ಕನ್ನಡದ ಕನಸುಗಾರ ಬಿಎಮ್ ಗಿರಿರಾಜ್ ನಿರ್ದೇಶನದಲ್ಲಿ `ಕನ್ನಡಿಗ’ನಾಗಿ ನಟಿಸುತ್ತಿರುವ ಚಿತ್ರದ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತು. ಚಿತ್ರದಲ್ಲಿ ಚೆನ್ನಭೈರಾದೇವಿ ಎನ್ನುವ ರಾಣಿಯ ಪಾತ್ರದಲ್ಲಿ ಸುಮಲತಾ ಅಂಬರೀಷ್ ಅವರು ನಟಿಸಲಿದ್ದಾರೆ ಎಂದು ನಿರ್ದೇಶಕ ಗಿರಿರಾಜ್ ಮುಹೂರ್ತದ ವೇಳೆ ತಿಳಿಸಿದ್ದರು. ಆದರೆ ಇದೀಗ ಬಂದಿರುವ ಸುದ್ದಿಯ ಪ್ರಕಾರ ಸುಮಲತಾ ಅವರು ಆ ಪಾತ್ರವನ್ನು ಮಾಡುತ್ತಿಲ್ಲ. ಅವರ ಬದಲಿಗೆ ಆ ಪಾತ್ರದಲ್ಲಿ ಭವಾನಿ ಪ್ರಕಾಶ್ ನಟಿಸಿರುವುದಾಗಿ ನಿರ್ದೇಶಕ ಗಿರಿರಾಜ್ ತಿಳಿಸಿದ್ದಾರೆ.
ಸುಮಲತಾ ಅವರಂಥ ನಟಿ ಇದ್ದಾಗಲೇ ಆ ಪಾತ್ರಕ್ಕೆ ಕಳೆ ಬರಲು ಸಾಧ್ಯ ಎಂದು ನಿರ್ದೇಶಕರು ಹೇಳಿದ್ದ ಕಾರಣ ಅಂಥದೊಂದು ಪಾತ್ರವನ್ನು ಸುಮಲತಾ ಯಾಕೆ ಒಪ್ಪಲಿಲ್ಲ ಎನ್ನುವ ಸಂದೇಹ ಸಹಜವಾಗಿ ಮೂಡಿತ್ತು. ಹಾಗಾಗಿ ಈ ಬಗ್ಗೆ ಸಿನಿಕನ್ನಡ ನೇರವಾಗಿ ಸುಮಲತಾ ಅವರನ್ನು ಸಂಪರ್ಕಿಸಿದಾಗ ಅವರು ತಿಳಿಸಿದ್ದಿಷ್ಟು, “ನಾನು ಆ ಚಿತ್ರದಲ್ಲಿ ನಟಿಸುತ್ತೇನೆ ಅಥವಾ ಆ ಪಾತ್ರವನ್ನು ಮಾಡುತ್ತೇನೆ ಎಂದು ಅವರಿಗೆ ಕನ್ಫರ್ಮ್ ಮಾಡಿರಲೇ ಇಲ್ಲ. ಹಾಗಾಗಿ ಒಪ್ಪಿ ನಿರಾಕರಿಸಿದ್ದೇನೆ ಎನ್ನುವುದು ತಪ್ಪಾಗುತ್ತದೆ. ಆದರೆ ನನಗೆ ತಿಳಿದಂತೆ ಈಗ ಅವರು ಚಿತ್ರಕತೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ಎಂದುಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ. ಬಹುಶಃ ಸುಮಲತಾ ಅವರ ಮಾತು ನಿಜವಿರಬೇಕು. ಯಾಕೆಂದರೆ ಚಿತ್ರದಲ್ಲಿ ಚೆನ್ನಭೈರಾದೇವಿಗೆ ನೀಡಿದ್ದ ಪ್ರಾಮುಖ್ಯತೆ ರಾಣಿಯ ಸೈನ್ಯದ ಮುಖ್ಯಸ್ಥನ ಕತೆಯೊಂದಿಗೆ ಚಿತ್ರ ಮುಂದುವರಿದಿದೆ ಎನ್ನಲಾಗಿದೆ. ಆದರೆ ಪ್ರಸ್ತುತ ಚೆನ್ನಭೈರಾದೇವಿಯ ಪಾತ್ರದಲ್ಲಿರುವ ಭವಾನಿಪ್ರಕಾಶ್ ಕೂಡ ರಂಗಭೂಮಿ ಹಿನ್ನೆಲೆಯಿಂದ ಬಂದಂಥ ಪ್ರತಿಭಾವಂತ ನಟಿಯೆನ್ನುವುದು ಗಮನಾರ್ಹ.
ದ್ವಿಪಾತ್ರದಲ್ಲಿ ರವಿಚಂದ್ರನ್
ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡಿಗ ಚಿತ್ರದಲ್ಲಿ `ಲಿಪಿಕಾರ ಗುಣಭದ್ರ’ನ ಪಾತ್ರ ನಿರ್ವಹಿಸುವುದಾಗಿ ಚಿತ್ರದ ಮುಹೂರ್ತದ ದಿನವೇ ಘೋಷಿಸಲಾಗಿತ್ತು. ಅದರ ಲುಕ್ ಕೂಡ ರಿವೀಲ್ ಮಾಡಲಾಗಿತ್ತು. ಕರ್ನಾಟಕದ ಇತಿಹಾಸ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಂಶ ಲಿಪಿಕಾರರದ್ದು. ಆ ವಂಶದ ಪ್ರಮುಖನಾಗಿ ನಟಿಸುವುದರ ಜೊತೆಗೆ ಮತ್ತೊಂದು ಪ್ರಧಾನ ಪಾತ್ರವನ್ನು ಕೂಡ ಮಾಡಲಿರುವುದಾಗಿ ತಿಳಿದು ಬಂದಿದೆ. ಅಲ್ಲಿಗೆ ರವಿಚಂದ್ರನ್ ಅವರದು ಚಿತ್ರದಲ್ಲಿ ದ್ವಿಪಾತ್ರ ಎನ್ನುವುದು ಸಾಬೀತಾಗಿದೆ.
ರವಿಚಂದ್ರನ್ ಅವರ ಮತ್ತೊಂದು ಪಾತ್ರದ ಲುಕ್ ಕೂಡ ಹೊರಗೆ ಬಂದಿದೆ. ಈ ಪಾತ್ರದ ಹೆಸರು ಸಮಂತ ಭದ್ರ ಎಂದಾಗಿದ್ದು, ಚಿತ್ರದಲ್ಲಿ ಅವರು ಯೋಧನ ವೇಷದಲ್ಲಿಯೂ ರಾಜಕಳೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸುಮಲತಾ ಅವರು ರವಿಚಂದ್ರನ್ ಅವರ ಸಿನಿಮಾದಲ್ಲಿ ಇಲ್ಲ ಎನ್ನುವುದು ಒಂದೆಡೆ ತುಸು ನಿರಾಸೆ ಮೂಡಿಸಿರುವುದು ನಿಜ. ಯಾಕೆಂದರೆ ಅಂಬರೀಷ್ ಮತ್ತು ರವಿಚಂದ್ರನ್ ಅವರ ಆತ್ಮೀಯತೆ ಬಲ್ಲವರಿಗೆ ಅದೇ ಸಂಬಂಧದ ಕುರುಹಾಗಿ ಸುಮಲತಾ ಸಾನಿಧ್ಯವನ್ನು ಬಯಸಿದ್ದು ಸಹಜವಾಗಿತ್ತು. ಆದರೆ ಇದೀಗ ಸುಮಲತಾ ಅವರು ಇರದಿದ್ದರೂ ರವಿಚಂದ್ರನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ರವಿಚಂದ್ರನ್ ಅವರಿಗೆ ಜೋಡಿಯಾಗಿ ‘ಗೊಂಬೆಗಳ ಲವ್’ ಖ್ಯಾತಿಯ ನಟಿ ಪಾವನಾ ಅವರು ಅಭಿನಯಿಸಿದ್ದಾರೆ. ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಈ ವಿಭಿನ್ನವಾದ ಸಿನಿಮಾ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.
ಚಿತ್ರದ ನಿರ್ಮಾಪಕ ರಾಜ್ ಕುಮಾರ್, ಕಿಟ್ಟೆಲ್ ಪಾತ್ರಧಾರಿ ಜಿಮ್ಮಿ ಅಲ್ಟರ್ ಜೊತೆಗೆ ಕ್ರೇಜಿಸ್ಟಾರ್