
ಕೊರೊನಾ ವೈರಾಣು ಬಗ್ಗೆ ಸುದ್ದಿಯಾದ ಆರಂಭದ ದಿನಗಳಲ್ಲಿ ಅದರ ಬಗ್ಗೆ ಒಂದಷ್ಟು ಮಂದಿ ಹಾಡುಗಳನ್ನು ರಚಿಸಿದ್ದಾರೆ. ಆದರೆ ಕರ್ಫ್ಯೂ ಆರಂಭವಾದ ಮೇಲೆ ಹಾಡು ಮಾಡಿದರೂ ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸ್ಟುಡಿಯೋ ಸಿಗದೆ ಅರ್ಧಕ್ಕೆ ಕೈ ಬಿಟ್ಟವರು ಹಲವರಿದ್ದರು. ಇದರ ನಡುವೆ ಕನ್ನಡದ ಖ್ಯಾತ ಸಾಹಿತಿ, ಗೀತರಚನೆಕಾರ ಜಯಂತ್ ಕಾಯ್ಕಿಣಿಯವರು ಹಾಡೊಂದನ್ನು ರಚಿಸಿದ್ದಾರೆ. ಅದನ್ನು ಮತ್ತೋರ್ವ ಖ್ಯಾತ ಪ್ರತಿಭೆ ಕನ್ನಡಿಗರ ಮೆಚ್ಚಿನ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಸ್ವರಸಂಯೋಜಿಸಿ ಹಾಡಿದ್ದಾರೆ.
ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರು ಭಾವನಾತ್ಮಕವಾಗಿ ಗುನುಗಿರೋ ಈ ಗೀತೆಯನ್ನು ತುಂಬ ಅರ್ಥಬದ್ಧವಾಗಿ, ಸಾಂದರ್ಭಿಕವಾಗಿ ಕಾಯ್ಕಿಣಿಯವರು ರಚಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಯ್ಕಿಣಿಯವರ ರಚನೆಯನ್ನು ತಮ್ಮ ಮಧುರ ಕಂಠದ ಮೂಲಕ ಕೋಟಿ ಜನಗಳಿಗೆ ತಲುಪುವಂತೆ ಮಾಡಿದ ಎಸ್ ಬಾಲ ಸುಬ್ರಹ್ಮಣ್ಯಂ ಅವರಿಗೆ ವಂದನೆ ಹೇಳಲೇಬೇಕು.