ಛಾಯಾಗ್ರಾಹಕರಿಗೆ 5 ಲಕ್ಷ ನೀಡಲು ಮುಂದಾದ ತಾರಾ!

ದ್ಯಕ್ಕೆ ಚಿತ್ರನಟಿ ತಾರಾ ಅನುರಾಧ ಯಾವುದೇ ಸಿನಿಮಾ ನಿರ್ಮಾಣ ಮಾಡುತ್ತಿಲ್ಲ. ಆದರೂ ಅವರು ಛಾಯಾಗ್ರಾಹಕರಿಗೆ ಯಾಕೆ ದುಡ್ಡು ಕೊಡೋಕೆ ಹೋದರು ಎನ್ನುವ ಪ್ರಶ್ನೆ ಕಾಡಬಹುದು. ಹಾಗಂತ ತಮ್ಮ ಪತಿ ವೇಣು ಅವರ ಕೈಗೆ 5ಲಕ್ಷ ಕೊಟ್ಟ ವಿಚಾರವೂ ಇದಲ್ಲ. ಇದು ಛಾಯಾಗ್ರಾಹಕರ ಸಂಘಕ್ಕೆ ಕೊಟ್ಟಂಥ ಸಂಗತಿ.

Thara.jpg

ಹಿರಿಯ ಛಾಯಾಗ್ರಾಹಕ ಜಿಜೆ ಕೃಷ್ಣ ಕರ್ನಾಟಕ ಸಿನಿಮಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಮೇಲೆ ತಂಡಕ್ಕೆ ಹೊಸ ಹುಮ್ಮಸ್ಸು ತುಂಬುತ್ತಿದ್ದಾರೆ. ಅಸೋಸಿಯೇಷನ್ ಮೂಲಕ ಛಾಯಾಗ್ರಾಹಕರ ಶಕ್ತಿ, ಬಾಂಧವ್ಯದ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅದರ ಸೂಚನೆಯಾಗಿ `ಸಿನಿ-35’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಫೆಬ್ರವರಿ 19ರಂದು ಅದ್ಧೂರಿಯಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ 100 ಮಂದಿ ಛಾಯಾಗ್ರಾಹಕರು ಒಂದೇ ಪ್ರೋಮೋ ಶೂಟ್ ಗಾಗಿ ಕ್ಯಾಮೆರಾ ಹಿಡಿಯುವ ಮೂಲಕ ದಾಖಲೆ ಬರೆಯಲಿದ್ದಾರೆ. ಇಂಥದೊಂದು ಕಾರ್ಯಕ್ರಮದಲ್ಲಿ ತೆರೆಯ ಹಿಂದಿನ ತಂತ್ರಜ್ಞರ ಹಿಂದೆ ಬೆಂಬಲವಾಗಿರುವವರನ್ನು ಕೂಡ ಭಾಗಿ ಮಾಡಲೇಬೇಕು ಎಂದು ತೀರ್ಮಾನಿಸಿದ್ದಾರೆ

ಜಿಜೆ ಕೃಷ್ಣ. ಹಾಗಾಗಿ ಛಾಯಾಗ್ರಾಹಕರ ಪತ್ನಿ ಮಕ್ಕಳನ್ನು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದ್ದು ಅವರೆಲ್ಲರಿಗೂ ಬಾಗಿನ ಕೊಟ್ಟು ಸನ್ಮಾನಿಸುವ ಕನಸು ಕಂಡಿದ್ದಾರೆ. ಇದರ ಖರ್ಚಿನ ಬಗ್ಗೆ ತಾರಾ ಅವರಲ್ಲಿ ಮಾತನಾಡಿದಾಗ ಅವರು ಖುದ್ದು 5ಲಕ್ಷನೀಡುವುದಾಗಿ ಹೇಳಿದರಂತೆ. ಆದರೆ ಆ ರೀತಿ ಕ್ಯಾಶ್ ನೀಡುವ ಬದಲು ಬಾಗಿನದ ಉಸ್ತುವಾರಿ ತಾವೇ ವಹಿಸಿಕೊಳ್ಳಿ ಎಂದಿದ್ದಾರೆ ಕೃಷ್ಣ. ಜತೆಗೆ ಪುನೀತ್, ಶಿವರಾಜ್ ಕುಮಾರ್, ಉಮಾಶ್ರೀ ಸೇರಿದಂತೆ ಕಲಾವಿದರೆಲ್ಲರೂ ಒಬ್ಬೊಬ್ಬರಾಗಿ ತಮ್ಮ ಬೆಂಬಲ ಘೋಷಿಸುತ್ತಿದ್ದಾರಂತೆ. ತಾರಾ ಅವರ ಈ ಕಾಳಜಿಯಲ್ಲಿ ಚಿತ್ರರಂಗದ ಮೇಲಿನ ಕೃತಜ್ಞತೆ ಜತೆಯಲ್ಲೇ ಛಾಯಾಗ್ರಾಹಕರಾಗಿರುವ ತಮ್ಮ ಪತಿಯ ಮೇಲಿನ ಅಭಿಮಾನವೂ ಸೇರಿರುವುದು ಸಹಜ!

Recommended For You

Leave a Reply

error: Content is protected !!