ಬೆಂಗಳೂರಲ್ಲಿ ಇಮ್ತಿಯಾಜ್ ಇನಿ ದನಿ

ಕನ್ನಡದ ಗಜಲ್ ಪ್ರಕಾರದಲ್ಲಿ ಜನಪ್ರಿಯ ಪ್ರತಿಭೆ ಇಮ್ತಿಯಾಜ್ ಸುಲ್ತಾನ್. ಇದೇ ಮಾರ್ಚ್ 8ರಂದು ಬೆಂಗಳೂರಿಗರಿಗೆ ಅವರ ಗೀತೆಗಳಿಗೆ ತಲೆದೂಗುವ ಸದಾವಕಾಶ.

ಬನಶಂಕರಿಯ ಸುಚಿತ್ರಾ ಸಿನಿಮಾ ಕಲ್ಚರಲ್ ಅಕಾಡೆಮಿಯ ಸಭಾಭವನ ಇಮ್ತಿಯಾಜ್ ಸಂಗೀತಕ್ಕೆ ಸಾಕ್ಷಿಯಾಗಲಿದೆ. ‘ತ್ರಯಿ ಕಲ್ಚರಲ್ಸ್’ ವತಿಯಿಂದ ಮಾರ್ಚ್ 8ರ ಭಾನುವಾರದಂದು ‘ಗಜಲ್ ಸಂಜೆ’ಯ ಘಮ ಹರಡಲಿದೆ. ಗಜಲ್ ಗಾರುಡಿಗ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಇಮ್ತಿಯಾಜ್ ಸುಲ್ತಾನ್ ಅವರ ಅಭಿಮಾನಿಗಳ ಪಾಲಿಗೆ ಇದೊಂದು ಹಬ್ಬವಾಗಲಿದೆ. ಕನ್ನಡದ ಜತೆಯಲ್ಲೇ ಉರ್ದು ಗೀತೆಗಳೂ ಮಾರ್ದನಿಸಲಿವೆ.

ಕಾರ್ಯಕ್ರಮವು ಸಂಜೆ 4.45ರಿಂದ 6.30ರವರೆಗೆ ನೆರವೇರಲಿದೆ. ಸಂಗೀತಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಸಾಂಸ್ಕೃತಿಕ ಸಂಜೆಯನ್ನು ಯಶಸ್ವಿಗೊಳಿಸಬೇಕೆಂದು ತ್ರಯಿ ಕಲ್ಚರಲ್ಸ್ ವತಿಯಿಂದ ಮನವಿ ಮಾಡಲಾಗಿದೆ.

ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ಟಿಕೆಟ್ ಕೊಳ್ಳಬೇಕಾಗಿದ್ದು ಡಿಸ್ಟ್ರಿಕ್ಟ್ ಆ್ಯಪ್ ಮೂಲಕ ಬುಕ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯೋಜಕರ ಸಂಚಾರಿ ವಾಣಿ ಸಂಖ್ಯೆ 8618573964 ಕ್ಕೆ ಕರೆ ಮಾಡಬಹುದಾಗಿದೆ.

Recommended For You

Leave a Reply

error: Content is protected !!