ಸಹಾಯ ಬೇಡಿದ ದುನಿಯಾ‌ ವಿಜಯ್!

ಸದಾ ಯಾರಿಗಾದರೂ ಸಹಾಯ ಹಸ್ತ ಚಾಚುವ ದುನಿಯಾ ವಿಜಯ್ ಯಾರಿಂದ ಸಹಾಯ ಕೇಳಿದ್ರು ಅಂತ ಯೋಚನೆ ಮಾಡಬೇಡಿ. ಅವರು ಬೇಡಿದ್ದು ಸರ್ಕಾರವನ್ನು. ಅದು‌ ತಮ್ಮ ಬಳಿ ಬಂದ ದಿನಗೂಲಿ ಕಾರ್ಮಿಕಾರಿಗಾಗಿ.

ಅವರು ಫೇಸ್ಬುಕ್ ನಲ್ಲಿ ಬರೆದಿರುವುದು ಹೀಗೆ. “ನಾನು ಇದನ್ನು ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಆದರೆ ನನ್ನ ಈ‌ ಮನವಿ ನೋಡಿಯಾದರೂ ಸಂಬಂಧಪಟ್ಟವರು ಕ್ರಮಕೈಗೊಳ್ಳಲಿ ಎನ್ನುವುದೊಂದೇ ಆಶಯ. ಯಾಕೆಂದರೆ ಇವರು ಈಗ ನನ್ನ ಮನೆಯ ಮುಂದೆ ಬಂದು ನಿಂತಿದ್ದಾರೆ. 20 ಮಂದಿ ತುಂಬಿದ ಸದಸ್ಯರ ಕುಟುಂಬ ಇದು. ಇವರೆಲ್ಲ ಹುಬ್ಬಳ್ಳಿ, ಬಿಜಾಪುರ, ಗುಲ್ಬರ್ಗ ಮೊದಲಾದ ಕಡೆಗಳಿಂದ ಬಂದಿರುವಂಥ ಕೂಲಿಕಾರ್ಮಿಕರು. ಅವರಿಗೆ ಊರಿಗೆ ಹೋಗುವ ಅವಕಾಶವಂತೂ‌ ಇಲ್ಲ.‌ ಅದರ ಜತೆಗೆ ಇಲ್ಲಿ ಯಾವುದೇ ರೀತಿಯ ಊಟದ ವ್ಯವಸ್ಥೆಯಾಗಲೀ ದಿನಸಿಯಾಗಲೀ ದೊರಕಿಲ್ಲ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಒಂದು ವ್ಯವಸ್ಥೆ ಮಾಡುವಂತೆ ಮನವಿ ಮಾಡುತ್ತಿದ್ದೇನೆ.”

ವಿಜಯ್ ಫೇಸ್ಬುಕ್ ಪೋಸ್ಟ್ ಗಳು ಇದುವರೆಗೆ ಹಲವರ ಸಮಸ್ಯೆ ಪರಿಹರಿಸಿರುವ ಕಾರಣ ಇದಕ್ಕೂ ತಕ್ಷಣ ಸರಿಯಾದ ಪ್ರತಿಕ್ರಿಯೆ ಲಭಿಸಬಹುದೆಂದು ನಿರೀಕ್ಷೆ ಮಾಡಲಾಗಿದೆ.

Recommended For You

Leave a Reply

error: Content is protected !!
%d bloggers like this: