
ಚಿತ್ರಲೋಕ.ಕಾಮ್ ಕನ್ನಡದ ಪ್ರಥಮ ಸಿನಿಮಾ ವೆಬ್ ಪೋರ್ಟಲ್. ಅದರ ಮೂಲಕ ಜನಪ್ರಿಯರಾಗಿರುವ ಹಿರಿಯ ಸಿನಿಮಾ ಪತ್ರಕರ್ತರು ಕೆ ಎಂ ವೀರೇಶ್. ಅವರ ಪುತ್ರಿಯ ವಿವಾಹ ಇಂದು ನೆರವೇರಿತು.

ವೀರೇಶ್ ಅವರ ಪುತ್ರಿ ಕೃತ್ತಿಕಾ ಅವರು ಮನೋಜ್ ಕುಮಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಪ್ರವೇಶಿಸಿದ್ದಾರೆ. ವೀರೇಶ್ ಮತ್ತು ತನುಜಾ ವೀರೇಶ್ ಅವರ ಪುತ್ರಿ ಕೃತ್ತಿಕಾ, ಬಸವರಾಜು ದೊಡ್ಡಮನಿ ಮತ್ತು ವನಿತಾ ಅವರ ಪುತ್ರ ಮನೋಜ್ ಕುಮಾರ್ ಜತೆಗೆ ಸಪ್ತಪದಿ ತುಳಿದಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ 9.45ರ ಸಿಂಹ ಲಗ್ನದಲ್ಲಿ ಕೃತ್ತಿಕಾ, ಮನೋಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರಾಜರಾಜೇಶ್ವರಿ ನಗರದ ಷಣ್ಮುಖ ದೇವಸ್ಥಾನದ ಸಮೀಪದಲ್ಲಿರೋ ಶಕ್ತಿ ಷಣ್ಮುಖ ಭವನದಲ್ಲಿ ವಿವಾಹ ಕಾರ್ಯ ನೆರವೇರಿತು.

ಕೋವಿಡ್ 19 ಮುನ್ನೆಚ್ಚರಿಕೆಯಾಗಿ ಶಕ್ತಿ ಷಣ್ಮುಖ ಭವನವನ್ನು ಸ್ಯಾನಿಟೈಸ್ ಮಾಡಿಸಲಾಗಿತ್ತು. ನವ ವಧೂ ವರರಿಗೆ ಬಂಧು ಮಿತ್ರರು ಶುಭಕೋರಿದರು. ಆಕ್ಟರ್, ಕಢ ಬೆಳದಿಂಗಳು ಸಿನಿಮಾಗಳ ನಿರ್ಮಾಪಕರಾಗಿಯೂ ಗುರುತಿಸಿಕೊಂಡ ವೀರೇಶ್ ಪುತ್ರಿಯ ವಿವಾಹದಲ್ಲಿ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮೊದಲಾದವರು ಉಪಸ್ಥಿತಿತರಿದ್ದರು.



