`ಸೂಫಿಯುಂ ಸುಜಾತಯುಂ’ ನಿರ್ದೇಶಕ ನಿಧನ

ಕೇರಳದ ಮಲಪ್ಪುರಂ ಜಿಲ್ಲೆಯ ನಾರಣಿಪುಳ ಶಾನವಾಜ್ ಬುಧವಾರ ರಾತ್ರಿ 10.20ಕ್ಕೆ ನಿಧನರಾಗಿದ್ದಾರೆ. ಸುಮಾರು ರಾತ್ರಿ 9.30ರ ಸುಮಾರಿಗೆ ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ಆಸ್ಪತ್ರಗೆ ಬರಲು ಎರಡೂವರೆ ಗಂಟೆ ಕಾಲಾವಧಿಯ ಆಂಬುಲೆನ್ಸ್ ಪ್ರಯಾಣ ಮಾಡಲಾಗಿತ್ತು. ಕೊಯಂಬತ್ತೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಶಹನವಾಜ್‌ರನ್ನು ಪರಿಸ್ಥಿತಿ ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಗೆ ಕರೆತರಲಾಗಿತ್ತು. ಆದರೆ ದಾರಿ ಮಧ್ಯೆ ಕೂಡ ಅವರಿಗೆ ಮತ್ತೊಮ್ಮೆ ಹೃದಯಾಘಾತವಾಗಿತ್ತು.

ಲಾಕ್ಡೌನ್ ಸಂದರ್ಭದಲ್ಲಿ ಒ.ಟಿ.ಟಿ ಮೂಲಕ ತೆರೆಕಂಡಿದ್ದ ಮೊದಲ ಮಲಯಾಳಂ ಸಿನಿಮಾ ಸೂಫಿಯುಂ ಸುಜಾತಯುಂ' ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಅದು ಅವರ ನಿರ್ದೇಶನದ ಎರಡನೇ ಚಿತ್ರದವಾಗಿದ್ದು, ಅದಕ್ಕೂ ಮೊದಲುಕರಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದರು. ನಿರ್ದೇಶಕ, ಚಿತ್ರಕತೆಗಾರ ಎನ್ನುವುದರ ಜೊತೆಯಲ್ಲೇ ಒಬ್ಬ ಉತ್ತಮ ಸಂಕಲನಕಾರನಾಗಿಯೂ ಶಾನವಾಜ್ ಗುರುತಿಸಿಕೊಂಡಿದ್ದರು. 2015ರಲ್ಲಿ ತೆರೆಕಂಡಿದ್ದ `ಕರಿ’ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ ಚಿತ್ರವಾಗಿತ್ತು. ಮಾತ್ರವಲ್ಲ, ಸಾಕಷ್ಟು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತ್ತು.

ಕಳೆದ ಭಾನುವಾರ ತನ್ನ ನಿರ್ದೇಶನದ ಮೂರನೇ ಚಿತ್ರದ ಶೂಟಿಂಗ್ ಅಟ್ಟಪ್ಪಾಡಿ ಎಂಬಲ್ಲಿ ನಡೆಸುತ್ತಿದ್ದ ವೇಳೆ ಹೃದಯಾಘಾತಗೊಂಡ ಶಾನವಾಜ್ ರನ್ನು ಕೊಯಂಬತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಫಿಯುಂ ಸುಜಾತಯುಂ' ಸಿನಿಮಾ ಮಲಯಾಳಂ ಮಾತ್ರವಲ್ಲ, ಪ್ಯಾನ್ ಇಂಡಿಯಾ ಎನ್ನುವ ಮಟ್ಟದಲ್ಲಿ ಜನಾಕರ್ಷಣೆ ಪಡೆದಿತ್ತು. ಡೆಲ್ಲಿ 6, ಏ ಹೈ ಜಿಂದಗಿ, ಪದ್ಮಾವತ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದ ಅದಿತಿ ರಾವ್ ಹೈದರಿ ಆ ಚಿತ್ರದ ನಾಯಕಿಯಾಗಿದ್ದರು. ಈ ವರ್ಷದ ಮತ್ತೊಂದು ಜನಪ್ರಿಯ ಚಿತ್ರಅಯ್ಯಪ್ಪನುಂ ಕೋಶಿಯುಂ’ ನಿರ್ದೇಶಕ ಸಚಿ ಇತ್ತೀಚೆಗಷ್ಟೇ ನಿಧನರಾಗಿದ್ದರು. ಇದೀಗ ಶಾನವಾಜ್ ನಿಧನದೊಂದಿಗೆ ಈ ವರ್ಷದ ಪ್ರತಿಭಾವಂತರ ಸಾವಿನ ಪಟ್ಟಿಗೆ ಮತ್ತೊಂದು ಯುವಪ್ರತಿಭೆ ಸೇರಿಕೊಂಡಿರುವುದು ಮಲಯಾಳಂ ಚಿತ್ರರಂಗಕ್ಕೆ ದೊಡ್ಡ ಪ್ರಮಾಣದ ನಷ್ಟವೆಂದೇ ಹೇಳಬಹುದು.

Recommended For You

Leave a Reply

error: Content is protected !!
%d bloggers like this: