ಮಾತು, ಕೃತಿ ಬಲ್ಲ‌ ನಿರ್ಮಾಪಕಿ ಮಾಲತಿ ಗೌಡ

‘ಮಾನವೀಯತೆಯ ವಿಕಾಸ, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ. ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ ಎಂದು ಯುವ ನಿರ್ಮಾಪಕಿ ಮಾಲತಿಗೌಡ ಅಭಿಪ್ರಾಯ ಪಟ್ಟರು. ಅವರು ಬಿಜಾಪುರದ ಮುಕಾರ್ತಿಹಾಳದಲ್ಲಿರುವ ‘ಮಾತೋ ಶ್ರೀ ಶಕುಂತಲಾ ಬಾಯಿ ಬಸವರಾಜ ಬೆಳ್ಳಿ ಮೆಮೋರಿಯಲ್ ಇಂಟರನ್ಯಾಶನಲ್ ಪಬ್ಲಿಕ್ ಶಾಲೆಯ ಮೂರನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

‘ಭಾರತದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ಒಂದೇ ಪರಿಹಾರ’ ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಆದರೆ ಇಂದು ಶಿಕ್ಷಣವೆಂದರೆ ಸ್ಪರ್ಧೆ ಎನ್ನುವಂತಾಗಿದೆ. ಮಕ್ಕಳು ಪರಸ್ಪರ ಸ್ಪರ್ಧಾತ್ಮಕವಾಗಿ ಕಲಿಕೆ ಆರಂಭಿಸಿದರೆ, ಮತ್ತೊಬ್ಬರ ಸೋಲನ್ನು ಕಂಡು ಸಂತಸ ಪಡುವ ಮನೋಭಾವ ಹರಡುತ್ತದೆ. ಅಂಥದ್ದನ್ನು ಮಕ್ಕಳಲ್ಲಿ ಹೇರದಂತೆ ಮಾಡುವ ಪ್ರಯತ್ನ ನಮ್ಮದಾಗಬೇಕು. ನಮ್ಮ ರಾಷ್ಟ್ರಪಿತ ಗಾಂಧೀಜಿಯವರು “ಅಹಿಂಸೆಯಲ್ಲಿನ ಒಳಿತನ್ನು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದಲೇ ಕಲಿಸುವಂತಾಗಬೇಕು” ಎಂದಿದ್ದರು. ಅಪರಾಧಗಳು ಹೆಚ್ಚುತ್ತಿರುವ ಇಂದಿನ ಸಮಾಜದಲ್ಲಿ ಅವರ ತತ್ವಗಳು ಶಾಲೆಗಳ ಮೂಲಕ ಅಳವಡಿಕೆಯಾಗುವಂತಾಗಲಿ ಎಂದು ನಾನು ಹಾರೈಸುತ್ತೇನೆ ಎಂದು ಮಾಲತಿ ಗೌಡ ಶುಭಕೋರಿದರು.

ಇಂದು ಕನ್ನಡ ಚಿತ್ರರಂಗದಲ್ಲಿ ದೇಶದಲ್ಲೇ ಅತಿಹೆಚ್ಚು ಚಿತ್ರಗಳ ನಿರ್ಮಾಣವಾಗುತ್ತಿದೆ. ಆದರೆ ಅವುಗಳಲ್ಲಿ ಬೆರಳೆಣಿಕೆಯ ಚಿತ್ರಗಳಷ್ಟೇ ಗೆಲ್ಲುತ್ತಿವೆ ಎನ್ನುವುದು ನಿರ್ಮಾಪಕರಿಗೆ ಆಗುತ್ತಿರುವಂಥ ನಷ್ಟವನ್ನು ಸೂಚಿಸುತ್ತದೆ. ಹೀಗೆ ನಿರ್ಮಾಪಕರು ಪದೇ ಪದೆ ಮೋಸ ಹೋಗಲು ಅವರು ಅವರಲ್ಲಿನ ವಿದ್ಯಾಭ್ಯಾಸದ ಕೊರತೆಯೂ ಕಾರಣ. ಹಳ್ಳಿಗರು ಅಥವಾ ಉದ್ಯಮಿಗಳಲ್ಲಿರುವ ಸಿನಿಮಾಸಕ್ತಿಯ ಲಾಭ ಪಡೆದು ಅವರಿಂದ ಚಿತ್ರಗಳನ್ನು ಮಾಡಿ ತಾವು ಮಾತ್ರ ಹೆಸರು ಮಾಡುವವರು ಹೆಚ್ಚುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮಾಲತಿಗೌಡರಂಥ ಸುಶಿಕ್ಷಿತೆ, ಚಿತ್ರರಂಗದ ಬಗ್ಗೆ ಅರಿವುಳ್ಳ‌ ನಿರ್ಮಾಪಕಿಯ ಮಾತುಗಳು ಪ್ರಾಮುಖ್ಯತೆ ಕಂಡುಕೊಂಡಿರುವುದು ಸುಳ್ಳಲ್ಲ. ಹಾಗಾಗಿ ಅದು ಅವರ ನಿರ್ಮಾಣದ ಚಿತ್ರದ ಮೇಲೆಯೂ ನಿರೀಕ್ಷೆ ಮೂಡುವಂತೆ ಮಾಡಿದೆ. ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಗಣ್ಯರ ಉಪಸ್ಥಿತಿ ಇತ್ತು.

ಅಭ್ಯುದಯ ಕಂಬೈನ್ಸ್’ ಮೂಲಕ ಮಾಲತಿ ಗೌಡ ನಿರ್ಮಿಸಿರುವ ‘ದಿ ಸೂಟ್’ ಚಿತ್ರದ ಸೆನ್ಸಾರ್ ಪೂರ್ಣಗೊಂಡಿದೆ. ಭಗತ್ ರಾಜ್ ನಿರ್ದೇಶಿಸಿರುವ ಪ್ರಥಮ ಚಿತ್ರ ಇದಾಗಿದ್ದು ಗಡ್ಡ ವಿಜಿ, ನಾಗೇಂದ್ರ ಪ್ರಸಾದ್, ಉಮೇಶ್ ಬಣಕಾರ್, ದೀಪ್ತಿ ಕಾಪ್ಸೆ, ಧಾನ್ವಿ ಕೋಟೆ, ಚಿದು ಶ್ರೀಧರ್ ಮೊದಲಾದವರ ತಾರಾಗಣವಿದೆ. ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು ಸಸ್ಪೆನ್ಸ್ ಸಬ್ಜೆಕ್ಟ್ ನಲ್ಲಿ ಚಿತ್ರ ಮಾಡಿದ್ದಾರೆ.

Recommended For You

Leave a Reply

error: Content is protected !!
%d bloggers like this: