
ಈ ಜಗತ್ತನ್ನು ಬಿಡುತ್ತಿದ್ದೇನೆ. ಈ ಡಿಪ್ರೆಶನ್ ಮತ್ತು ಜಗತ್ತಿಗೆ ಗುಡ್ ಬಾಯ್' ಎನ್ನುವ ಫೇಸ್ಬುಕ್ ಪೋಸ್ಟ್ ಹಾಕಿ ಸೈಲೆಂಟಾಗಿದ್ದಾರೆ ಜಯಶ್ರೀ ರಾಮಯ್ಯ. ಅವರು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ '
ಬಿಗ್ ಬಾಸ್ ಸೀಸನ್ 3′ ರ ಸ್ಪರ್ಧಿಯಾಗಿ ಗುರುತಿಸಿಕೊಂಡವರು. ಇಂಥದೊಂದು ಪೋಸ್ಟ್ ಹಾಕಿ ಫೇಸ್ಬುಕ್ ಪೋಸ್ಟ್ ಬಳಿಕ ಅವರನ್ನು ಫೇಸ್ಬುಕ್ ಮತ್ತು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದವರಿಗೆ ಯಾವುದೇ ಪ್ರತಿಕ್ರಿಯೆ ದೊರಕಿರಲಿಲ್ಲ. ಇದೀಗ ಬಂದ ಮಾಹಿತಿಯ ಪ್ರಕಾರ ಆಕೆಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಲಾಗಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಅವರ ಜತೆಗೆ ಬಿಗ್ ಬಾಸ್ ಸೀಸನಲ್ಲಿ ಜತೆಯಾಗಿದ್ದ ಒಂದಷ್ಟು ಕಲಾವಿದರನ್ನು ಸಂಪರ್ಕಿಸಿ ವಿಚಾರಿಸಿದಾಗ ಕೆಲವರಿಗೆ ವಿಷಯವೇ ಗೊತ್ತಿರಲಿಲ್ಲ. ಸಂಪರ್ಕ ಸಂಖ್ಯೆ ಇದ್ದವರು ಕರೆ ಮಾಡಿದಾಗ ಅವರಿಗೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಬಿಗ್ ಬಾಸ್ ಬಳಿಕ ಜಯಶ್ರೀಯವರು ಇಮ್ರಾನ್ ಸರ್ದಾರಿಯ ನಿರ್ದೇಶಿಸಿದ `ಉಪ್ಪು ಹುಳಿ ಖಾರ’ ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಇದುವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ರೀತಿಯಲ್ಲಿಯೇ ಸಕ್ರಿಯರಾಗಿದ್ದ ಜಯಶ್ರೀ ತಮಾಷೆಯ, ನೃತ್ಯದ ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಹಾಕಿ ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಹೊತ್ತಿಗೆ ಹಾಕಿರುವ ಪೋಸ್ಟ್ ಎಲ್ಲರಲ್ಲಿಯೂ ಆತಂಕ ಸೃಷ್ಟಿಸಿತ್ತು.

ಬಿಗ್ ಬಾಸ್ ಸೀಸನ್ ಮೂರರಲ್ಲಿ ಜಯಶ್ರೀಯ ಸ್ನೇಹಿತೆಯಾಗಿದ್ದ ಭಾವನಾ ಬೆಳಗೆರೆಯವರನ್ನು ನಾವು ಸಂಪರ್ಕಿಸಿದಾಗ, ಪೋಸ್ಟ್ ನೋಡಿದಾಗಿನಿಂದ ತಾವು ಕೂಡ ಆಕೆಯ ಫೋನ್ ಗೆ ಟ್ರೈ ಮಾಡುತ್ತಿದ್ದು ಇದುವರೆಗೂ ಪೋನ್ ರಿಸೀವ್ ಮಾಡಿಲ್ಲ. ಹಿಂದೆ ತಾತನ ಜತೆಗೆ ಇದ್ದಳು. ಅಲ್ಲಿಂದ ಹನುಮಂತ ನಗರಕ್ಕೆ ಶಿಫ್ಟಾಗಿರುವುದಾಗಿ ಹೇಳಿದ್ದಳು. ನಾನು ಈಗಾಗಲೇ ಪೊಲೀಸರಿಗೆ ಫೋನ್ ಮಾಡಿ ನಂಬರ್ ಎಲ್ಲಿದೆ ಎಂದು ಟ್ರ್ಯಾಪ್ ಮಾಡಲು ತಿಳಿಸಿದ್ದೇನೆ ಎಂದಿದ್ದರು.
ಈವೆಂಟ್ ಆರ್ಗನೈಸರ್ ಆಗಿಯೂ ಕೆಲಸ ಮಾಡುತ್ತಿದ್ದ ಜಯಶ್ರೀ ಈ ಹಿಂದೆ ತಮ್ಮ ಸೋದರ ಮಾವನ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ಸೋದರ ಮಾನ ಗಿರೀಶ್ ತಮಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ ನಡುರಾತ್ರಿ ನಮ್ಮನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಆಸ್ತಿ ವಿವಾದ ಮತ್ತು ಖಾಸಗಿ ಕಾರಣಗಳಿಂದಾಗಿ ಜಯಶ್ರೀ ಮತ್ತು ಗಿರೀಶ್ ನಡುವೆ ಜಗಳವಾಗಿದ್ದು ಕಳೆದ ರಾತ್ರಿ ಜಯಶ್ರೀ ಮತ್ತವರ ತಾಯಿಯನ್ನು ಹೊರಹಾಕಿದ್ದಾರೆ ಎಂದು ತಿಳಿದಿತ್ತು. ಆನಂತರ ಮನೆ ಬದಲಾಯಿಸಿದ ಬಳಿಕ ಹನುಮಂತ ನಗರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಈ ವರ್ಷ ಸಂಕಷ್ಟದ ಸಾವಿನ ಜತೆಗೆ ಡಿಪ್ರೆಶನ್ ಆತ್ಮಹತ್ಯೆಗಳಿಗೂ ಕೊರತೆ ಇಲ್ಲ. ಹಾಗಾಗಿಯೇ ಜಯಶ್ರೀಯವರ ಹೇಳಿಕೆ ಹೆಚ್ಚಿನವರಿಗೆ ಆತಂಕ ಮೂಡಿಸಿದೆ. ಸೀಸನ್ ತ್ರಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ನಟಿ ಶ್ರುತಿ, ಅಯ್ಯಪ್ಪ, ಮಾಸ್ಟರ್ ಆನಂದ್ ಮೊದಲಾದವರು ವಿಚಾರ ತಿಳಿದಾಗ ಅಚ್ಚರಿ, ಆತಂಕ ವ್ಯಕ್ತಪಡಿಸಿದ್ದಾರೆ. ಕಾರಣ ಏನಾಗಿತ್ತು ಎನ್ನುವುದನ್ನು ಇದೀಗ ಆಸ್ಪತ್ರೆಯಲ್ಲಿರುವ ಜಯಶ್ರೀಯವರೇ ನೀಡಬೇಕಿದೆ. ಆದರೆ ಸದ್ಯಕ್ಕೆ ಹಳೆಯ ಪೋಸ್ಟ್ ಡಿಲಿಟ್ ಮಾಡಿ ಹೀಗೊಂದು ಪೋಸ್ಟ್ ಹಾಕಿದ್ದಾರೆ !!

