ಕನ್ನಡದ ಜನಪ್ರಿಯ ವಾರ್ತಾವಾಹಿನಿ ಟಿವಿ9ನಲ್ಲಿ ‘ಫಿಲ್ಮಿ ಫಂಡ’ ಜನಪ್ರಿಯ ಸಿನಿಮಾ ಕಾರ್ಯಕ್ರಮ. ಕಳೆದ ಮೂರು ವರ್ಷಗಳಿಂದ ಅದರ ಜನಪ್ರಿಯ ವರದಿಗಾರ್ತಿಯಾಗಿ ಸಾಕಷ್ಟು ಸುದ್ದಿಗಳನ್ನು ನೀಡಿರುವ ಭಾಗ್ಯ ಇಂದು ವಿವಾಹಿತೆಯಾದರು.
ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿರುವ ಅಂಜನ್ ಕುಮಾರ್ ಎನ್ನುವ ವರನನ್ನು ಮಲ್ಲೇಶ್ವರದ ‘ಬಡಗನಾಡು ಕಲ್ಯಾಣ ಮಂಟಪ’ದಲ್ಲಿ ಕೈ ಹಿಡಿದರು. ನಿನ್ನೆ ದಿನಾಂಕ 26ರಂದು ಅದೇ ಕಲ್ಯಾಣ ಮಂಟಪದಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನೆರವೇರಿತ್ತು.
ನಾಡಿನ ಎಲ್ಲ ಜನಪ್ರಿಯ ವಾರ್ತಾವಾಹಿನಿಯ ವರದಿಗಾರರು ಮತ್ತು ಮಾಧ್ಯಮದ ಮಿತ್ರರು ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಹಿಂದೆ ಪ್ರಸಾರದಲ್ಲಿದ್ದ ‘ಸುದ್ದಿ ಟಿ.ವಿ’ ಮೂಲಕ ವರದಿಗಾರ್ತಿಯಾಗಿ ವೃತ್ತಿ ಬದುಕು ಶುರು ಮಾಡಿದ ಭಾಗ್ಯ ವಿವಾಹದ ಬಳಿಕ ತಮ್ಮ ಮಾಧ್ಯಮದ ವೃತ್ತಿಯಲ್ಲಿ ಮುಂದುವರಿಯಲಿದ್ದಾರೆ.