ಎಸ್ಪಿ ಅಂದರೆ ಸಿನಿಮಾ ಲೋಕಕ್ಕೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಒಬ್ಬರೇ. ಮೂಲತಃ ಆಂಧ್ರ ಪ್ರದೇಶದವರಾದರೂ ಕರ್ನಾಟಕ ಸೇರಿದಂತೆ ತಮಿಳು ನಾಡಿನ ಚಿತ್ರರಂಗಕ್ಕೆ ಅವರೊಬ್ಬರೇ ಶ್ರೇಷ್ಠ ಗಾಯಕ ಎಂದು ಗುರುತಾದವರು! ಕರ್ನಾಟಕದ ಜತೆಗಂತೂ ಅವರ ಸಂಬಂಧ ಇನ್ನಷ್ಟು ಗಾಢವಾಗಿರುವಂಥದ್ದು.
ಅವರ ಕರ್ನಾಟಕದ ಜತೆಗಿನ ಸಂಬಂಧದಲ್ಲಿ ಅವರ ಪತ್ನಿ ಕೂಡ ಬೆಂಗಳೂರಿನವರು ಎನ್ನುವ ಅಂಶವೂ ಸೇರಿದೆ. ನನ್ನ ಹಾಡಿಗೆ ಕನ್ನಡಿಗರಷ್ಟು ಅಭಿಮಾನಿಗಳು ಆಂಧ್ರದಲ್ಲಿ ಕೂಡ ಇಲ್ಲ ಎನ್ನುವುದನ್ನು ಅವರು ಹಲವು ಬಾರಿ ಹೇಳಿಕೊಂಡಿದ್ದರು. ಇದೀಗ ತಮ್ಮ ಹಳೆಯ ಕಾಲೇಜ್ ಮೇಟ್ ಗಳ ಜತೆಗೆ ರಿ ಯೂನಿಯನ್ ಆಗಲು ಆಯ್ಕೆ ಮಾಡಿಕೊಂಡಿದ್ದು ಕೂಡ ಬೆಂಗಳೂರನ್ನೇ. ಸಾಮಾನ್ಯರೇ ರಿ ಯೂನಿಯನ್ ಆದಾಗ ಸಂಭ್ರಮ ತಾರಕಕ್ಕೇರಿರುತ್ತದೆ. ಇನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಂಥ ಮಹಾನ್ ಪ್ರತಿಭೆಯ ತನ್ನ ಹಳೆಯ ಸ್ನೇಹಿತರ ಜೊತೆ ಸೇರಿದಾಗ ಮನರಂಜನೆ ಇನ್ನೆಷ್ಟಿರಬೇಡ?! ಖಾಸಗಿ ಸಂಭ್ರಮದ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಅದರಲ್ಲಿ ಅವರು ಇಳಯರಾಜ ರಾಗ ಸಂಯೋಜನೆಯ ‘ಜೊತೆ ಜೊತೆಯಲಿ..’ ಗೀತೆಯನ್ನು ಆಲಾಪಿಸಿದ್ದಾರೆ. ವಿಡಿಯೋ ಲಿಂಕ್ ಪಾಸಿಟಿವ್ ಪಿಕ್ಚರ್ ಮೂಲಕ ನೀಡಲಾಗಿದೆ. ಗಮನಿಸಿ.