ಸರಿಯಾದ ತನಿಖೆ ನಡೆದರೆ ಶವಗಳು ಎದ್ದು ಕೂರಲಿವೆ..! – ಇಂದ್ರಜಿತ್ ಲಂಕೇಶ್

ಇಂದು ಇಂದ್ರಜಿತ್ ಲಂಕೇಶ್ ಅವರ ಜನ್ಮದಿನ. ಈ ಸಂದರ್ಭದಲ್ಲಿ ಕೂಡ ಅವರು ಡ್ರಗ್ಸ್ ವಿಚಾರದಲ್ಲಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎನ್ನುವ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಂಡರು.

“ಎರಡು ವಾರಗಳಿಂದ ನಾನು ಹೆಸರು ಕೊಟ್ಟ ಮೇಲೆ ಏನು ಡೆವಲಪ್ ಆಗಿದೆ ಎನ್ನುವುದು ನೀವೆಲ್ಲ ನೋಡಿದ್ದೀರ. ಆದರೆ ಇಷ್ಟು ದಿನಗಳ ಕಾಲ ನಡೆದಿರುವುದು ಕಡಿಮೆ. ಇನ್ನಷ್ಟು ಆಗಬೇಕಿತ್ತು. ಪೊಲೀಸರ ಕೈಕಟ್ಟಿ ಹಾಕಿದಂತಾಗಿದೆ. ಇದರಲ್ಲಿ ನಟರು, ರಾಜಕಾರಣಿಗಳು ಇವೆಂಟ್ ಮ್ಯಾನೇಜರ್ಸ್ ಕೂಡ ಇದ್ದಾರೆ. ನಿರ್ದೇಶಕರ, ಕಲಾವಿದರ ಮಕ್ಕಳನ್ನು ಅರೆಸ್ಟ್ ಮಾಡಿದರೆ ನಮಗೆ ಖುಷಿ ಒಳ್ಳೆಯ ಸಂದೇಶ ಸಿಕ್ಕಂಥ ಖುಷಿಯಾಗ್ತಿದೆ” ಎಂದರು.

ಸಿಬಿಐ ತನಿಖೆಯಾಗಲಿ

“ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಕನ್ನಡದ ಹಿರಿಯ ನಿರ್ದೇಶಕರ ಮಗನನ್ನು ಯಾಕೆ ಇನ್ನೂ ಕರೆಸಿಲ್ಲ? ನಟಿಯೊಬ್ಬಳನ್ನು ಮುರಳೀಧರ ರಾವ್ ಅವರು ಬಂದು ಪಕ್ಷಕ್ಕೆ ಸೇರಿಸಲು ಒತ್ತಡ ಹಾಕುವುದಾದರೆ ಅವರು ಬಿಜೆಪಿಗೆ ಸಲ್ಲಿಸಿದ ಸೇವೆ ಏನಿರಬಹುದು? ಹಾಗಾಗಿ ಇಲ್ಲಿ ಪ್ರತಿ ಪಕ್ಷವೂ ಕೆಲಸ ಮಾಡುತ್ತಿಲ್ಲ, ಆಡಳಿತ ಪಕ್ಷವೂ ಕೂಡ ಕೈ ಜೋಡಿಸಿದ ಹಾಗಿದೆ. ಆದಿತ್ಯ ಆಳ್ವನನ್ನು ಯಾಕೆ ಅರೆಸ್ಟ್ ಮಾಡಿಲ್ಲ? ಎಲ್ಲದಕ್ಕೂ ಸರಿಯಾದ ತನಿಖೆ ನಡೆಯಬೇಕಾದರೆ ಸಿಬಿಐ ಬರಲೇಬೇಕು. ಯಾಕೆಂದರೆ ಸುಶಾಂತ್ ಸಿಂಗ್ ರಾಜ್ ಪೂತ್ ಸಾವು ಮತ್ತು ದಿಶಾ ಸಾವಿನ ವಿಚಾರದಲ್ಲಿ ಕೂಡ ಸಿಬಿಐ ಪ್ರವೇಶದ ಬಳಿಕ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿವೆ. ಇಲ್ಲಿ ಕೂಡ ಸಿಬಿಐ ಪ್ರವೇಶವಾದರೆ ಹೂತಿರುವ ಶವಗಳು ಎದ್ದು ಬರಲಿದೆ” ಎಂದರು ಇಂದ್ರಜಿತ್.

Recommended For You

Leave a Reply

error: Content is protected !!
%d bloggers like this: