
ಜನಪ್ರಿಯ ವ್ಯಕ್ತಿಗಳು ತೀರಿಕೊಂಡಾಗ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತವಾಗುವುದು ಸಹಜ. ಆದರೆ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನಕ್ಕೆ ವಿವಿಧ ವರ್ಗದ ಕನ್ನಡಿಗರು ನೀಡಿರುವ ಸಂತಾಪ ಸೂಚಕ ಮತ್ತು ನೆನಪುಗಳು ಬಹುಶಃ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವಂತಿವೆ.
ಬರಿಯ ಫೇಸ್ಬುಕ್ ಶ್ರದ್ಧಾಂಜಲಿಯಲ್ಲಿ ಗಣ್ಯರು ವ್ಯಕ್ತಪಡಿಸುತ್ತಿರುವ ಮಾತುಗಳನ್ನು ನೋಡಿಯೇ ಮೊದಲೇ ಇರ್ಫಾನ್ ಬಗ್ಗೆ ತಿಳಿಯದೇ ಹೋಗಿರುವುದಕ್ಕಾಗಿ ನೊಂದವರ ಸಂದೇಶಗಳು ಕೂಡ ಇಲ್ಲಿವೆ.





































