ಜೆ.ಕೆ ನಟನೆಯ ಹಿಂದಿ ಚಿತ್ರ ಈ ವಾರ ತೆರೆಗೆ

“ದಿನಕರ ಕಪೂರ್ ಅವರ ಕತೆ ಚಿತ್ರಕತೆ ಇರುವ ಚಿತ್ರ ಇದು. ಹಿಂದಿಯಲ್ಲಿ ಅಬ್ಬಾಸ್ ಮಸ್ತಾನ್ ಅವರೊಂದಿಗೆ ಕೆಲಸ ಮಾಡಿರುವ ದಿನಕರ್ ಅವರು ತಮ್ಮ ಚಿತ್ರದಲ್ಲಿ ನೀಡುವುದಾಗಿ ಹೇಳಿದಾಗ ಖುಷಿಯಾಯಿತು” ಎಂದರು ಜೆ.ಕೆ. ಅವರು ಈ ವಾರ ಬಿಡುಗಡೆಯಾಗುತ್ತಿರುವ ‘ಪುಷ್ಪಾ ಐ ಹೇಟ್ ಟಿಯರ್ಸ್’ ಚಿತ್ರದ ಬಿಡುಗಡೆಪೂರ್ವ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಇದೊಂದು ಫ್ಯಾಮಿಲಿ‌ ಡ್ರಾಮ. ಚಿತ್ರದಲ್ಲಿ ನನಗೆ ಇಬ್ಬರು ನಾಯಕಿಯರು. ನಿರ್ಮಾಪಕಿ ಅಮೂಲ್ಯ ದಾಸ್ ಗುಪ್ತಾ ಒರಿಸ್ಸಾದವರು. ಪ್ಯಾಷನೇಟ್ ನಿರ್ದೇಶಕ ಮತ್ತು ನಿರ್ಮಾಪಕರು. ಅರ್ಜುಮನ್ ಮುಘಲ್ ಎನ್ನುವ ಬಾಲಿವುಡ್ ನಟಿ ಚಿತ್ರದಲ್ಲಿ ಪುಷ್ಪಾ ಪಾತ್ರವನ್ನು ಮಾಡಿದ್ದಾರೆ. ರಾಮ್ ಜಿ ಗುಲಾಟಿ‌ ಚಿತ್ರದ ಸಂಗೀತ ನಿರ್ದೇಶಕರು. ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು‌ ಚಿತ್ರದ ಮತ್ತೋರ್ವ ನಾಯಕ ಕೃಷ್ಣ ಅವರೇ ಹಾಡಿದ್ದಾರೆ ಎನ್ನುವ ಮಾಹಿತಿಗಳನ್ನು ಜೆ.ಕೆ ಅವರು ನೀಡಿದರು. ಚಿತ್ರವು ಕನ್ನಡಲ್ಲಿ ಕೂಡ ತೆರೆಕಾಣುತ್ತಿದ್ದು, ಜೆ.ಕೆ ಸ್ವತಃ ಡಬ್ ಮಾಡಿದ್ದಾರೆ.

ನಿರ್ದೇಶಕ ದಿನಕರ ಕಪೂರ್ ಮಾತನಾಡಿ , ತಾವು ಭೋಜ್ ಪುರಿಯಲ್ಲಿ 15 ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ‘ಸಿಯಾ ಕೆ ರಾಮ್’ ಧಾರಾವಾಹಿಯಲ್ಲಿ ರಾವಣನ ಪಾತ್ರ ನೋಡಿ ಮೆಚ್ಚಿಕೊಂಡಿದ್ದ ನಾನು ಅವರಿಗೆ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನೀಡಿದ್ದೇನೆ. ಇದರಲ್ಲಿ ವಿವಾಹೇತರ ಸಂಬಂಧದ ಬಗ್ಗೆ ಕತೆಯಿದೆ. ಇಂದು ಎಕ್ಸ್ಟ್ರಾ ಮ್ಯಾರಿಟಲ್ ರಿಲೇಶನ್ ಶಿಪ್ ಎನ್ನುವುದು ಟ್ರೆಂಡ್ ಆಗಿದೆ. ಆದರೆ ನೈತಿಕತೆ ಏನು ಎನ್ನುವುದನ್ನು ಚಿತ್ರದಲ್ಲಿ ತೋರಿಸಿದ್ದೇವೆ ” ಎಂದು ದಿನಕರಕಪೂರ್ ಹೇಳಿದರು. ಕಪಿಲ್ ಶರ್ಮ ಶೋ ಮೂಲಕ ಜನಪ್ರಿಯರಾದ ಕೃಷ್ಣ ಅವರು ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವ ಕಾಮಿಕ್ ಪಾತ್ರ ಮಾಡಿರುವುದಾಗಿ ದಿನಕರ್ ತಿಳಿಸಿದರು.

ಬಾಲಿವುಡ್ ನಟಿ ಅನುಸ್ಮೃತಿ ಸರ್ಕಾರ್ ಮಾತನಾಡಿ “ನಾನು ಚಿತ್ರದಲ್ಲಿ ನಾಯಕನ ಗೆಳತಿಯ ಪಾತ್ರ ಮಾಡಿದ್ದೇನೆ. ಜೆ.ಕೆ ತುಂಬ ಗಂಭೀರವಾಗಿರುತ್ತಾರೆ. ಆದರೆ ಸೆಟ್ ನಲ್ಲಿ ಒಂದಷ್ಟು ತಮಾಷೆಯಾಗಿದ್ದಂಥ ಸಂದರ್ಭಗಳೂ ಇವೆ ಎಂದರು. ಚಿತ್ರಇದೇ ಶುಕ್ರವಾರ ಸಿನಿಮಾ ದೇಶಾದ್ಯಂತ ತೆರೆಕಾಣುತ್ತಿದ್ದು ಮುಂಬೈನಲ್ಲಿ 25 ಚಿತ್ರಮಂದಿರಗಳಲ್ಲಿ ಪ್ರದರ್ಶನ ಇವೆ. ಕರ್ನಾಟಕದಲ್ಲಿ ಕನ್ನಡ ಮತ್ತು ಹಿಂದಿ ಸೇರಿದಂತೆ 50 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ” ಎನ್ನುವ ಮಾಹಿತಿಯನ್ನು ವಿತರಕ ನರ್ಗೀಸ್ ಬಾಬು ತಿಳಿಸಿದರು.

Recommended For You

Leave a Reply

error: Content is protected !!