ಇಂದಿನಿಂದ `ಕೇರಳ ಆನ್ಲೈನ್ ಚಲನಚಿತ್ರೋತ್ಸವ’

`ಫೆಡರೇಶನ್ ಆಫ್ ಫಿಲ್ಮ್ ಸೊಸೈಟೀಸ್ ಆಫ್ ಇಂಡಿಯಾ (FFSI)ಕೇರಳಂ’ ವತಿಯಿಂದ ಇಂದಿನಿಂದ ಒಂಬತ್ತು ದಿನಗಳ ಕಾಲ ಆನ್ಲೈನ್ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ. ಜುಲೈ 20ರಿಂದ 29ರ ತನಕ ನಡೆಯಲಿರುವ ಈ ಚಲನ ಚಿತ್ರೋತ್ಸವವನ್ನು ಎಫ್ ಐ ಪಿ ಆರ್ ಇ ಎಸ್ ಸಿ ಐ (Federation Internationale de la PRESse CInematographique India)ನ ಕಾರ್ಯದರ್ಶಿ ಮತ್ತು ಎಫ್ ಎಫ್ ಎಸ್ ಐನ ಉಪಾಧ್ಯಕ್ಷ ಪ್ರೇಮೇಂದ್ರ ಮಜುಮ್ದಾರ್ ಉದ್ಘಾಟಿಸಲಿದ್ದಾರೆ.

ಪ್ರಥಮ ಚಿತ್ರ `ವೆಸ್ಟರ್ನ್ ಘಾಟ್ಸ್’

ಇಂದು ಸೋಮವಾರ ಸಂಜೆ 6.30ಕ್ಕೆ ಉದ್ಘಾಟನೆ ನಡೆದ ತಕ್ಷಣ, ಉತ್ಸವದ ಪ್ರಥಮ ಚಿತ್ರವಾಗಿ ಲೆನಿನ್ ಭರತ್ ನಿರ್ದೇಶನದ `ವೆಸ್ಟರ್ನ್ ಘಾಟ್ಸ್’ ಎನ್ನುವ ತಮಿಳು ಸಿನಿಮಾ (ಮೇರ್ಕು ತೊಡರ್ಚಿ ಮಲೈ )ಪ್ರದರ್ಶನಗೊಳ್ಳಲಿದೆ. ಚಿತ್ರವು 20ಕ್ಕೂ ಅಧಿಕ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ನಿರ್ದೇಶಕ ಲೆನಿನ್ ಅವರು ಶ್ರೇಷ್ಠ ಚೊಚ್ಚಲ ಚಿತ್ರಕ್ಕೆ ನೀಡಲ್ಪಡುವ “ಕೆ ಡಬ್ಲ್ಯು ಜೋಸೆಫ್” ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹತ್ತು ದಿನಗಳ ಈ ಚಿತ್ರೋತ್ಸವದಲ್ಲಿ 16 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇವುಗಳಲ್ಲಿ ಐದು ಹೊಸ ಮಲಯಾಳಂ ಚಿತ್ರಗಳು, ಒಂದು ಬೆಂಗಾಲಿ ಫೀಚರ್ ಫಿಲ್ಮ್ ಮತ್ತು ಪ್ರಶಸ್ತಿ ವಿಜೇತ ಕಿರುಚಿತ್ರಗಳು ಸೇರಿವೆ.

ಪ್ರತಿ ಚಿತ್ರಗಳಿಗೂ ಇಂಗ್ಲಿಷ್ ಸಬ್ ಟೈಟಲ್ಸ್ ಇರುತ್ತವೆ

ಪ್ರತಿದಿನ ಸಂಜೆ 7 ಗಂಟೆಗೆ FFSI ಫೇಸ್ಬುಕ್ ಪೇಜ್ ನಲ್ಲಿ ಚಿತ್ರಗಳ ಕುರಿತಾದ ಮಾಹಿತಿಯನ್ನು ನೀಡಲಾಗುವುದು. ಅಲ್ಲಿ ನೀಡಲಾಗುವ ಲಿಂಕ್ ಬಳಸಿಕೊಂಡು ಸಿನಿಮಾ ಪ್ರದರ್ಶನಗೊಳ್ಳುವ ಸೈಟ್ ಪ್ರವೇಶಿಸಬಹುದಾಗಿದ್ದು, ಅದು 24 ಗಂಟೆ ಕಾಲ FFSIಪೇಜ್ ಮತ್ತು ಗ್ರೂಪ್ ಗಳಲ್ಲಿ ಲಭ್ಯವಾಗಲಿವೆ. ಪ್ರತಿದಿನ ಸಂಜೆ ಏಳು ಗಂಟೆಗೆ ಮೊದಲು ಅದೇ ಪೇಜ್ ನಲ್ಲಿಯೇ ಯೂಸರ್ ನೇಮ್ ಮತ್ತು ಪಾಸ್ವರ್ಡ್ ನೀಡುವುದಾಗಿ ಫೆಸ್ಟಿವಲ್ ಡೈರೆಕ್ಟರ್ ಪ್ರೇಮಚಂದ್ರನ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೀಡಲಾಗಿರುವ ಫೇಸ್ಬುಕ್ ಲಿಂಕ್ ಕ್ಲಿಕ್ ಮಾಡಬಹುದು.

Recommended For You

Leave a Reply

error: Content is protected !!
%d bloggers like this: