ಮಂಡ್ಯ ರಮೇಶ್ ಕಣ್ಣೀರಾಗಿದ್ದಾರೆ. ಅದು ಕೂಡ ಫೇಸ್ಬುಕ್ ನಲ್ಲಿ. ಕೊರೊನದಿಂದಾಗಿ ಸಂಭವಿಸಿರುವ ಲಾಕ್ಡೌನ್ ಪರಿಣಾಮ ಮನೆ ಸೇರಿಕೊಂಡ ಎಲ್ಲರ ಕತೆಯೂ ಇಷ್ಟೇ ಎಂದುಕೊಂಡಿರ? ಖಂಡಿತವಾಗಿ ಇಲ್ಲ. ಈ ಕಣ್ಣೀರಿಗೆ ಒಂದು ವಿಭಿನ್ನವಾದ ಕಾರಣವೇ ಇದೆ.
ಫೇಸ್ಬುಕ್ ಸೇರಿದಂತೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇರುವವರೆಲ್ಲ ಒಂದೊಂದು ಚಾಲೆಂಜ್ ಹೆಸರಲ್ಲಿ ತಮ್ಮ ಪ್ರತಿಭೆಗಳ ಪ್ರದರ್ಶನ ನಡೆಸುತ್ತಿದ್ದಾರೆ. ಆದರೆ ಮಂಡ್ಯ ರಮೇಶ್ ಅವರು ರಾಜ್ಯಕಂಡ ಶ್ರೇಷ್ಠ ಪ್ರತಿಭೆ. ಅವರಿಗೆ ಹೊಸಾದಾಗಿ ಯಾರದೋ ಚಾಲೆಂಜ್ ಸ್ವೀಕರಿಸಿ ತಮ್ಮನ್ನು ಸಾಬೀತು ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಆದರೂ ಕೂಡ ಅವರು ಸ್ವತಃ ತಮಗೆ ತಾವೇ ವಿಡಿಯೋವೊಂದನ್ನು ಚಿತ್ರೀಕರಿಸಿ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು ಅವರ ಕಲಾಹಸಿವಿಗೆ ಉದಾಹರಣೆ ಎನ್ನಬಹುದು.
ಅಂದಹಾಗೆ ಮಂಡ್ಯರಮೇಶ್ ಅವರು ಅಭಿನಯಿಸಿರುವ ದೃಶ್ಯ ಗಿರೀಶ್ ಕಾರ್ನಾಡ್ ಅವರ ನಾಟಕವಾದ ‘ಅಗ್ನಿ ಮತ್ತು ಮಳೆ’ಯಿಂದ ಆಯ್ದುಕೊಂಡಂಥವು. ಅದರಲ್ಲಿ
ಅರವಸು ಪಾತ್ರದ ಸಂಭಾಷಣೆಯನ್ನು ಮಂಡ್ಯ ರಮೇಶ್ ಹೇಳಿದ ರೀತಿ ಎಷ್ಟು ಮೈಮರೆಸುವಂತೆ ಇತ್ತು ಎಂದರೆ ಸ್ವತಃ ಅವರ ಕಣ್ಣುಗಳಿಂದ ಕಂಬನಿ ಧಾರೆಯಾಗಿ ಧುಮುಕಿದೆ. ಇದು ಪಾತ್ರದೊಳಗೆ ಅವರ ತಲ್ಲೀನತೆಯನ್ಬು ತೋರಿಸುವಂತಿತ್ತು.
ಸದಾ ನಟನೆ, ನಿರ್ದೇಶನ ಮುಂತಾದ ಕಾರ್ಯಗಳಲ್ಲಿ ಇರುತ್ತಿದ್ದ ತಮಗೆ ಲಾಕ್ಡೌನ್ ಬಳಿಕದ ಘಟನೆಗಳು ಶೂನ್ಯ ಭಾವ ಕಾಡುವಂತೆ ಮಾಡಿದೆ ಎಂದು ಸ್ವತಃ ಮಂಡ್ಯ ರಮೇಶ್ ಅವರೇ ತಿಳಿಸಿದ್ದಾರೆ. ಯಾಕೆಂದರೆ ಇದೇ ಸಮಯದಲ್ಲಿ ತಮ್ಮ ತಂದೆಗೂ ಅನಾರೋಗ್ಯ ಕಾಣಿಸಿಕೊಂಡು 10 ದಿನ ಆಸ್ಪತ್ರೆಯಲ್ಲಿ ಇರಬೇಕಾಯಿತು. ಆಸ್ಪತ್ರೆಯಲ್ಲಿ ಜನರ ಧಾವಂತ ಕಂಡು ಅದು ನನ್ನನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯಿತು” ಎಂದಿದ್ದಾರೆ.
“ಈಗ ಅನಿವಾರ್ಯವಾಗಿ ಜನ ಲಾಕ್ ಡೌನ್ ನಿಯಮವನ್ನು ಪಾಲಿಸಲೇಬೇಕಿದೆ. ಕಲಾವಿದರೆಲ್ಲ ಹೋದ ಬಳಿಕ ನಾನುನಿರಾಳಗೊಳ್ಳುತ್ತಾ ಹೋಗುತ್ತದೆ. ಇದೀಗ ನಾಟಕದ ಪಾತ್ರವನ್ನು ಒಬ್ಬನೇ ಅನುಭವಿಸುತ್ತಾ ವಾಚಿಸುತ್ತಿದ್ದೇನೆ. ಮನಸ್ಸು ನಿರಾಳಗೊಳ್ಳಲು ಇದು ಉಪಕಾರಿಯಾಗಿದೆ” ಎನ್ನುವುದು ರಮೇಶ್ ಅವರ ಮಾತು. ಇಂದು ಅವರ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಪಾತ್ರದ ಮಾತುಗಳನ್ನಾಡುತ್ತಿರುವಾಗಲೇ ಮಂಡ್ಯ ಕಣ್ಣುಗಳಿಂದ ನೀರು ಹನಿಯಾಗಿ ಹೊರಬಂದು ಹರಡುವುದು ಕಾಣುತ್ತಿತ್ತು. ಈ ರಂಗಭೂಮಿಯ ಪ್ರತಿಭೆ ತಮ್ಮ ಮುಖಭಾವದಲ್ಲೇ ಪ್ರೇಕ್ಷಕರನ್ನು ಹೇಗೆ ಹಿಡಿಡುತ್ತಾರೆ ಎನ್ನುವುದಕ್ಕೆ ಸ್ಪಷ್ಟ ಇಂದು ಅಂದರೆ ಸೋಮವಾರ ಮಧ್ಯಾಹ್ನ ಅವರು ಫೇಸ್ಬುಕ್ ನಲ್ಲಿ ಹಾಕಿರುವ ವಿಡಿಯೋ ಸರಿಯಾದ ಉತ್ತರವಾಗಬಲ್ಲದು.
ಇನ್ನೊಂದು ವಿಚಾರ. ಮಂಡ್ಯ ರಮೇಶ್ ಅವರು ಇದುವರೆಗೆ ಪಾತ್ರಗಳಿಗಾಗಿ ಸಾಕಷ್ಟು ವೇಷ ಬದಲಾಯಿಸಿದ್ದಾರೆ. ಆದರೆ ಮೊದಲ ಬಾರಿಗೆ ‘ಲಾಕ್ಡೌನ್’ ಸಂದರ್ಭ ಅವರಿಗೊಂದು ಹೊಸ ಮುಖವನ್ನೇ ತಂದುಕೊಟ್ಟಿದೆ. ಅವರ ಮುಖದಲ್ಲಿ ಚಿಗುರಿರುವ ಬಿಳಿದಾಡಿ ಹೊಸ ಕಳೆ ಮೂಡಿಸಿದೆ. ಕೆಂಪು ಟೀ ಶರ್ಟ್ ನಲ್ಲಿ ಮುದ್ದಾಗಿ ಕಾಣಿಸುವ ಮಂಡ್ಯ ರಮೇಶ್ ಅವರ ಈ ಹೊಸ ಗೆಟಪ್ ಮುಂದೆ ಇಂಥದೇ ರೀತಿಯ ಪಾತ್ರಗಳನ್ನು ತಂದುಕೊಟ್ಟರೂ ವಿಶೇಷವೇನಿಲ್ಲ. ಒಟ್ಟಿನಲ್ಲಿ ಪಾತ್ರಕ್ಕೆ ಬೇಕಾಗಿ ಕಣ್ಣೀರಾಗಬಲ್ಲ ಈ ನಟನ ಬದುಕಿನ ತುಂಬ ನಗುವೇ ತುಂಬಿರಲಿ.