
ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅವರಿಗೆ ಇರುವಷ್ಟು ಅಭಿಮಾನಿಗಳು ಬೇರಯಾವ ತಾರೆಗೂ ಕಾಣಿಸುವುದು ಕಷ್ಟ. ಯಾವ ಕನ್ನಡ ಸಿನಿಮಾ ನೋಡಲು ಹೋದರೂ ಅಲ್ಲೊಂದಷ್ಟು ಮಂದಿ ದರ್ಶನ್ ಅಭಿಮಾನಿಗಳು ಇದ್ದೇ ಇರುತ್ತಾರೆ. ಟೈಟಲ್ ಕಾರ್ಡಲ್ಲಿ ದರ್ಶನ್ ಗೆ ಒಂದು ಕೃತಜ್ಞತೆ ಸೂಚಿಸಿದ್ದರೂ ಸಾಕು; ಆ ಚಿತ್ರದ ಹೀರೋ ಎಂಟ್ರಿಗೂ ಇರದಷ್ಟು ಮಟ್ಟದ ಸಿಳ್ಳೆ, ಚಪ್ಪಾಳೆಗಳ ಸುರಿಮಳೆಯಾಗುತ್ತದೆ. ಇಷ್ಟಕ್ಕೂ ದರ್ಶನ್ ತಮ್ಮ ಅಭಿಮಾನಿಗಳ ಮೇಲೆ ಮಾಡಿರುವ ಮೋಡಿಯಾದರೂ ಏನು? ಈ ಬಗ್ಗೆ ಅವರ ಮಹಾ ಅಭಿಮಾನಿಯಾದ ಧ್ರುವ ದರ್ಶನ್ (ಅವರು ತಮ್ಮ ಹೆಸರಿನ ಕೊನೆಗೆ ದರ್ಶನ್ ಹೆಸರನ್ನೇ ಸೇರಿಸಿಕೊಂಡಂಥ ಅಭಿಮಾನಿ!) ಸಿನಿ ಕನ್ನಡ ಕ್ಕೆ ಪತ್ರ ಬರೆದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ಅದೇ ರೀತಿಯಲ್ಲಿ ಇಲ್ಲಿ ನೀಡಲಾಗಿದೆ. ಓದಿ.

“ಡಿಬಾಸ್…
ನೀವು ತುಂಬಾ ಇಷ್ಟ ಆಗೋದು ಯಾಕೆ ಅಂದರೆ..
ನಿಮ್ಮ ಸರಳತನದಿಂದ, ನಿಮ್ಮ ವ್ಯಕ್ತಿತ್ವದಿಂದ, ಸಿನಿಮಾ ರಂಗದವರೆಲ್ಲರೂ ನಿಮ್ಮನ್ನು ವಿಶ್ಲೇಷಿಸುವ ವಿಷಯಗಳಿಂದ. ಅಷ್ಟೇ ಅಲ್ಲ, ನಿಮ್ಮ ಬಗ್ಗೆ ಬೇಕು ಅಂತ ಕಾಂಟ್ರವರ್ಸಿ ಮಾಡುವವರಿಗೆ ಕೇರ್ ಮಾಡದೇ ಇರುವ ನಿಮ್ಮ ಆ ಗತ್ತಿನಿಂದ , ನಿಮ್ಮನ್ನು ಪ್ರೀತಿಸುವ ಅಭಿಮಾನಿಗಳಿಂದ, ನಿಮ್ಮೊಳಗಿನ ಪ್ರಾಣಿ ಪ್ರಿಯನಿಂದ, ನಿಮ್ಮೊಳಗಿನ ಕಾಡಿನ ಬಗೆಗಿನ ಕಾಳಜಿಯಿಂದ, ನಿಮಗೆ ಹತ್ತಿರವಾದವರನ್ನು ನೀವು ನೋಡುವ ರೀತಿಯಿಂದ, ನಿಮ್ಮ ಅಭಿಮಾನಿಗಳಿಗೆ ನೀವು ಕೊಡುವ ಪ್ರೀತಿಯಿಂದ.. ಹೀಗೆ ಕೊನೆಯಿರದಷ್ಟು ಕಾರಣಗಳಿವೆ.
ಹೆಚ್ಚು ಕಡಿಮೆ ಮೂರು ವರ್ಷ ಆಗೋಕೆ ಬಂತು ಸುದೀಪ್ ಸೇರಿದಂತೆ ಎಲ್ಲರೂ ದರ್ಶನ್ – ಸುದೀಪ್ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಆದರೆ ನೀವು ಏನೂ ಮಾತನಾಡಿಲ್ಲ ಅನ್ನೋ ಕಾರಣದಿಂದ ನಮ್ಮ ಇಷ್ಟ ಹೆಚ್ಚಿದೆ. ನಿಮ್ಮ ಕನ್ನಡ ಸಿನಿಮಾ ಬಗೆಗಿನ ಕಾಳಜಿಯಂತೂ ನಮಗೆಲ್ಲರಿಗೂ ಇಷ್ಟ.
ಇನ್ನೂ ಹೇಳುತ್ತಾ ಹೋದರೆ ಮುಗಿಯಲ್ಲ , ಈ ಎಲ್ಲಾ ಕಾರಣದ ಜೊತೆಗೆ ಇನ್ನೂ ಅನೇಕ ಕಾರಣಗಳಿವೆ . ಎಂದಿಗೂ ನಿಮ್ಮ ಮೇಲಿನ ಅಭಿಮಾನ ಕಡಿಮೆಯಾಗಲ್ಲ ಬಾಸು..
ನೂರ್ಕಾಲ ಚೆನ್ನಾಗಿ ಬಾಳಿ, ಲವ್ ಯೂ ಬಾಸು….
— ಧ್ರುವ ದರ್ಶನ್.ಬಿ.ಎಸ್.