ದಾರಿ ಯಾವುದಯ್ಯಾ ವೈಕುಂಟಕೆ..” ಎನ್ನುವ ಜನಪ್ರಿಯ ಸಾಲನ್ನು ಶೀರ್ಷಿಕೆಯಾಗಿಸಿರುವ ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಸವಿವರಗಳನ್ನು ಹಂಚಿಕೊಂಡಿತು.
ನಾಯಕ ವರ್ಧನ್ ತೀರ್ಥಹಳ್ಳಿಯವರು ತಾವು ‘ಹಫ್ತ’ ಚಿತ್ರದ ಬಳಿಕ ಒಂದಷ್ಟು ಕತೆಗಳನ್ನು ಕೇಳಿದ್ದರೂ ಯಾವುದನ್ನು ಕೂಡ ಒಪ್ಪಿರಲಿಲ್ಲ. ಆದರೆ ಸಿದ್ದು ಪೂರ್ಣಚಂದ್ರರು ಹೇಳಿದ ಈ ಕತೆ ವಿಭಿನ್ನವಾಗಿದ್ದ ಕಾರಣ ತಕ್ಷಣ ಒಪ್ಪಿಕೊಂಡೆ’ ಎಂದರು.
ಒಬ್ಬ ಕ್ರಿಮಿನಲ್ ವ್ಯಕ್ತಿಯನ್ನು ಭಾವನೆಗಳ ಮೂಲಕ ಹೊಡೆಯುತ್ತಾ ಹೋಗುವ ಕತೆ ಚಿತ್ರದಲ್ಲಿದೆ. ಕ್ರಿಮಿನಲ್ ವ್ಯಕ್ತಿಯಾಗಿ ಹೇಗೆ ಪ್ರತಿಕ್ರಿಯಿಸುತ್ತೇನೆ ಎನ್ನುವುದನ್ನು ನಿರ್ದೇಶಕರು ನನ್ನ ಪಾತ್ರದ ಮೂಲಕ ತೋರಿಸಲಿದ್ದಾರೆ” ಎಂದರು.
ಚಿತ್ರದ ನಾಯಕಿಯಾಗಿ ‘ತಿಥಿ’ ಖ್ಯಾತಿಯ ಪೂಜಾ ನಟಿಸುತ್ತಿದ್ದಾರೆ. “ನಾನು ಸದ್ಯಕ್ಕೆ ಯಾವುದೇ ಚಿತ್ರ ಮಾಡುವುದಿಲ್ಲ ಎಂದೆ. ಆದರೆ ಕತೆ ಕೇಳಿದಾಗ ಒಪ್ಪಲೇಬೇಕಾಯಿತು. ಯಾಕೆಂದರೆ ನನ್ನ ಪಾತ್ರ ಅಷ್ಟು ವಿಭಿನ್ನವಾಗಿತ್ತು. ಸ್ಮಶಾನದಲ್ಲಿರುವ ಯುವತಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ವರ್ಧನ್ ಅವರು ಹೇಳಿದಂತೆ ಅವರನ್ನು ಭಾವನೆಗಳ ಮೂಲಕ ಹೊಡೆಯುವ ಪಾತ್ರ ನನ್ನದಾಗಿರುತ್ತದೆ” ಎಂದರು.
“ಸ್ಮಶಾನದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ನಮ್ಮ ನಾಯಕಿಗೆ ಯಾವುದೇ ಅಂಜಿಕೆ ಇಲ್ಲ. ಹಾಗಾಗಿ ರಾಮನಗರ ಸ್ಮಶಾನದಲ್ಲಿ ಚಿತ್ರೀಕರಣ ನಡೆಸಲಿದ್ದೇವೆ. ಚಿತ್ರದ ಎಂಬತ್ತರಷ್ಟು ಭಾಗ ಮಸಣದಲ್ಲೇ ನಡೆಯುತ್ತದೆ. ಹಾಗಾಗಿ ಇದು ಸಿನಿಮಾದ ಸಿದ್ಧ ಮಾದರಿಗಳನ್ನು ಮುರಿಯುವಂಥ ಚಿತ್ರ. ಹಾಗಂತ ಕಮರ್ಷಿಯಲ್ ಸಿನಿಮಾ ಪ್ರೇಕ್ಷಕರಿಗೆ ಯಾವುದೇ ರೀತಿಯಲ್ಲಿ ಮನರಂಜನೆಗೆ ಕೊರತೆ ಇರುವುದಿಲ್ಲ” ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ತಿಳಿಸಿದರು.ಅವರು ಈ ಹಿಂದೆ ‘ಕೃಷ್ಣ ಗಾರ್ಮೆಂಟ್ಸ್’ ಎನ್ನುವ ಸಿನಿಮಾ ನಿರ್ದೇಶಿಸಿದ್ದನ್ನು ನೆನಪಿಸಿಕೊಳ್ಳಬಹುದು. “ವರ್ಧನ್ ಅವರ ‘ಹಫ್ತ’ ಚಿತ್ರವನ್ನು ನೋಡಿ ಅವರನ್ನು ನಾಯಕರಾಗಿ ಆಯ್ಕೆ ಮಾಡಿದೆ. ಇದು ಅವರಿಗೆ ಒಂದು ವಿಶೇಷ ಚಿತ್ರವಾಗಲಿದೆ” ಎಂದು ಸಿದ್ದು ಭರವಸೆ ವ್ಯಕ್ತಪಡಿಸಿದರು. “ಸದ್ಯದ ಜನಪ್ರಿಯ ಪೋಷಕ ನಟರ ಪಟ್ಟಿಯಲ್ಲಿರುವ ಬಲರಾಜ್ ವಾಡಿ ಒಂದು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಚಿತ್ರದ ಮೂಲಕ ನಟ ಮಧು ಹೆಗ್ಡೆಯವರು ಮೊದಲ ಬಾರಿ ಸಂಗೀತ ನಿರ್ದೇಶಕರಾಗಿದ್ದಾರೆ” ಎಂದು ನಿರ್ದೇಶಕ ಸಿದ್ದು ಮಾಹಿತಿ ನೀಡಿದರು.
ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿರುವ ಪ್ರಶಸ್ತಿ ವಿಜೇತ ರಂಗಭೂಮಿ ಕಲಾವಿದೆ ಶೀಬ, ನಿರ್ಮಾಪಕ ಶರಣಪ್ಪ ಕೊಟಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೀರಣ್ಣ ಮತ್ತಿಕಟ್ಟಿ, ಅಭಯಚಂದ್ರ ಜೈನ್ ಮೊದಲಾದ ಹಿರಿಯ ರಾಜಕಾರಣಿಗಳು ಅತಿಥಿಗಳಾಗಿ ಆಗಮಿಸಿದ್ದರು.
ವರ್ಧನ್ ಸ್ನೇಹಿತರಾಗಿ ಶುಭ ಕೋರಲು ಬಂದ ಯುವ ನಟ ರಾಘವ್ ನಾಗ್ ಮತ್ತು ಬಿಗ್ ಬಾಸ್ ದಿವಾಕರ್