ಧನ್ವೀರ್ ಎನ್ನುವ ಹೆಸರು ನೆನಪಾಗದವರಿಗೆ ಕೂಡ ‘ಬಜಾರ್’ ಎನ್ನುವ ಶೀರ್ಷಿಕೆ ಮರೆಯಲಾಗದು. ಯಾಕೆಂದರೆ ಚಿತ್ರದ ಮೂಲಕ ಧನ್ವೀರ್ ಎನ್ನುವ ಹೊಸ ಹೀರೋನನ್ನು ಸಿಂಪಲ್ ಸುನಿ ಪರಿಚಯಿಸಿದ್ದರು. ಬಜಾರ್ ನಿಂದ ಸಿಕ್ಕ ಹೆಸರು ಇದೀಗ ಬಂಪರ್ ಎನ್ನುವ ಚಿತ್ರದ ಮುಹೂರ್ತ ಸಮಾರಂಭದ ತನಕ ತಂದು ನಿಲ್ಲಿಸಿದೆ.
ಸಂಕ್ರಾಂತಿಯ ಸಂಭ್ರಮದಲ್ಲಿ ಬಂಡಿ ಮಹಾಕಾಳಿ ದೇವಾಲಯದಲ್ಲಿ ನಡೆದ ಮುಹೂರ್ತ ಸಮಾರಂಭದ ವೇಳೆ ಚಿತ್ರದ ವಿಶೇಷಗಳನ್ನು ಮಾಧ್ಯಮದೊಂದಿಗೆ ಹಂಚಿಕೊಳ್ಳಲಾಯಿತು.
ಇಲ್ಲಿ ನಾಯಕನ ಹೆಸರೇ ‘ಬಂಪರ್‘
ಧನ್ವೀರ್ ಎರಡು ವರ್ಷಗಳ ಬಳಿಕ ಮತ್ತೆ ಸಂಕ್ರಾಂತಿ ಹಬ್ಬದಂದೇ ಚಿತ್ರದ ಮುಹೂರ್ತ ಮಾಡಿಕೊಳ್ಳುತ್ತಿರುವುದಕ್ಕೆ ಖುಷಿ ಎಂದರು. ಫ್ಯಾಮಿಲಿ ಜತೆಗೆ ಲವ್ ಸ್ಟೋರಿ ಇರುವಂಥ ಚಿತ್ರ ಎಂದಷ್ಟೇ ಮಾಹಿತಿ ನೀಡಿದರು. ಬಳಿಕ ಮಾತನಾಡಿದ ನಿರ್ದೇಶಕ ಹರಿ ಸಂತೋಷ್ ‘ನಾವು ಎಷ್ಟೇ ಒಳ್ಳೆಯ ಚಿತ್ರದಲ್ಲಿ ನಾಯಕನ ಹೆಸರು ಬಾಲು. ಆದರೆ ಸ್ನೇಹಿತರ ಮೂಲಕ ‘ಬಂಪರ್’ ಎಂದು ಕರೆಸಲ್ಪಡುತ್ತಾನೆ. ಸದ್ಯಕ್ಕೆ ಹಾಗೆ ಥಿಂಕ್ ಮಾಡಿದ್ದೇವೆ. ಏನೇ ಕಲ್ಪನೆ ಮಾಡಿದರೂ, ಅವನ್ನೆಲ್ಲ ತೆರೆ ಮೇಲೆ ತರಲು ಸಿಗುವ ಅವಕಾಶ ಮುಖ್ಯ. ಪಕ್ಕ ಕಮರ್ಷಿಯಲ್ ಸಿನಿಮಾ.
ನಾಯಕ ಮನೆಗೊಬ್ಬ ಒಳ್ಳೆಯ ಮಗ ಹೇಗಿರುತ್ತಾನೆಯೋ ಅದೇ ರೀತಿ ಇರುತ್ತಾರೆ.
ಕಾಲೇಜ್ ಕುಮಾರ್ ತರಹ ಕಂಟೆಂಟ್ ಓರಿಯೆಂಟೆಡ್ ಕೂಡ ಮಾಡಿದ್ದೆ. ಇದರಲ್ಲಿ ಕಂಟೆಂಟ್ ಇರಿಸಿಕೊಂಡು ಕಮರ್ಷಿಯಲ್ ಆಗಿ ಹೇಳಿರುವ ಚಿತ್ರ. ಅಜನೀಶ್ ಲೋಕನಾಥ್ ಅವರ ಸಂಗೀತ ಇದೆ. ಸುಪ್ರೀತ್ ರಂಥ ನಿರ್ಮಾಪಕರು. ನಾಯಕಿ ಇನ್ನೂ ಡಿಸೈಡ್ ಮಾಡಿಲ್ಲ. ಪ್ರಶಾಂತ್ ರಾಜಪ್ಪ ಚಿತ್ರದ ಅವರ ಸಂಭಾಷಣೆ ಇದೆ. ಆದಷ್ಟು ಹಾಡುಗಳನ್ನು ನೈಜವಾಗಿ ಚಿತ್ರೀಕರಿಸಲಿದ್ದೇವೆ. ಜತೆಗೆ ಎರಡು ಹಾಡುಗಳು ಕಮರ್ಷಿಯಲ್ಲಾಗಿರುತ್ತವೆ. ನಾಯಕ ಮನೆಗೊಬ್ಬ ಒಳ್ಳೆಯ ಮಗ ಹೇಗಿರುತ್ತಾನೆಯೋ ಅದೇ ರೀತಿ ಇರುತ್ತಾರೆ ಎಂದರು. ಜತೆಗೆ ಇಂದು ತಮ್ಮ ಜನ್ಮದಿನವೂ ಆಗಿರುವ ಕಾರಣ ಸಂಭ್ರಮ ದುಪ್ಪಟ್ಟಾಗಿದೆ ಎಂದರು.
ನಿರ್ಮಾಪಕ ಸುಪ್ರೀತ್ ಮಾತನಾಡಿ, ನನ್ನ ನಿರ್ಮಾಣದಲ್ಲೇ ನಟಿಸಬೇಕು ಎನ್ನುವ ಕಾರಣದಿಂದ ತನ್ವೀರ್ ಅವರು ಬಜಾರ್ ಬಳಿಕ ಒಂದು ವರ್ಷದಷ್ಟು ಕಾದಿದ್ದಾರೆ. ಚಿತ್ರಕ್ಕೆ ಬೇಕಾದ ಬಂಡವಾಳ ಹಾಕಲು ಸನ್ನದ್ಧವಾಗಿರುವುದಾಗಿ ತಿಳಿಸಿದರು.