
ಮಹಾಲಕ್ಷ್ಮಿ ಅಂದರೆ ಕನ್ನಡ ಸಿನಿರಸಿಕರು ಮರೆಯಲಾಗದ ಮುಖ. ಅದರಲ್ಲಿಯೂ “ನೀ ಮುಡಿದ ಮಲ್ಲಿಗೆ ಹೂವಿನ ಗಂಧ ಕರೆತಂತು ಊರಿಂದ..” ಎಂದು ರವಿಚಂದ್ರನ್ ಹಾಡಿ ಕುಣಿದಾಗ ಸೀರೆಗಳ ನಡುವೆ ಮೆರೆದ ಸ್ವಾಭಿಮಾನದ ಚೆಲುವೆ ಎಲ್ಲರಿಗೂ ಇಷ್ಟವಾಗಿದ್ದರು. ಆದರೆ ವಿವಾಹದ ಬಳಿಕ ಬರೋಬ್ಬರಿ ಮೂರು ದಶಕಗಳ ಕಾಲ... Read more »

ನಾನು ನಿರ್ದೇಶಕರ ಜೊತೆಗೆ ಜಗಳ ಮಾಡಿಕೊಂಡು ಕನ್ನಡತಿ ಧಾರಾವಾಹಿಯನ್ನು ಬಿಡುತ್ತಿದ್ದೇನೆ ಎನ್ನುವ ಸುದ್ದಿ ಹರಡಲಾಗುತ್ತಿದೆ. ಇಷ್ಟಕ್ಕೆಲ್ಲ ಯೂಟ್ಯೂಬ್ ವಾಹಿನಿಯೊಂದು ಕಾರಣವಾಗಿದೆ. ಅವರು ನಾನು ಬೇರೊಂದು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವನ್ನು ತಿರುಚಿ ನಾನು ಕನ್ನಡತಿ ತೊರೆಯುತ್ತಿದ್ದೇನೆ ಎನ್ನುವ ಅರ್ಥದಲ್ಲಿ ಓದಿ ತಮ್ಮ ವ್ಯೂವ್ಸ್ ಹೆಚ್ಚಿಸಿಕೊಂಡಿದ್ದಾರೆ.... Read more »

ಡಾ.ರಾಜ್ ಕುಮಾರ್ ಅವರ ಕುಟುಂಬದ ಚಿತ್ರಗಳನ್ನು ಒಳಗೊಂಡಿರುವ ಕ್ಯಾಲೆಂಡರ್ ಅದು. `ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಸೇನಾಸಮಿತಿ’ಯವರು ತಯಾರಿಸಿರುವಂಥ ನೂತನ ವರ್ಷದ ಕ್ಯಾಲೆಂಡರ್ ಅನ್ನು ಡೈನಾಮಿಕ್ ಹೀರೋ ದೇವರಾಜ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಈ ವರ್ಷ ಮಾಡಿದ ಮೊದಲ ಪುಣ್ಯದ ಕೆಲಸ ಎಂದರೆ... Read more »

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 3’ ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಜಯಶ್ರೀ ಕಳೆದ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದಿದ್ದ ಜಯಶ್ರೀ ರಾಮಯ್ಯ ಕಲಾವಿದೆಯಾಗಿ ಮಾಲಾಶ್ರೀ ನಾಯಕಿಯಾಗಿದ್ದ ‘ಉಪ್ಪು ಹುಳಿ ಖಾರ’ ಸಿನಿಮಾದಲ್ಲಿ... Read more »

ನಮ್ ಟಾಕೀಸ್ ವೆಬ್ಸೈಟ್ ಖ್ಯಾತಿಯ ಭರತ್ ಸಾರಥ್ಯದಲ್ಲಿ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಕ್ರಿಕೆಟ್ ಮ್ಯಾಚ್ ಸ್ಪರ್ಧೆಯು ಈ ಬಾರಿ ಗಣರಾಜ್ಯೋತ್ಸವದ ದಿನ ನೆರವೇರಲಿದೆ. ಐದು ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಈ ಸ್ಪರ್ಧೆಯನ್ನು ಕಳೆದ ವರ್ಷ ಕೋವಿಡ್ ಕಾರಣದಿಂದ ನೆರವೇರಿಸಲು ಸಾಧ್ಯವಾಗಿಲ್ಲ. ಹಾಗಾಗಿಯೇ ಈ... Read more »

ಕಳೆದ ವರ್ಷದಿಂದ ನಟ ಕಿಚ್ಚ ಸುದೀಪ್ ಅಭಿಮಾನಿಗಳು ಅಭಿಮಾನದಿಂದ ನಿರೀಕ್ಷಿಸುತ್ತಿರುವ ಚಿತ್ರ ಫ್ಯಾಂಟಂ'. ಕೊರೊನಾ ಬಳಿಕ ಮೊದಲು ಚಿತ್ರೀಕರಣ ಶುರು ಮಾಡಿದ ಕೀರ್ತಿಗೆ ಪಾತ್ರವಾಗಿದ್ದಂಥ ಸಿನಿಮಾಕ್ಕೆ ಇದೀಗ ಹೊಸ ಹೆಸರಿಡಲಾಗಿದೆ. ಚಿತ್ರದ ನಾಯಕ ಸುದೀಪ್ ಅವರಿಗೆ ಈಗಾಗಲೇ ಚಿತ್ರದಲ್ಲಿ ಇರಿಸಲಾಗಿರುವ ಹೆಸರನ್ನೇ ಚಿತ್ರಕ್ಕೂ ಇಡಲಾಗಿದೆ.... Read more »

ರಾಜು ದೇವಸಂದ್ರ ಅವರ ನಿರ್ದೇಶನದ ಮೂರನೇ ಚಿತ್ರ ಕತ್ಲೆಕಾಡು. ಈ ಹಿಂದೆ ಅಕ್ಷತೆ' ಮತ್ತುಗೋಸಿಗ್ಯಾಂಗ್’ ಎನ್ನುವ ಚಿತ್ರವನ್ನು ನಿರ್ದೇಶಿಸಿರುವ ಅವರು ಪ್ರಸ್ತುತ ಸೆಕೆಂಡ್ ಲೈಫ್' ಎನ್ನುವ ತಮ್ಮ ನಾಲ್ಕನೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಅದರ ಗ್ಯಾಪ್ ನಲ್ಲಿ ಹೊರತಂದಿರುವಕತ್ಲೆಕಾಡು’ ಒಂದು ರೀತಿ... Read more »

ನಿರ್ದೇಶಿಸಿದ ಪ್ರಥಮ ಚಿತ್ರದಲ್ಲೇ ಕನ್ನಡಕ್ಕೊಬ್ಬ ಸ್ಟಾರ್ ನ ನೀಡಿದವರು ದುನಿಯಾ ಸೂರಿ. ಇತ್ತೀಚೆಗಷ್ಟೇ ಅವರದೇ ನಿರ್ದೇಶನದ `ಬ್ಯಾಡ್ಮ್ಯಾನರ್ಸ್’ನ ಮುಹೂರ್ತ ನೆರವೇರಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರದ ಪೂಜೆ ನಡೆದಾಗ ನಿರ್ದೇಶಕ ಸೂರಿ, ನಾಯಕ ಅಭಿಷೇಕ್, ಸುಮಲತಾ ಅಂಬರೀಷ್, ನಿರ್ಮಾಪಕ ಕೆ.ಎಂ ಸುಧೀರ್ , ಛಾಯಾಗ್ರಹಕ... Read more »

ದಶಕಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾಡಲು ಹೊರಟಿದ್ದ ಚಿತ್ರದ ಹೆಸರು ಚಂದಮಾಮ. ಇದೀಗ ಅವರ ಕಟ್ಟಾ ಅಭಿಮಾನಿಯೋರ್ವರು ಅದೇ ಹೆಸರಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಅವರೇ ಮಧು ವೈ.ಜಿ ಹಳ್ಳಿ. ಅಂದಹಾಗೆ ಇವರ ಚಂದಮಾಮನಿಗೂ ರವಿಚಂದ್ರನ್ ಮಾಡಲು ಬಯಸಿದ್ದ ಕತೆಗೂ ಸಂಬಂಧವಿಲ್ಲ. ಇದು ಒಂದು... Read more »

ಶ್ರೇಷ್ಠ ನಿರ್ದೇಶಕರಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡಿರುವ ರಿಷಬ್ ಶೆಟ್ಟಿ ಇದೀಗ ತಾವು ‘ಹೀರೋ' ಎಂದು ಸಾಬೀತು ಮಾಡಲು ತಯಾರಾಗಿದ್ದಾರೆ. ಚಿತ್ರದಲ್ಲಿ ಹೆಸರಿಗೆ ತಕ್ಕಂತೆ ರಿಷಬ್ ನಾಯಕ ಮತ್ತು ಮತ್ತು ನಿರ್ಮಾಪಕ ಮಾತ್ರ. ಈ ಹಿಂದೆಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ರಿಷಬ್... Read more »

ಆರುವಾರಗಳಲ್ಲಿ ಮೈಕಾಂತಿ ಗಣನೀಯ ಎನ್ನುವ ಜಾಹೀರಾತು ನೋಡಿ ಮೈ ಬಣ್ಣ ಬದಲಾಯಿಸಲು ಮನಸೋಲುವವರು ನಾವು. ಬಿಳಿ ಬಣ್ಣವನ್ನೇ ಸೌಂದರ್ಯ ಎಂದು ನಂಬಿರುವ ನಮ್ಮ ಮನಸ್ಥಿತಿಯೇ ವರ್ಣಭೇದಕ್ಕೆ ಪ್ರಮುಖ ಕಾರಣ. ಇಂಥ ಕಾಲಘಟ್ಟದಲ್ಲಿ ಬಣ್ಣಕ್ಕೆ ಮಾರುಹೋಗದ, ಮೈಕಾಂತಿಗಿಂತ ಮನದ ನೀತಿ ಮುಖ್ಯ ಎಂದು ಎನ್ನುವ ನಾಯಕಿಯನ್ನು... Read more »

ಸುದೀಪ್ ಅಭಿಮಾನಿಗಳ ಕ್ರಿಕೆಟ್ ಹಬ್ಬ ಇದು. ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ `ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್’. ಅಭಿಮಾನಿಗಳಿಂದ ಅಭಿಮಾನಿಗಳಿಗೋಸ್ಕರ ಎನ್ನುವ ಟ್ಯಾಗ್ ಲೈನಲ್ಲಿ ನಡೆಯುವ ಈ ಕ್ರಿಕೆಟ್ ಟೂರ್ನಮೆಂಟ್ ಅನ್ನು ಭಾರತ ಸರ್ಕಾರದ ಕೊವೀಡ್-19 ನಿಯಮಗಳ ಅಡಿಯಲ್ಲಿ ಆಯೋಜಿಸಲಾಗಿದೆ. ಡಿಸೆಂಬರ್ 25... Read more »

ಯುವ ನಿರ್ದೇಶಕ ಭರತ್ ನಿಧನರಾಗಿದ್ದಾರೆ. ಹಲವಾರು ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆಯಲ್ಲಿದ್ದ ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ತಿಳಿದುಬಂದಿದೆ. ಶ್ರೀ ಮುರಳಿಯ ವೃತ್ತಿ ಬದುಕಿನಲ್ಲಿ ಗಮನಾರ್ಹ ಚಿತ್ರವಾದ ‘ಕಂಠಿ' ಸೇರಿದಂತೆ ರವಿಚಂದ್ರನ್ ಪುತ್ರ ಮನೋರಂಜನ್ ಅವರ ಪ್ರಥಮ ಚಿತ್ರ ‘ಸಾಹೇಬ’ಕ್ಕೂ ಅವರೇ ನಿರ್ದೇಶಕರಾಗಿದ್ದರು. ಕಳೆದ... Read more »

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುವಿನಲ್ಲಿದ್ದಾರೆ. ಹಾಗಾಗಿ ಕಳೆದ ಸೋಮವಾರ ಅವರು ತಮ್ಮ ತಂದೆಯ ಊರಾದ ಗಾಜನೂರಿಗೆ ಹೋಗಿದ್ದಾರೆ. ಇದೀಗ ಅಲ್ಲಿ ಅವರು ತಂದೆಯ ಮಾದರಿಯಲ್ಲೇ ತೆಗೆಸಿಕೊಂಡಿರುವ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. Read more »

ದಕ್ಷಿಣ ಭಾರತದ ಜನಪ್ರಿಯ ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ. ಪುತ್ರಿಯ ವಿವಾಹ ಇದೇ ತಿಂಗಳಲ್ಲಿ ನೆರವೇರಲಿದ್ದು ಸಂಭ್ರಮ ವಿಶೇಷಗಳ ಬಗ್ಗೆ ಮಾತನಾಡಿದ್ದಾರೆ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕ ಅವರ ವಿವಾಹವು ಅಕ್ಷಯ್ ಎನ್ನುವ ವರನೊಂದಿಗೆ ಇದೇ ತಿಂಗಳ... Read more »

ಕನ್ನಡ ಚಿತ್ರರಂಗದ ಜನಪ್ರಿಯ ಸಾಹಿತಿ, ಹಿರಿಯ ಜೀವ ಭಂಗೀರಂಗ ಅವರು ಸಂಕಷ್ಟದಲ್ಲಿದ್ದಾರೆ.ಅದನ್ನು ಸ್ವತಃ ಜನಪ್ರಿಯ ನಟ ಸಂಚಾರಿ ವಿಜಯ್ ಅವರು ಅರಿತುಕೊಂಡಿದ್ದಾರೆ. ಅವರ ಮನೆಗೆ ಹೋಗಿ, ಭೇಟಿಯಾಗಿ ಅರಿತಿರುವ ಮಾಹಿತಿಗಳನ್ನು ಸ್ವತಃ ವಿಜಯ್ ಅವರೇ ಇಲ್ಲಿ ನೀಡಿದ್ದಾರೆ. ‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ’, ‘ರಂಭೆ... Read more »

ಮೊದಲೇ ಚಿತ್ರರಂಗ ದೊಡ್ಡ ನಷ್ಟದಲ್ಲಿದೆ. ತಯಾರಾದ ಸಿನಿಮಾಗಳನ್ನು ಬಿಡುಗಡೆ ಮಾಡಲಾಗದೆ ನಿರ್ಮಾಪಕರು, ಬಡ್ಡಿಗೆ ಸಾಲ ತೆಗೆದುಕೊಂಡವರು ಥಿಯೇಟರ್ ಯಾವಾಗ ಯಥಾಸ್ಥಿತಿಗೆ ತಲುಪಲಿದೆ ಎನ್ನುವ ಕಾಯುವಿಕೆಯಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಅನಿಮಲ್ ವೆಲ್ಫೇರ್ ಸರ್ಟಿಫಿಕೇಟ್ ಬೋರ್ಡ್ ಮೂಲಕ ಸರ್ಕಾರ ಗಾಯದ ಮೇಲೆ ಬರೆ ಎಳೆಯುವ ಕ್ರಮಕ್ಕೆ ಮುಂದಾಗಿದೆ.... Read more »

ಕೇರಳದ ಮಲಪ್ಪುರಂ ಜಿಲ್ಲೆಯ ನಾರಣಿಪುಳ ಶಾನವಾಜ್ ಬುಧವಾರ ರಾತ್ರಿ 10.20ಕ್ಕೆ ನಿಧನರಾಗಿದ್ದಾರೆ. ಸುಮಾರು ರಾತ್ರಿ 9.30ರ ಸುಮಾರಿಗೆ ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ಆಸ್ಪತ್ರಗೆ ಬರಲು ಎರಡೂವರೆ ಗಂಟೆ ಕಾಲಾವಧಿಯ ಆಂಬುಲೆನ್ಸ್ ಪ್ರಯಾಣ ಮಾಡಲಾಗಿತ್ತು. ಕೊಯಂಬತ್ತೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಶಹನವಾಜ್‌ರನ್ನು... Read more »

ನವ ನಿರ್ದೇಶಕ ಸಂದೇಶ್ ಕೃಷ್ಣಮೂರ್ತಿನಿರ್ದೇಶನದ ಚಿತ್ರ `ಅವನಲ್ಲಿ ಇವಳಿಲ್ಲಿ’ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಸಂದೇಶ್ ಕೃಷ್ಣಮೂರ್ತಿಯವರು ತಮ್ಮ ಹೆಸರಿಗೆ ತಕ್ಕಂತೆ ಚಿತ್ರದಲ್ಲೊಂದು ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ. ಅದರ ಜೊತೆಗೆ ಇದೊಂದು ಲವ್-ಆಕ್ಷನ್ ಡ್ರಾಮ ಆಗಿದ್ದು ಪ್ರೇಕ್ಷಕರನ್ನು ಸೆಳೆಯುವುದೆಂಬ ನಿರೀಕ್ಷೆ ಅವರಲ್ಲಿದೆ.... Read more »

ಸಮುದಾಯ ಬೆಂಗಳೂರು ಇದರ ನೂತನ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಕಾವ್ಯಾ ಅಚ್ಯುತ್ ಆಯ್ಕೆಯಾಗಿದ್ದಾರೆ. ‘ಸಮುದಾಯ’ ಬೆಂಗಳೂರು ಇದರ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಖ್ಯಾತ ಸಾಮಾಜಿಕ ಕಾರ್ಯಕರ್ತೆ, ರಂಗನಟಿ ಕಾವ್ಯ ಅಚ್ಯುತ್ ಆಯ್ಕೆಯಾಗಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಬಹುಮುಖ್ಯ ಪಾತ್ರ ವಹಿಸಿದ... Read more »

ಯುವ ನಟ ಆದರ್ಶ್ ಗುಂಡುರಾಜ್ ಮತ್ತು ಸಿಂಧೂ ರಾವ್ ವಿವಾಹದ ದೃಶ್ಯಾವಳಿ ಚಿತ್ರೀಕರಣವಾಗಿದೆ. ಲಾಕ್ಡೌನ್ ಬಳಿಕ ಸದ್ದಿಲ್ಲದೆ ನಡೆಯುತ್ತಿರುವ ವಿವಾಹದ ಪಟ್ಟಿಯಲ್ಲಿ ಈ ಯುವತಾರೆಯರ ಮದುವೆಯೂ ಸೇರಿಕೊಂಡಿದೆ. ಪರಿಸ್ಥಿತಿಗೆ ತಕ್ಕಂತೆ ಯಾವುದೇ ಅದ್ಧೂರಿತನವಿಲ್ಲದೆ ಸರಳವಾಗಿಯೇ ನೆರವೇರಿದೆ. ಅಂದಹಾಗೆ ಇವರಿಬ್ಬರು ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ... Read more »