ್ಟಿದ ಮುದ್ದಿನ ತಂಗಿ. ಸಹೋದರಿ ನಂದಿನಿಯ ಕೈಗಳಿಂದ ರಾಖಿ ಕಟ್ಟಿಸಿಕೊಳ್ಳದಿದ್ದರೆ ರಾಕಿ ಭಾಯ್ ಗೆ ಸಮಾಧಾನವೇ ಇಲ್ಲ. ಹಾಗಾಗಿಯೇ ಇಂದು ಕೂಡ ರಕ್ಷಾ ಬಂಧನಕ್ಕೆ ಸರಿಯಾಗಿ... Read more »

ಶಿವರಾಜ್ ಕುಮಾರ್ ಅವರಿಗೆ ಇಬ್ಬರು ತಂಗಿಯರು. ಅವರಲ್ಲಿ ಪೂರ್ಣಿಮಾ ರಾಮ್ ಕುಮಾರ್ ಅವರು ನಮ್ಮೊಂದಿಗೆ ಮಾತನಾಡಿದ್ದಾರೆ. ಅವರ ಇಬ್ಬರು ಮಕ್ಕಳು ಕೂಡ ಈ ವರ್ಷ ಚಿತ್ರರಂಗ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಒಂದು ರೀತಿಯಲ್ಲಿ ನೋಡಿದರೆ ಡಾ.ರಾಜ್ ಕುಮಾರ್ ಕುಟುಂಬದಿಂದ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ಮೊದಲ ಹೆಣ್ಣುಮಗಳು... Read more »

ಚಿತ್ರ ಮಂದಿರ ತೆರೆಯುವ ವಿಚಾರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಅವರು ಚಿತ್ರರಂಗದವರ ಹಿರಿಯರ ಜತೆಗೆ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಮಯ ನಿಗದಿಯಾಗಿದೆ. ಇಂದು ಶನಿವಾರ ನಾಗವಾರದ ಶಿವಣ್ಣನ ಮನೆಯಲ್ಲಿ ನಿರ್ಮಾಪಕರು ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಕಳೆದ ವಾರವಷ್ಟೇ... Read more »

ಚಾಲೆಂಜಿಂಗ್ ಸ್ಟಾರ್ ನಟನೆಯ ‘ರಾಬರ್ಟ್’ ಚಿತ್ರತಂಡ ಹೊಸ ಸಿನಿಮಾ ಸ್ಕ್ರಿಪ್ಟ್ ಪೂಜೆಯನ್ನು ಇಂದು ಬೆಳಿಗ್ಗೆ ಸರಳವಾಗಿ ನೆರವೇರಿಸಿದೆ. ತಮ್ಮ ಮುಂದಿನ ಸಿನಿಮಾ ದರ್ಶನ್ ಅವರ ನಾಯಕತ್ವದ ಐತಿಹಾಸಿಕ ಸಬ್ಜೆಕ್ಟ್ ಹೊಂದಿರುವ ಚಿತ್ರವಾಗಲಿದೆ ಎನ್ನುವುದನ್ನು ಈಗಾಗಲೇ ಘೋಷಿಸಿದ್ದ ನಿರ್ಮಾಪಕ ಉಮಾಪತಿಯವರು ಇದೀಗ ಅಧಿಕೃತವಾಗಿ ಸ್ಕ್ರಿಪ್ಟ್ ಪೂಜೆಯ... Read more »

ಯಲಹಂಕ ಸಮೀಪ ನಡೆದ ಅಪಘಾತದಲ್ಲಿ ಕನ್ನಡ ಚಿತ್ರರಂಗದ ಖ್ಯಾತನಾಮರ ಮಕ್ಕಳಿಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ. ನಟ, ನಿರ್ಮಾಪಕ ಜೈಜಗದೀಶ್ ಅವರ ಪುತ್ರಿ ಅರ್ಪಿತಾ ಮತ್ತು ಅವರ ಸಂಬಂಧಿಯೂ ಆಗಿರುವ ಮತ್ತೋರ್ವ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ರಿಷಿಕಾ ಸಿಂಗ್ ಕಾರಿನಲ್ಲಿದ್ದಿದ್ದು... Read more »

ಕನ್ನಡ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ಡಾ.ಶಿವರಾಜ್ ಕುಮಾರ್ ನೇತೃತ್ವದಲ್ಲಿ ಮನವಿ ನೀಡಲಿರುವ ವಿಚಾರ ನಿಮಗೆಲ್ಲ ಗೊತ್ತಿದೆ. ಆದರೆ ಇದೀಗ ಶಿವಣ್ಣನ ಮುಂದಾಳುತ್ವದಲ್ಲಿ ಅವರ ಸ್ವಗೃಹದಲ್ಲಿ ನಡೆದ ಸಭೆಯಲ್ಲಿ ಚಿತ್ರರಂಗದ ಎಲ್ಲ ತಾರೆಯರು ಭಾಗಿಯಾಗಿ ಚರ್ಚೆ ನಡೆಸಿದ ಘಟನೆ ಇಂದು ನಡೆದಿದೆ.... Read more »

ಯುವ ನಿರ್ದೇಶಕ ಹೇಮಂತ್ ನಾಯ್ಕ್ (28)ಆತ್ಮಹತ್ಯೆಗೆ ಶರಣಾಗಿದ್ದಾರೆ. ‘ಧರ್ಮಪುರ' ಮತ್ತು 'ದಾರಿದೀಪ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಚಿತ್ರದುರ್ಗದ ಹೊಳಲ್ಕೆರೆಯ ವಾಸಿಯಾಗಿರುವ ಇವರು ಇಂದು, ಮಂಗಳವಾರ ಸಂಜೆ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಈ ಸಾವಿಗೆ ಸಾಂಸಾರಿಕ ಘಟನೆಗಳ ಹಿನ್ನೆಲೆ ಇದೆ ಎನ್ನಲಾಗಿದೆ.... Read more »

ಪತ್ರಕರ್ತ ಚೇತನ್ ನಾಡಿಗೇರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬರಹ ಇದು. ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನ ಮತ್ತು ಚಿತ್ರ ಬದುಕಿನ ಶೈಲಿಯಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಯ ಸಣ್ಣದೊಂದು ಅವಲೋಕನ. ಕಳೆದ ನಾಲ್ಕು ತಿಂಗಳುಗಳಿಂದ ಚಿತ್ರೀಕರಣ ಚಟುವಟಿಕೆಗಳು, ಚಿತ್ರ ಪ್ರದರ್ಶನ ಎಲ್ಲವೂ... Read more »

ಶೀರ್ಷಿಕೆ ನೋಡಿ ಕೆ.ಎಸ್ ಚಿತ್ರಾ ಅವರು ಯಾರ ಗುಂಗಲ್ಲಿದ್ದಾರೆ ಎಂದು ಚಿಂತಿಸಬೇಡಿ. ಇದು ನಾವೆಲ್ಲ ಅವರ ಹಾಡುಗಳ ಗುಂಗಲ್ಲಿರುವ ವಿಚಾರ! ಇಂದು ಅವರ 57ನೇ ವರ್ಷದ ಜನ್ಮದಿನ. ಈ ಸಂದರ್ಭದಲ್ಲಿ ಕನ್ನಡ ಇಬ್ಬರು ಪ್ರತಿಭಾವಂತೆಯರು ಚಿತ್ರಾ ಅವರ ಹಾಡಿನ ಜತೆಗೆ ತಮಗಿರುವ ಸಂಬಂಧವನ್ನು ಸಿನಿಕನ್ನಡ.ಕಾಮ್... Read more »

ಕ್ರೇಜಿಸ್ಟಾರ್ ಗೆ ಕೆಜೆ ಏಸುದಾಸ್, ಉಪ್ಪಿಗೆ ಉದಿತ್ ನಾರಾಯಣ್, ಗೋಲ್ಡನ್ ಸ್ಟಾರ್ ಗೆ ಸೋನು ನಿಗಮ್ ಹೀಗೆ ಕೆಲವೊಂದು ಕಾಂಬಿನೇಶನ್ ಗೀತೆಗಳು ಸುಪರ್ ಹಿಟ್ ಆಗುತ್ತವೆ. ಆ ನಿಟ್ಟಿನಲ್ಲಿ ದುನಿಯಾ ವಿಜಯ್ ಗೆ ಹೊಂದುವ ಕಂಠ ಅಂದರೆ ಅದು ನವೀನ್ ಸಜ್ಜು ಅವರದು. ಇಂದು... Read more »

ಕೊರೊನಾ ವೈರಸ್ ಗೆ ಔಷಧಿ ವಿಶ್ವದಲ್ಲೇ ಇಲ್ಲ. ಆದರೆ ಈ ಕೊರೊನಾದಿಂದ ಉಂಟಾದ ಜನಸಾಮಾನ್ಯರ ಆರ್ಥಿಕ ಸಂಕಷ್ಟಗಳಿಗೆ ಭಾರತದಲ್ಲಿ ಪರಿಹಾರ ಎನ್ನುವುದೊಂದು ಇದ್ದರೆ ಅದು ನಟ ಸೋನು ಸೂದ್ ಮಾತ್ರ! ಯಾವುದೇ ಪ್ರದೇಶಕ್ಕೆ ಸೀಮಿತಗೊಳ್ಳದೆ, ಇಡೀ ದೇಶದ ಸಮಸ್ಯೆಗಳನ್ನು ಒಬ್ಬನೇ ಹೊತ್ತುಕೊಂಡು, ಖರ್ಚುವೆಚ್ಚದ ಬಗ್ಗೆ... Read more »

ಜನಪ್ರಿಯ ನಟ ಶರತ್ ಲೋಹಿತಾಶ್ವ ಫುಲ್ ಗರಂ ಆಗಿದ್ದಾರೆ. ಅದಕ್ಕೆ ಕಾರಣ ಅವರ ಭಾವಚಿತ್ರದ ದುರ್ಬಳಕೆ. ಅಂದಹಾಗೆ ಅವರ ಫೊಟೊವನ್ನು ಬಳಸಿರುವುದು ಒಂದು ಖಾಸಗಿ ಯೂಟ್ಯೂಬ್ ವಾಹಿನಿಯಲ್ಲಿ. ಅದು ಕೂಡ ನಿರೂಪಕಿ ಅನು ಶ್ರೀಯ ತಂದೆ ಎನ್ನುವ ಹೆಸರಿನಲ್ಲಿ. ಇಂದು ಬೆಳಿಬೆಳಿಗ್ಗೆ ಅವರೇ ಖುದ್ದಾಗಿ... Read more »