ಮಹೇಶ್‌ ಗುರು ಜರ್ನಿ ಶುರು

ಇವರ ಹೆಸರು ಮಹೇಶ್ ಗುರು. ಎತ್ತರ ಐದಡಿ ಹತ್ತು ಇಂಚು. ಈ ವಿವರ ಕೇಳಿ ಇವರು ನಾಪತ್ತೆಯಾಗಿದ್ದಾರೆ ಎಂದುಕೊಳ್ಳಬೇಡಿ. ಈಗಷ್ಟೇ ಒಳ್ಳೆಯ ಸ್ಥಾನವೊಂದರಲ್ಲಿ ಪತ್ತೆಯಾಗಿದ್ದಾರೆ. ಹೌದು; ಇದುವರೆಗೆ ಕಿರುತೆರೆ ಧಾರಾವಾಹಿ, ಕಿರುಚಿತ್ರಗಳಲ್ಲಿ ಪಾತ್ರ ಮಾಡುತ್ತಿದ್ದ ಮಹೇಶ್ ಗುರು ಪ್ರಥಮ ಬಾರಿಗೆ ಸಿನಿಮಾವೊಂದರ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು `ಲಾಂಗ್ ಡ್ರೈವ್.’ ಆದರೆ ಈ ಹಂತಕ್ಕೆ ತಲುಪುವುದರ ಹಿಂದೆ ಮಹೇಶ್ ಗುರು ಅವರ ಲಾಂಗ್ ಜರ್ನಿ ಇದೆ.

ಮಹೇಶ್ ಗುರು ಅವರು ರಾಮನಗರದವರು. ಸಿನಿಮಾ ಆಸಕ್ತಿ ಹುಟ್ಟಿದ್ದೇ ಪಕ್ಕದ ಮಂಡ್ಯದಿಂದಲೇ ಬಂದು ಇಂಡಿಯಾದ ನೋಟೇಬಲ್ ನಟನಾದ ಅಂಬರೀಷ್ ಅವರ ಚಿತ್ರಗಳಿಂದ! ಮನೆಯವರ ಪ್ರೋತ್ಸಾಹ ಪಡೆದು ಸೇರಿಕೊಂಡಿದ್ದು ನಾಗರಾಜ್ ಕೋಟೆಯವರ ಬಣ್ಣ' ಅಭಿನಯ ಶಾಲೆಯನ್ನು ಕಿರುತೆರೆಯಲ್ಲಿಬ್ರಹ್ಮಗಂಟು’, ಕಿನ್ನರಿ', ಶಾಂತಂ ಪಾಪಂ’ ಮೊದಲಾದ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ ಬಳಿಕ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಮಾಯಾಬಜಾರ್' ಚಿತ್ರದ ಮೂಲಕ. ಚಿತ್ರದಲ್ಲಿನ ಆಟೋ ಡ್ರೈವರ್ ಪಾತ್ರದಲ್ಲಿನದು ಗಮನ ಸೆಳೆಯುವ ಅಭಿನಯ. ರಂಗಭೂಮಿ, ಬೀದಿ ನಾಟಕಗಳಲ್ಲಿ ಕೂಡ ಗುರುತಿಸಿಕೊಂಡ ಕಲಾವಿದನಾದ ಕಾರಣ ಎಲ್ಲ ರೀತಿಯ ಪಾತ್ರಗಳಿಗೆ ಸಿದ್ಧರಾಗಬಲ್ಲ ಮನೋಭಾವ. ಆದರೆ ನೆಗೆಟಿವ್ ಪಾತ್ರಗಳ ಕಡೆಗಿನ ಒಲವು ಒಂದು ಮುಷ್ಟಿ ಹೆಚ್ಚೇ ಇದೆ. ಅಲ್ಲದೆಪಾರ್ಟ್ನರ್’ ಎನ್ನುವ ಚಿತ್ರದಲ್ಲಿ ನಟಿಸುವುದರ ಜತೆಗೆ ಚಿತ್ರಕತೆ, ಸಂಭಾಷಣೆಯನ್ನೂ ನಿರ್ವಹಿಸಿರುವ ಬಹುಮುಖ ಪ್ರತಿಭೆ. ಒಂದಷ್ಟು ಚಿತ್ರಗಳ ಪಾತ್ರಗಳಿಗೆ ಕಂಠದಾನವನ್ನು ಕೂಡ ನೀಡಿರುವ ಮಹೇಶ್ ಗುರು ಚಿತ್ರರಂಗದಲ್ಲೇ ಜನಪ್ರಿಯರಾಗುವ ಎಲ್ಲ ಲಕ್ಷಣಗಳೂ ಇವೆ.

ಮಿಸ್ಟರಿ',ಒಂದು ಗಂಟೆಯ ಕತೆ’ ಸಿನಿಮಾಗಳಲ್ಲಿ ಗುರುತಿಸಿಕೊಂಡ ಬಳಿಕ, ಈ ಲಾಕ್ ಡೌನ್ ಸಮಯದಲ್ಲಿ ಸದ್ದಿಲ್ಲದೆ ಮೂಡಿ ಬಂದಿರುವ ಚಿತ್ರ ಲಾಂಗ್ ಡ್ರೈವ್. ಗುಡ್ ವಿಲ್ ಪ್ರೊಡಕ್ಷನ್' ಮಂಜುನಾಥ್ ಗೌಡ ನಿರ್ಮಾಣ, ಶ್ರೀರಾಜ್ ನಿರ್ದೇಶನ ಮತ್ತು ಕಿಟ್ಟಿ ಕೌಶಿಕ್ ಛಾಯಾಗ್ರಹಣವಿರುವಲಾಂಗ್ ಡ್ರೈವ್’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿರ್ವಹಿಸುವ ಅವಕಾಶ ಒಲಿದು ಬಂದಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಮಹೇಶ್ ಗುರುವಿಗೆ ಸಿನಿಕನ್ನಡದ ಕಡೆಯಿಂದ ಶುಭ ಹಾರೈಕೆಗಳು.

Recommended For You

Leave a Reply

error: Content is protected !!
%d bloggers like this: