ಅಪಘಾತಕ್ಕೊಳಗಾಗಿ ಚಿಕಿತ್ಸೆಯಲ್ಲಿರುವ ಸ್ಟಿಲ್ ಸೀನು ಕುರಿತಾದ ವಿಸ್ತೃತ ವರದಿಯನ್ನು ನೀವು ಈಗಾಗಲೇ ಸಿನಿಕನ್ನಡ.ಕಾಮ್‌ನಲ್ಲಿ ಓದಿರುತ್ತೀರಿ.
ಇದೀಗ ಅವರನ್ನು ಭೇಟಿಯಾಗಿರುವ IFMA(ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಶನ್) ಕಷ್ಟಕ್ಕೆ ಸ್ಪಂದಿಸಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಕನ್ನಡ ಸಿನಿಮಾರಂಗದಲ್ಲಿ ಕಳೆದ ಮೂರು ದಶಕಗಳಿಂದ ಸ್ಥಿರ ಚಿತ್ರಛಾಯಾಗ್ರಾಹಕರಾಗಿ ವೃತ್ತಿಯಲ್ಲಿರುವ ಶ್ರೀನಿವಾಸ್ ಅವರು ಮಂಗಳವಾರ ರಾಮನಗರದಿಂದ ತಮ್ಮ ದ್ವಿಚಕ್ರ ವಾಹನದಲ್ಲಿ ಮರಳುತ್ತಿರಬೇಕಾದರೆ ಸ್ಕಿಡ್ ಆಗಿ ಬಿದ್ದು ತಲೆಗೆ ಏಟು ಮಾಡಿಕೊಂಡಿರುವುದಾಗಿ ಅವರ ಮನೆ ಮಂದಿ ಮಾಹಿತಿ ನೀಡಿದ್ದರು. ಪ್ರಸ್ತುತ ತುಮಕೂರು ರಸ್ತೆಯ `ಸ್ಪರ್ಶ’ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಸೀನು ಅವರು ಕೋಮಾ ಸ್ಥಿತಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಐಎಫ್ ಎಂ ಎ ತಂಡ ತಮ್ಮ ಮತ್ತು ಅಂಬೇಡ್ಕರ್ ಸೇನೆ ವತಿಯಿಂದ ಹಣ ಸಹಾಯ ನೀಡಿದೆ. ಆಸ್ಪತ್ರೆಯ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಹೆಚ್ಚಿನ ಹಣ ತಗೆದುಕೊಳ್ಳದೆ ಪ್ರಾಣ ಉಳಿಸಿಕೊಡಿ ಎಂದು ಮನವಿ ಮಾಡಿದೆ. ಸ್ಟಿಲ್ ಶ್ರೀನಿವಾಸ್ ಅವರ ಕುಟುಂಬದವರ ಜತೆ ಮಾತನಾಡಿ ಧೈರ್ಯ ತುಂಬಿದ ಐಎಫ್ಎಂಎ ಮತ್ತು ಅಂಬೇಡ್ಕರ್ ಸೇನೆಯ ರಾಜ್ಯಾಧಕ್ಷ ಪಿ ಮೂರ್ತಿ, ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್ ಅವರ ಜತೆಗೆ ಖಜಾಂಜಿ ಚೆಲುವರಾಜ್ ಸಮಿತಿ ಸದಸ್ಯ ಶಂಕರ್ ರಾಮಲಿಂಗಯ್ಯ ಮೊದಲಾದವರು ಉಪಸ್ಥಿತರಿದ್ದರು.
ಐಎಫ್ ಎಂ ಸಂಸ್ಥೆಯು ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದು ತಿಂಗಳುಗಳಷ್ಟೇ ಉರುಳಿವೆ. ಅದರ ನಡುವೆ ಇಂಥದೊಂದು ಸೇವೆಗೆ ಮುಂದಾಗಿರುವುದು ಪ್ರಶಂಸಾರ್ಹ ವಿಚಾರ ಎಂದು ನಾಡಿನ ಗಣ್ಯರು ಅಭಿನಂದಿಸಿದ್ದಾರೆ.