ಮುಂದಿನ ವಾರದಿಂದ `ಸುಂದರಿ’

ಆರುವಾರಗಳಲ್ಲಿ ಮೈಕಾಂತಿ ಗಣನೀಯ ಎನ್ನುವ ಜಾಹೀರಾತು ನೋಡಿ ಮೈ ಬಣ್ಣ ಬದಲಾಯಿಸಲು ಮನಸೋಲುವವರು ನಾವು. ಬಿಳಿ ಬಣ್ಣವನ್ನೇ ಸೌಂದರ್ಯ ಎಂದು ನಂಬಿರುವ ನಮ್ಮ ಮನಸ್ಥಿತಿಯೇ ವರ್ಣಭೇದಕ್ಕೆ ಪ್ರಮುಖ ಕಾರಣ. ಇಂಥ ಕಾಲಘಟ್ಟದಲ್ಲಿ ಬಣ್ಣಕ್ಕೆ ಮಾರುಹೋಗದ, ಮೈಕಾಂತಿಗಿಂತ ಮನದ ನೀತಿ ಮುಖ್ಯ ಎಂದು ಎನ್ನುವ ನಾಯಕಿಯನ್ನು ಉದಯ ವಾಹಿನಿ ಪರಿಚಯಿಸುತ್ತಿದೆ.

ಕನ್ನಡದಲ್ಲಿ ದಾಖಲೆ ಮೂಡಿಸಿರುವಂಥ ಸಾಕಷ್ಟು ಧಾರಾವಾಹಿಗಳನ್ನು ನೀಡಿರುವ ಉದಯ ವಾಹಿನಿ ಮುಂದಿನ ವಾರದಿಂದ ಪ್ರಸಾರ ಮಾಡುತ್ತಿರು ಧಾರಾವಾಹಿಯ ಹೆಸರು `ಸುಂದರಿ’. ಇಲ್ಲಿ ಶೀರ್ಷಿಕೆ ಸುಂದರಿ ಎಂದು ಇದ್ದರೂ ಆಗಲೇ ಹೇಳಿದಂತೆ ಇದು ದೇಹ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ. ಇಲ್ಲಿ ನಾಯಕಿಯ ಹೆಸರು ಸುಂದರಿ. ಆದರೆ ಆಕೆ ಬಹುತೇಕರು ಸೌಂದರ್ಯವೆಂದು ಪರಿಗಣಿಸುವ ಬಿಳಿಯ ಮೈಬಣ್ಣ ಇರದ ಕೃಷ್ಣ ಸುಂದರಿ. ಆಕೆಯ ತಾಯಿ ಹೇಗಾದರೂ ಮಾಡಿ ಮಗಳನ್ನು ಮದುವೆ ಮಾಡಿ ಕಳಿಸಬೇಕು ಎನ್ನುವ ಆತುರದಲ್ಲಿದ್ದರೆ, ಸುಂದರಿಗೆ ಮಾತ್ರ ಐಎಎಸ್ ಅಧಕಾರಿಯಾಗಬೇಕು ಎನ್ನುವ ಕನಸು.

ಧಾರಾವಾಹಿಯಲ್ಲಿ ಸುಂದರಿ ಪಾತ್ರವನ್ನು ಐಶ್ವರ್ಯಾ ನಿರ್ವಹಿಸಲಿದ್ದಾರೆ. ಆಕೆಗೆ ಜೋಡಿಯಾಗಿ ಸಮೀಪ್ ನಟಿಸುತ್ತಿದ್ದಾರೆ. `ನಂದಿನಿ’ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಶಾಸ್ತ್ರಿ ಸೇರಿದಂತೆ, ನಟ ಶ್ರೀಕಾಂತ್ ಹೆಬ್ಳೀಕರ್ ಕೂಡ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನವರಿ 11ರ ಸೋಮವಾರದಿಂದ ಪ್ರತಿ ವಾರದಲ್ಲಿ ಶುಕ್ರವಾರದ ವರೆಗೆ ದಿನವೂ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗಲಿದೆ.

ಸ್ಲಿಂಗ್ ಶಾಟ್' ನಿರ್ಮಾಣ ಸಂಸ್ಥೆಯಡಿಯಲ್ಲಿ ರಮೇಶ್ ಅರವಿಂದ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಗೆ ಹಿರಿಯ ನಿರ್ದೇಶಕ ಗಣೇಶ್ ಶಾಸ್ತ್ರಿಆಕ್ಷನ್ ಕಟ್’ ಹೇಳಲಿದ್ದಾರೆ. ಜನಪ್ರಿಯ ಛಾಯಾಗ್ರಾಹಕ ನೋಹರ ಜೋಷಿ ಛಾಯಾಗ್ರಾಹಕರಾಗಿದ್ದು, ತಂಡದಲ್ಲಿ ಖ್ಯಾತನಾಮ ತಂತ್ರಜ್ಞರು ಇರುವುದು ವಿಶೇಷ.

Recommended For You

Leave a Reply

error: Content is protected !!
%d bloggers like this: