‘ಸಿನಿಮಾಮರ’ ಕನ್ನಡದಲ್ಲಿ ಸಾಹಿತ್ಯ ಕೃತಿಗಳನ್ನ ಆಧರಿಸಿದ ಹಾಗೂ ವಿಷಯಾಧಾರಿತ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಆರಂಭವಾಗಿ ಬರುವ ಹೊಸ ಸಂಸ್ಥೆ.
ಕನ್ನಡ ನಾಡು ಕಂಡ ಅಪರೂಪದ ಚಿಂತಕ ಕತೆಗಾರ ವಿಚಾರವಾದಿ ಪರಿಸರಪ್ರೇಮಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿಸಿ ಕನ್ನಡ ಸಂಸ್ಕೃತಿಯನ್ನು ಅಪಾರವಾಗಿ ಪ್ರಭಾವಿಸಿ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಕೆ.ಪಿ.ಪೂರ್ಣಚಂದ್ರತೇಜಸ್ವಿ ಯವರ 82ನೇ ಜನ್ಮದಿನದಂದು ಸಿನಿಮಾಮರ ತೇಜಸ್ವಿಯವರ ಅಪರೂಪದ ಕಥೆ ಡೇರ್ ಡೆವಿಲ್ ಮುಸ್ತಾಫಾ ವನ್ನು ಪುಟದಿಂದ ಪರದೆಗೆ ತರಲು ಕಥೆಯ ಹಕ್ಕುಗಳನ್ನು ಪಡೆದು ಚಿತ್ರೀಕರಣಕ್ಕೆ ಸಜ್ಜಾಗಿದೆ. ಕನ್ನಡದಲ್ಲಿ ಇದೊಂದು ವಿಶಿಷ್ಟ ಪ್ರಯೋಗ. ಇದೇ ಮೊದಲ ಬಾರಿ ಕಥೆಗಾರನ ಓದುಗರೇ ಸೇರಿ ಕ್ರೌಡ್ ಫಂಡಿಂಗ್ ಮಾದರಿಯಲ್ಲಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಡೇರ್ ಡೆವಿಲ್ ಮುಸ್ತಾಫಾ. ತೇಜಸ್ವಿಯವರ ಹಲವಾರು ಓದುಗರು ತಮ್ಮ ಮೆಚ್ಚಿನ ಕಥೆಗಾರನ ಕಥೆಯನ್ನು ಪುಟದಿಂದ ಪರದೆಗೆ ತರಲು ಸಿನಿಮಾಮರ ತಂಡದ ಜೊತೆ ಕೈಗೂಡಿಸಿದ್ದಾರೆ. ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಯುವ ನಿರ್ದೇಶಕ ತೇಜಸ್ವಿ ಅಭಿಮಾನಿ ಓದುಗ ಶಶಾಂಕ್ ಸೋಗಾಲ್.
ಸೆಪ್ಟೆಂಬರ್ 08 ತೇಜಸ್ವಿಯವರ ಜನ್ಮದಿನವನ್ನು ಸಂಭ್ರಮಿಸಲು ಸಿನಿಮಾಮರ ಪೂಚಂತೇಪ್ಯಾರಾಗ್ರಾಫ್ ಎಂಬ ತೇಜಸ್ವಿಯನ್ನು ಓದುವ ಅಭಿಯಾನವನ್ನು ಹಮ್ಮಿಕೊಂಡಿತ್ತು. ತೇಜಸ್ವಿಯವರ ನೂರಾರು ಅಭಿಮಾನಿಗಳು ಈ ಅಭಿಯಾನದಲ್ಲಿ ಭಾಗವಹಿಸಿ ತಾವು ಇಷ್ಟಪಟ್ಟ ತೇಜಸ್ವಿಯವರ ಕೃತಿಯೊಂದರ ಭಾಗವನ್ನು ಓದಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ತಾವು ಓದುವುದಲ್ಲದೆ ಬೇರೆಯವರಿಗೆ ಓದುವಂತೆ ಪ್ರೇರೇಪಿಸಿ ತೇಜಸ್ವಿ ಓದಿನ ಸವಿಯನ್ನು ಹರಡಿದ್ದಾರೆ. ಶ್ರೀಮತಿ ರಾಜೇಶ್ವರಿ ತೇಜಸ್ವಿ, ಕೆ.ಪಿ.ಈಶಾನ್ಯೆ, ಕೆ.ಪಿ.ಸುಸ್ಮಿತ, ಶ್ರೀಮತಿ ತಮಾಲ, ಕಥೆಗಾರ ವಸುಧೇಂದ್ರ, ನಟರಾದ ಮಂಡ್ಯ ರಮೇಶ್, ಪೂರ್ಣಚಂದ್ರ ಮೈಸೂರು, keb ನಾಗಭೂಷಣ ಕಿರಣ್ ನಾಯಕ್ ,ಗೋಪಾಲ್ ದೇಶಪಾಂಡೆ, ನಟಿ ಭವಾನಿ ಮಲ್ಲೇಲ ನಿರ್ದೇಶಕ ಅರವಿಂದ ಶಾಸ್ತ್ರಿ ರಂಗಕರ್ಮಿ ಗೌರಿದತ್ತು, ಲೇಖಕ ಕೆ.ಪುಟ್ಟಸ್ವಾಮಿ ಮುಂತಾದವರು ಈ ತೇಜಸ್ವಿ ಓದಿನ ಅಭಿಯಾನದಲ್ಲಿ ಭಾಗವಹಿಸಿ ಸ್ಫೂರ್ತಿ ತುಂಬಿದ್ದಾರೆ. ದೂರದ ನೆದರಲೆಂಡ್ ದೇಶದ ಯುವತಿ ಕಾಜಾ ಹರ್ಬೆರ್ ಕರ್ವಾಲೋ ಕೃತಿಯ ಜರ್ಮನ್ ಅನುವಾದವನ್ನು ಓದಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಈ ಅಭಿಯಾನದಲ್ಲಿ ಭಾಗವಹಿಸಿರುವುದು ವಿಶೇಷ.
ಸಿನಿಮಾಮರ ತಂಡ ತೇಜಸ್ವಿಯವರ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಮಾಡುವುದಕ್ಕೆ ಪೂರ್ವಭಾವಿಯಾಗಿ ಮೂರು ಪ್ರಮೋಷನಲ್ ವಿಡಿಯೋಗಳನ್ನು ಮಾಡಿದೆ. ಕನ್ನಡ ಸಾಹಿತ್ಯ ಸಂಸ್ಕೃತಿ ಬಾಸು, ಸಹಾಯಕ ನಿರ್ದೇಶಕ, ಅಸಹಾಯಕ ನಿರ್ದೇಶಕ ಹಾಗೂ ತೇಜಸ್ವಿ ವಿಸ್ಮಯ ಎಂಬ ಮೂರು ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ. ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಕರು ಈ ವೀಡಿಯೋಗಳನ್ನು ನೋಡಿ ಮೆಚ್ಚಿದ್ದಾರೆ. ಚಿತ್ರರಂಗದ ಇತಿಹಾಸದಲ್ಲೇ ಈ ತರ ಹೊಸ ಮಾದರಿಯಲ್ಲಿ 3 ಪ್ರೋಮೊಗಳ ಮೂಲಕ ಸಿನಿಮಾದ ಶೀರ್ಷಿಕೆ ಬಿಡುಗಡೆ ಮಾಡಿರುವುದು ಇದೇ ಪ್ರಥಮ ಎನ್ನಬಹುದು.
ತೇಜಸ್ವಿಯವರ ಜನ್ಮದಿನವಾದ ಸೆಪ್ಟೆಂಬರ್ 08 ರಂದೇ ಸಿನಿಮಾಮರ ತಂಡವು ಡೇರ್ ಡೆವಿಲ್ ಮುಸ್ತಾಫಾ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ.
ಸಿನಿಮಾಮರ ತಂಡವು ತೇಜಸ್ವಿ ಓದುಗರೇ ಸೇರಿ ಕ್ರೌಡ್ ಫಂಡಿಂಗ್ ಮಾದರಿಯಲ್ಲಿ ನಿರ್ಮಿಸುತ್ತಿರುವ ಈ ಸಿನಿಮಾ ನಿರ್ಮಾಣದಲ್ಲಿ ಪಾಲ್ಗೊಳ್ಳಲು ಆಸಕ್ತ ತೇಜಸ್ವಿ ಓದುಗರನ್ನು ಆಹ್ವಾನಿಸುತ್ತಿದೆ ವಿವರಗಳಿಗೆ ಸಿನಿಮಾಮರ ವೆಬ್ ಸೈಟ್ ಗೆ ಭೇಟಿ ನೀಡಬಹುದು.
www.cinemamara.art
ಚಿತ್ರೀಕರಣವು ಅಕ್ಟೋಬರ್ನಲ್ಲಿ ಶುರುವಾಗಲಿದ್ದು ಬಹುತೇಕ ಹೊಸಬರೇ ರಂಗಭೂಮಿ ಕಲಾವಿದರು ಸೇರಿದಂತೆ ಹೊಸ ಮುಖಗಳು ಈ ಚಿತ್ರದಲ್ಲಿ ಇರುತ್ತದೆ. ತಂತ್ರಜ್ಞರು ಹೊಸಬರೇ. ರಾಹುಲ್ ರಾಯ್ ಛಾಯಾಗ್ರಹಣ, ಶರತ್ ವಸಿಷ್ಠ ಸಂಕಲನ, ಅನಂತ ಶಾಂದ್ರೇಯ ಮತ್ತು ರಾಘವೇಂದ್ರ ಮಾಯಕೊಂಡ ಚಿತ್ರಕಥೆ ಮತ್ತು ಸಂಭಾಷಣೆ, ಶಶಾಂಕ ಸೋಗಾಲ ನಿರ್ದೇಶನ.