ಬಹುಮುಖ ಪ್ರತಿಭೆ : ಡಾ.ಸುಜಯ್ ರಾಜ್

ಡಾ. ಸುಜಯ್ ರಾಜ್ ಆರ್ ಎಸ್
ಮೂಲತಃ ಮೂಡುಬಿದಿರೆಯವರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ‘Cancer biology and Reproductive toxicity’ ಎನ್ನುವ ವಿಷಯದಲ್ಲಿ PhD ಪಡೆದವರು. ಕಾಲೇಜು ದಿನಗಳಿಂದಲೇ ಸ್ಕಿಟ್, ಸ್ಟೇಜ್ ಶೋಸ್, moviescope ಗಳಿಗೆ ತಾವೇ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದ ಇವರದು ಬಹುಮುಖ ಪ್ರತಿಭೆ. ಉತ್ತಮ ಬರಹಗಾರ ಎನಿಸಿಕೊಂಡಿರುವ ಸುಜಯ್ ಇವರು 2017ರಲ್ಲಿ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಬರೆದ ಕವನಕ್ಕೆ “ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯವು “ಉತ್ತಮ ಕವಿತೆ” ಎನ್ನುವ ಗೌರವ ನೀಡಿರುತ್ತದೆ.

‘WakeUp The Band®’ ಎಂಬ ರಾಕ್ ಬ್ಯಾಂಡ್ ಒಂದರ ಮನೇಜರ್ ಸಹ ಆಗಿರುವ ಇವರು, ಬ್ಯಾಂಡ್ ನಿಂದ ಹೊರಬಂದಿರುವ ಎಲ್ಲ ಹಾಡುಗಳಿಗೆ ಸಾಹಿತ್ಯ ಮತ್ತು ನಿರ್ದೇಶನ ಮಾಡಿರುತ್ತಾರೆ. ಸುಮಾರು 2014 ರಿಂದ ಸಕ್ರಿಯರಾಗಿರುವ ಈ ಬ್ಯಾಂಡ್ ಸುಮಾರು 55 ಕ್ಕೂ ಹೆಚ್ಚು ಲೈವ್ ಪ್ರದರ್ಶನ ಮತ್ತು ಕನ್ಸರ್ಟ್ ಸೇರಿದಂತೆ ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು ಮತ್ತು ರಾಜ್ಯಾದ್ಯಂತ ಪ್ರದರ್ಶನ ನೀಡಿರುತ್ತದೆ.

2017 ಫೆಬ್ರವರಿಯಲ್ಲಿ ಇವರ ಸಾಹಿತ್ಯ, ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಹಾಗೂ ‘WakeUp The Band®’ na ಸಂಗೀತದಲ್ಲಿ ‘ಅಮ್ಮ’ ಹಾಡು ಯೂಟ್ಯೂಬ್ ನಲ್ಲಿ ಬಿಡುಗೊಂಡಿದ್ದು, ಹಾಡಿನ ಸಾಹಿತ್ಯ ಮತ್ತು ಮೇಕಿಂಗ್ ನಿಂದ ಪ್ರೇರೇಪಿತರಾದ ನಟ ವಿಜಯ್ ರಾಘವೇಂದ್ರ ರವರು ಸ್ವತಃ ತಾವೇ ಹಾಡನ್ನು ಬಿಡುಗಡೆಗೊಳಿಸುತ್ತಾರೆ. ಅಲ್ಲದೆ, ಹಾಡು ನಿರ್ದೇಶಕ ಬಿ. ಸುರೇಶ, ರಕ್ಷಿತ್ ಶೆಟ್ಟಿ, ಕಲಾವಿದರಾದ ರಾಕೇಶ್ ಅಡಿಗ, ಟೆನ್ನಿಸ್ ಕೃಷ್ಣ, ಶೈನ್ ಶೆಟ್ಟಿ, ಅನುಶ್ರೀ, ಪೃಥ್ವಿ ಅಂಬರ್ ಸೇರಿದಂತೆ ಹಲವಾರು ಸಿನಿತಾರೆಯರ ಪ್ರಶಂಸೆಗೆ ಪಾತ್ರವಾಗುತ್ತದೆ. ಮುಂದೊಂದು ದಿನ ಉಜಿರೆಯಲ್ಲಿ ನಡೆದ “ಝೇಂಕಾರ – ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹಬ್ಬ” ದ ಅಂಗವಾಗಿ ಇದೆ ಹಾಡಿನ ಪ್ರದರ್ಶನಗೊಳ್ಳತ್ತದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರೇಂದ್ರ ಹೆಗ್ಗಡೆಯವರು ಮತ್ತು ಮುಖ್ಯ ಅತಿಥಿಯಾಗಿದ್ದ ನಟ ದಿಗಂತ್ ಇಬ್ಬರೂ ಹಾಡಿನ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಅಷ್ಟೇ ಅಲ್ಲದೆ, ಮುಂದಿನ ವರ್ಷದ “ಝೇಂಕಾರ” ಸಾಂಸ್ಕೃತಿಕ ಕೂಟದ ಶೀರ್ಷಿಕೆ ಗೀತೆಯ ಸಂಯೋಜನೆಯ ಹೊಣೆಯೂ ಇವರ ಪಾಲಾಗುತ್ತದೆ. ಮುಂದೆ ಆ ಹಾಡು ಕೂಡ ಅಷ್ಟೇ ಪ್ರಶಂಸೆ ಮತ್ತು ಮೆಚ್ಚುಗೆ ಪಡೆಯುತ್ತದೆ.

ಮುಂದೆ 2018ರಲ್ಲಿ ಇವರು ಸಾಹಿತ್ಯ ಬರೆದು, ನೃತ್ಯ ಸಂಯೋಜನೆ ಮಾಡಿ ನಿರ್ದೇಶಿಸಿದ “WakeUp for RCB” ಹಾಡು ಬಿಡುಗಡೆಯಾಗಿ ಕೇವಲ ಐದು ದಿನಗಳಲ್ಲಿ 50,000 ವೀಕ್ಷಣೆ ಪಡೆದುಕೊಂಡಿದ್ದಲ್ಲದೆ, ಮಾಧ್ಯಮಗಳಲ್ಲೂ ಸುದ್ದಿ ಮಾಡುತ್ತದೆ. ಈ ಹಾಡಿಗೆ RCB ತಂಡದ ಕುರಿತಾಗಿ ಕನ್ನಡ ಭಾಷೆಯಲ್ಲಿ ಮೂಡಿಬಂದ ಮೊದಲ “Fan made song” ಎಂಬ ಹೆಗ್ಗಳಿಕೆ ಸಹ ಇದಕ್ಕೆ ಸಲ್ಲುತ್ತದೆ. ದಕ್ಷಿಣ ಕನ್ನಡದ ಸೊಗಡಿನ ಘಮ ಹಾಗೂ ಮಂಗಳೂರು ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಿಸಿದ್ದ ಈ ಹಾಡು ಸೋಶಿಯಲ್ ಮೀಡಿಯಾ ದಲ್ಲಿ ಸದ್ದು ಮಾಡಲಾರಂಭಿಸಿದ ಮೇಲೆ “RCB- management na ಗಮನ ಸೆಳೆದು, ಇದೇ ಹಾಡಿನ ರೀಮಿಕ್ಸ್ ಮಾಡಬೇಕೆಂಬ ಬೇಡಿಕೆಯನ್ನು ಇಟ್ಟಿದಲ್ಲದೆ ಆ ಹಾಡನ್ನು “ಸ್ಟಾರ್ ಸ್ಪೋರ್ಟ್ಸ್” ಇಂಗ್ಲಿಷ್ ಚಾನಲ್ ನವರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅಂದಿನ RCB ತಂಡದ ಸುಬ್ರಮಣಿಯನ್ ಬದ್ರಿನಾಥ್ ಹಾಗೂ ಸರ್ಫರಾಜ್ ಖಾನ್ ಒಡಗೂಡಿ RCB- management ವತಿಯಿಂದ ಜಂಟಿಯಾಗಿ ಬಿಡುಗಡೆ ಗೊಳಿಸಲಾಗುತ್ತದೆ.

ಪ್ರಸ್ತುತ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿರುವ ಇವರು ‘ಕಾರ್ಮೋಡ’ ಎನ್ನುವ ಹೊಸಬರ ಚಿತ್ರದ ಮೂರು ಹಾಡುಗಳಿಗೆ ಸಾಹಿತ್ಯ ಬರೆದಿರುತ್ತಾರೆ. ಇವರ ಸಾಹಿತ್ಯ ವಿರುವ ಸಂಜಿತ್ ಹೆಗ್ಡೆ ಹಾಡಿರುವ “ನಾಲ್ಕು ದಿನದ ಲೈಫ್” ಎಂಬ ಲಿರಿಕಲ್ ವಿಡಿಯೋ ಲಹರಿ ಆಡಿಯೋ ಚಾನಲ್ ನಲ್ಲಿ ಲಭ್ಯವಿದೆ. ಹಾಡನ್ನು ಎಪ್ಪತ್ತು ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದು, ಒಳ್ಳೆ ಪ್ರತಿಕ್ರಿಯೆ ದೊರೆಯುತ್ತಿದೆ.

ಕೊರೊನಾಗೆ ಡಾ.ಸುಜಯ್ ಮದ್ದು!

ಇವರು ಪ್ರಸ್ತುತ Corona ದಿಂದ ಸಂಭವಿಸುತ್ತಿರುವ ಘಟನಾವಳಿಗಳು ಹಾಗೂ ಸಾಧಕ ಬಾಧಕಗಳ ಕುರಿತು ಒಂದು ಕವನ ರಚಿಸಿದ್ದಾರೆ. ಅದನ್ನು ಸಿನಿಕನ್ನಡ.ಕಾಮ್ ಎಕ್ಸ್ ಕ್ಲೂಸಿವ್ ಆಗಿ ಇಲ್ಲಿ ನಿಮಗೆ ನೀಡಿದೆ.

ಪಾಶಕೆ ಬಲಿಯಾದ ಮನುಜಂಗೆ ಉಳಿವಿಲ್ಲ
ಬೆತ್ತಲೆ ಪರದೆಯೊಳು ಸಿಲುಕಿದ ಹುಂಬಂಗೆ ಬೆಳಕಿಲ್ಲ
ಕಾದು ಕೂತೈತೆ ಸುಡು ಬವಣೆಯ ಜ್ವಾಲೆ
ರಣತಂತ್ರಕೆ ಸಮಯ ಕೂಡಿ ಬಂದು ಈಗ ಮೊಳಗಿ ರಂಗಾಯ್ತು ಕಹಳೆ

ಬೇಕು ಎಂಬ ಮಾಯೆ ಕಾಡಿ
ನಾನು ಎಂಬ ಮರುಳು ಕೂಡಿ
ಹಟವನ್ನೆ ಬೆರೆಸಿದೋನ ಪಾಡನ್ನು ನೋಡಿ
ಕಾಡ್ತೈತೆ ಕಣ್ಣಿಗೆ ಕಾಣದ ಮೋಡಿ

ಎಡವಿದಲ್ಲೆ ಗೂಟ ಹೊಡೆಸಿ
ಮಣ್ಣ ಹಸಿಯ ಸ್ಥಾನ ಬದಲಿಸಿ
ಭೂಮಿಯ ಕೊರೆಸಿದೋನ ಪಾಡನ್ನು ನೋಡಿ
ಸಿಗುತ್ತೈತೆ ಬೂದಿ

ಬೆಟ್ಟವ ಕಡಿದಿಟ್ಟರು ಒಪ್ಪದ ಜನರ ನಡುವೆ ಬೆನ್ನೇರಿ ಕುಳಿತಿದ್ದ ಅಹಂಭಾವ ಚಿದ್ರ
ಶೂನ್ಯ ನಶ್ವರಗಳ ನಡುವೆ ಬರಿದಾಯ್ತು ಬದುಕು ಪ್ರಕೃತಿಯ ವಹಿವಾಟು ಸುಭದ್ರ

ಗೌಜಿ ಗದ್ದಲಕೆ ಬಲಿಯಾದ ಮೂಕಜೀವಗಳಿಗೆ ಲೆಕ್ಕವಿಲ್ಲ
ಪ್ರಕೃತಿಯ ಸಿರಿ ಸಂಪತ್ತುಗಳು ನಮ್ಮ ಸ್ವಾರ್ಥಕೆ ಮುರಿದು ಮಣ್ಣಾಯಿತೆಲ್ಲ
ತನಗೆ ಸೇರದ ಕುಲದವನ ಕುಹಕ ಮಾಡಿ ಕುಣಿಯದವರಿಲ್ಲ
ಪರದೇಶಕೆ ತನ್ನತನವ ಮಾರಿದವರ ನಡುವೆ ಹಸಿವ ನೀಗಿಸುವ ಕೈಗಳ ಕುಲದ ಪ್ರಶ್ನೆ ಏಳಲಿಲ್ಲ.
ದೇಶ ಭಾಷೆಗಳ ವೈರುಧ್ಯ ಮೈನೆರೆದು ನೆತ್ತರ ಬಣ್ಣ ಕೆಂಪೆಂಬ ಸತ್ಯ ಸಮಾಧಿ ಆಯಿತಲ್ಲ.
ಮಾಯಾವಿಕೋಪಕ್ಕೆ ತತ್ತರಿಸಿ ಬೆಂದರೂ ಮಾನವನಾಸೆಗೆ ಕೊನೆ ಎಂಬುದಿಲ್ಲ.

Recommended For You

2 Comments

  1. Dr. Sujay is a very talented boy with creative ideas. He has a bright future in music and cini fields. Wishing him all the best.

    1. ಡಾ. ಸುಜಯ್ ರಾಜ್ ಅವರ ಪರವಾಗಿ ವಂದನೆಗಳು

Leave a Reply

error: Content is protected !!
%d bloggers like this: