‘ಟ್ರೋಲ್ ಮಾಡಿ ಫೇಮಸ್ ಮಾಡಿ’ ಎಂದ ನಿಖಿಲ್!

ಚುನಾವಣೆ ಸಮಯದಲ್ಲಿ ನನ್ನ ಮೇಲೆ ಸಾಕಷ್ಟು ಟ್ರೋಲ್ ಮಾಡಲಾಯಿತು. ಆದರೆ ಅದರಿಂದ ನನಗೆ ಹೆಸರು ಜನಪ್ರಿಯತೆ ಬಂದಿರಬಹುದೇ ಹೊರತು ಬೇರೆ ಯಾವ ಪರಿಣಾಮ ಆಗಿಲ್ಲ.. ಎಂದು ನಿಖಿಲ್ ಕುಮಾರ ಸ್ವಾಮಿ ಹೇಳಿದ್ದಾರೆ. ಅವರು ಲಹರಿ ಸಂಸ್ಥೆಯ ನಿರ್ಮಾಣದಲ್ಲಿರುವ ತಮ್ಮ ನೂತನ ಸಿನಿಮಾದ ಮುಹೂರ್ತದ ವೇಳೆ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೀಗೆ ಹೇಳಿದರು.

“ಇತ್ತೀಚೆಗೆ ಟ್ರೋಲ್ ಮಾಡುವವರು ನನ್ನನ್ನು ಮರೆತಿದ್ದಾರೆ. ಯಾಕೋ ಗೊತ್ತಿಲ್ಲ.‌ ಮಾಡೋದು ಬಿಡೋದು ಅವರ ಸ್ವಾತಂತ್ರ್ಯ. ನಾನು ಯಾವತ್ತಿಗೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ನನ್ನ ಸಿನಿಮಾಗಿಂತ ರಾಜಕೀಯ ಜೀವನವೇ ಟ್ರೋಲಿಗರಿಗೆ ಆಸಕ್ತಿಯ ವಿಚಾರವಾಗಿದೆ. ಅದೇ ಕಾರಣಕ್ಕಾಗಿ ಸಿನಿಮಾ ಕೂಡ ಟ್ರೋಲ್ ಮಾಡಲಾಯಿತು. ಅದರಿಂದ ನಾನು ಪ್ರಚಾರ ಪಡೆದಿದ್ದೇನೆ ಎಂದು ಮಾತ್ರ ಗೊತ್ತು “ಎಂದು ನಿಖಿಲ್ ನಕ್ಕರು.

‘ಪೈಲ್ವಾನ್’ ನೋಡಿ ಸ್ಪೂರ್ತಿ ಪಡೆದೆ!

ಹೊಸ ಚಿತ್ರದಲ್ಲಿ ನಾನು ಬಾಸ್ಕೆಟ್ ಬಾಲ್ ಪ್ಲೇಯರಾಗಿ ಕಾಣಿಸುತ್ತಿದ್ದೇನೆ. ಅದಕ್ಕೆ ವಿಶೇಷ ಕಾರಣಗಳೇನೂ ಇಲ್ಲ. ಬಾಸ್ಕೆಟ್ ಬಾಲ್ ಮೊದಲಿಂದಲೂ ನನಗೆ ಗೊತ್ತು. ಆದರೆ ಸಿನಿಮಾದಲ್ಲಿ ಅಂಥದೊಂದು‌ ಸಬ್ಜೆಕ್ಟ್ ಆಯ್ಕೆ ಮಾಡಲು ಕಾರಣ, ಪ್ರೇಕ್ಷಕರಿಗೂ ವೆರೈಟಿ ಆಗಿ ಕಾಣಿಸಬೇಕು ಎನ್ನುವುದಾಗಿತ್ತು. ಇತ್ತೀಚೆಗೆ ಪೈಲ್ವಾನ್ ಸಿನಿಮಾ ನೋಡಿದೆ. ಅವರು ವಿಭಿನ್ನತೆಗಾಗಿ ಅಂಥದೊಂದು ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಅದು ಕೂಡ ವೈವಿಧ್ಯತೆಯ ಆಯ್ಕೆಗೆ ಸ್ಪೂರ್ತಿ ಎಂದರು.

Recommended For You

Leave a Reply

error: Content is protected !!
%d bloggers like this: