ದಕ್ಷಿಣ ಭಾರತದ ಜನಪ್ರಿಯ ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ. ಪುತ್ರಿಯ ವಿವಾಹ ಇದೇ ತಿಂಗಳಲ್ಲಿ ನೆರವೇರಲಿದ್ದು ಸಂಭ್ರಮ ವಿಶೇಷಗಳ ಬಗ್ಗೆ ಮಾತನಾಡಿದ್ದಾರೆ.
ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕ ಅವರ ವಿವಾಹವು ಅಕ್ಷಯ್ ಎನ್ನುವ ವರನೊಂದಿಗೆ ಇದೇ ತಿಂಗಳ 28ರಂದು ನೆರವೇರಲಿದೆ. ನಿಹಾರಿಕ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗ ನವಜೀವನಕ್ಕೆ ಅಡಿಯಿಡುತ್ತಿದ್ದಾರೆ.
ಇವರ ಮದುವೆ ಸಮಾರಂಭವು ಎರಡು ಕುಟಂಬಗಳ ಸದಸ್ಯರ ಸಮ್ಮುಖದಲ್ಲಿ ಕೋವಿಡ್ 19 ನಿಯಮಗಳೊಂದಿಗೆ ನೆರವೇರಲಿದೆ.
2021ರ ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು, ಆ ದಿನ ಚಿತ್ರರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ.
“ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ಕರ್ನಾಟಕದ ಜನತೆ, ಚಿತ್ರರಸಿಕರು ಹಾಗೂ ಮಾಧ್ಯಮದವರು ನೀಡಿರುವ ಪ್ರೋತ್ಸಾಹ ಬಹಳಷ್ಟಿದೆ. ನಿಮ್ಮ ಪ್ರೀತಿಯ ಆಶೀರ್ವಾದ ಮದುಮಕ್ಕಳ ಮೇಲೆ ಸದಾ ಇರಲಿ ಎಂದು ರಮೇಶ್ ಅರವಿಂದ್ ಕೋರಿದ್ದಾರೆ. ನವ ವಧುವರರಿಗೆ ಮತ್ತು ಮಾವನಾಗುತ್ತಿರುವ ರಮೇಶ್ ಅರವಿಂದ್ ಅವರಿಗೆ ‘ಸಿನಿಕನ್ನಡ’ದ ಶುಭಾಶಯಗಳು.