
ಪೃಥ್ವಿರಾಜ್ ಮತ್ತು ಬಿಜು ಮೆನನ್ ಜೋಡಿಯು ಪ್ರಧಾನ ಪಾತ್ರದಲ್ಲಿ ನಟಿಸಿ ಗಮನ ಸೆಳೆದ ಮಲಯಾಳಂ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ.’ ಫೆಬ್ರುವರಿ ತೆರೆಕಂಡಿದ್ದ ಈ ಸಿನಿಮಾ ಥಿಯೇಟರ್ ನಲ್ಲಿ ಗಮನ ಸೆಳೆದಿದ್ದು ಮಾತ್ರವಲ್ಲ, ಅಮೆಜಾನ್ ಪ್ರೈಮ್ ಮೂಲಕ ವೀಕ್ಷಿಸಿದವರಿಂದಲೂ ಮೆಚ್ಚುಗೆ ಗಳಿಸಿತು. ಬಹುಶಃ ಈ ಲಾಕ್ಡೌನ್ ದಿನಗಳಲ್ಲಿ ಅತಿ ಹೆಚ್ಚು ಮಂದಿ ಪ್ರಶಂಸಿಸಿದ ಚಿತ್ರ ಅದಾಗಿತ್ತು.
ನಿರ್ದೇಶಕನ ಸ್ಥಾನದಲ್ಲಿ ಇನ್ನೇನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲಿದ್ದಾರೆ ಎನ್ನುವ ಹಂತದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರು ಚಿಕಿತ್ಸೆಗೆ ದಾಖಲಾಗಿದ್ದ ಆಸ್ಪತ್ರೆಯು ಗುರುವಾರ ರಾತ್ರಿ 9.30ರ ಹೊತ್ತಿಗೆ ಅವರ ನಿಧನದ ಸುದ್ದಿಯನ್ನು ಪ್ರಕಟಿಸಿದೆ.
ಆರಂಭ ಕಾಲದಿಂದಲೂ ಪೃಥ್ವಿರಾಜ್ ಸಿನಿಮಾಗಳಲ್ಲಿ ಒಳ್ಳೆಯ ಕತೆ ಮತ್ತು ಚಿತ್ರಕತೆಗಳಿರುತ್ತವೆ ಎನ್ನುವ ಭರವಸೆ ಮೂಡಿಸಲು ಕಾರಣವಾದವರು ಸ್ಕ್ರಿಪ್ಟ್ ರೈಟರ್ಸ್ ಜೋಡಿಯಾದ ಸಚ್ಚಿ ಮತ್ತು ಸೇತು. ಈ ಜೋಡಿಯು ಚಾಕೊಲೆಟ್',
ಸೀನಿಯರ್ಸ್’, ರಾಬಿನ್ ಹುಡ್',
ಮೇಕಪ್ ಮ್ಯಾನ್’ ಮತ್ತು ಡಬಲ್ಸ್' ಎನ್ನುವ ಯಶಸ್ವಿ ಚಿತ್ರಗಳ ಬಳಿಕ ಬೇರೆ ಬೇರೆಯಾದರು. ಆನಂತರ ಸೇತುವಿಗಿಂತಲೂ ಹೆಚ್ಚು ಗಮನಾರ್ಹ ಸ್ಕ್ರಿಪ್ಟ್ ನೀಡಿದ ಖ್ಯಾತಿ ಸಚ್ಚಿಗೆ ಸಲ್ಲುತ್ತದೆ. ಮೋಹನ್ ಲಾಲ್ ನಟನೆಯಲ್ಲಿ ಜೋಶಿ ನಿರ್ದೇಶನದಲ್ಲಿ ತೆರೆಕಂಡ
ರನ್ ಬೇಬಿ ರನ್’ ಸೇರಿದಂತೆ ಚೇಟಾಯಿಸ್',
ರಾಮ್ ಲೀಲ’, ಶೆರ್ಲಾಕ್ ಟೋಮ್ಸ್',
ಡ್ರೈವಿಂಗ್ ಲೈಸೆನ್ಸ್’ ಮೊದಲಾದ ಚಿತ್ರಗಳು ಜನಪ್ರಿಯವಾದವು. ಅವೆಲ್ಲವುಗಳಿಗೂ ಸಚ್ಚಿಯ ಕತೆ, ಚಿತ್ರಕತೆಯಿತ್ತು. `ಅನಾರ್ಕಲಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ ಐದು ವರ್ಷದ ಬಳಿಕ ಸೇತು ನಿರ್ದೇಶನದಲ್ಲಿ ಈ ವರ್ಷ ಫೆಬ್ರವರಿಯಲ್ಲಿ ತೆರೆಕಂಡ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ’ ಆಗಿತ್ತು.
ಈ ವರ್ಷ ನಮ್ಮನ್ನು ಅಗಲಿದ ಚಿತ್ರರಂಗದ ಪ್ರತಿಭಾವಂತರ ಪಟ್ಟಿಗೆ ಮಲಯಾಳಂ ಸಿನಿಮಾದ ಸಚ್ಚಿ ಕೂಡ ಸೇರಿರುವುದು ದುರಂತ.