`ಯಾಕಣ್ಣಾ’ ಯುವತಿಯ ಕಿರುಚಿತ್ರ

ಯಾಕಣ್ಣ ಎಂದು ಬರೆದಿರುವುದನ್ನು ಕಂಡಾಗಲೇ ಅದನ್ನು ಇದೇ ಟೋನಲ್ಲಿ ಓದಿಕೊಳ್ಳಬೇಕು ಎಂದು ಮನಸು ಸಿದ್ಧವಾಗುತ್ತದೆ. ಅದಕ್ಕೆ ಕಾರಣ ಅಂದು ವೈರಲ್ ಆಗಿದ್ದ ಓರ್ವ ಮಹಿಳೆಯ ವಿಡಿಯೋ. ಸಾರ್ವಜನಿಕ ಶೌಚಾಲಯದಲ್ಲಿ ಯಾರದೋ ವಿಡಿಯೋ ಕ್ಯಾಮೆರಾಗೆ ಸಿಕ್ಕಿದ್ದ ಆ ಹುಡುಗಿ ಚಿತ್ರೀಕರಣ ಮಾಡಿದವನಲ್ಲಿ ಪ್ರಶ್ನಿಸಿದ್ದು ಯಾಕಣ್ಣಾ?' ಎಂದು. ಆದರೆ ಅದನ್ನೇ ಮಹಾ ತಮಾಷೆ ಎನ್ನುವಂತೆ ಟ್ರೋಲ್ ರೂಪದಲ್ಲಿ ಬಳಸಿದವರಿಗೆ ಲೆಕ್ಕವಿಲ್ಲ. ಕೆಲವೊಂದು ಟಿವಿ ಮಾಧ್ಯಮಗಳು ಕೂಡ ಅವುಗಳಿಗೆ ಹೊರತಾಗಿರಲಿಲ್ಲ ಎನ್ನುವುದು ವಿಪರ್ಯಾಸ. ಬಡ ಹೆಣ್ಣುಮಗಳನ್ನು ಟ್ರೋಲ್ ಮಾಡಲು ಎಲ್ಲರೂ ತೋರಿಸುವ ಧೈರ್ಯ ಶ್ರೀಮಂತರ ಅನೈತಿಕ ಸಂಬಂಧಗಳನ್ನು ಹೊರಗೆ ತರುವಲ್ಲಿ ಇರುವುದಿಲ್ಲ. ಇಷ್ಟಕ್ಕೂ ಅನೈತಿಕ ಎನ್ನುವುದು ಸಂಬಂಧಗಳನ್ನು ಮಾಡಿಕೊಂಡವರ ಆತ್ಮಸಾಕ್ಷಿಗೆ ಸಂಬಂಧಿಸಿರುವುದು. ಆದರೆ ಸಾರ್ವಜನಿಕವಾಗಿ ಅವಮಾನ ಮಾಡುವುದು ಖಂಡಿತವಾಗಿ ಅಪರಾಧದ ಪಟ್ಟಿಯಲ್ಲೇ ಸೇರುತ್ತದೆ. ಅದೇ ಕಳಕಳಿಯನ್ನು ಇರಿಸಿಕೊಂಡು ಇಂದು ಯೂಟ್ಯೂಬ್ ಮೂಲಕ ತೆರೆಗೆ ಬರುತ್ತಿರುವ ಕಿರುಚಿತ್ರಪಬ್ಲಿಕ್ ಟಾಯ್ಲೆಟ್’ ವಿಶೇಷಗಳು ಇಲ್ಲಿವೆ.

“ವಿಡಿಯೋ ಮಾಡಲು ಬಂದಾತನಲ್ಲಿ ಯಾಕಣ್ಣಾ' ಎಂದು ಪ್ರಶ್ನಿಸಿದ ಆಕೆಯನ್ನು ಕಂಡಾಗ ನನಗೆ ಅದೊಂದು ತಮಾಷೆಯಾಗಿ ಕಾಣಿಸಿರಲಿಲ್ಲ. ಆಕೆ ಅತ್ತುಕೊಂಡು ನನ್ನ ಜೀವನ ಹಾಳು ಮಾಡಿದರಲ್ಲ ನೀವು ಎಂದು ಹೇಳಿದಾಗ ಅದನ್ನು ನೋಡಿ ನೋವು ಮಾಡಿಕೊಂಡವರಲ್ಲಿ ನಾನು ಕೂಡ ಒಬ್ಬ" ಎನ್ನುತ್ತಾರೆಪಬ್ಲಿಕ್ ಟಾಯ್ಲೆಟ್ ‘ ಎನ್ನುವ ಈ ಕಿರುಚಿತ್ರದ ನಿರ್ದೇಶಕ ನಾಗೇಶ್ ಹೆಬ್ಬೂರು. “ಆದರೆ ಆಕೆಯ ಅದೊಂದು ಪ್ರಶ್ನೆಯನ್ನೇ ಸಾಮಾಜಿಕ ಜಾಲತಾಣದಲ್ಲಿ ಹರಡಿದವರು ಯಾಕಣ್ಣಅಭಿಮಾನಿ ಸಂಘ', ಯಾಕಣ್ಣಾ ಹಾಡು, ಡಿಜೆ ಹಾಡು ಮೊದಲಾದವುಗಳ ಮೂಲಕ ತಮ್ಮ ವಿಕೃತಿಯನ್ನು ಹರಡಿ ದುಡ್ಡು ಮಾಡಿಕೊಂಡಿದ್ದಾರೆ. ಹಾಗಾಗಿಯೇ ನಾನು ಈ ಸಬ್ಜೆಕ್ಟ್‌ ನಲ್ಲಿ ಒಂದು ಕಿರುಚಿತ್ರ ಮಾಡಬೇಕಾದರೆ ಘಟನೆಯಲ್ಲಿ ಸಂತ್ರಸ್ತೆಯಾದ ಆ ಮಹಿಳೆಯ ಪರವಾಗಿಯೇ ಚಿತ್ರ ಮಾಡಬೇಕು ಎಂದುತೀರ್ಮಾನ ಮಾಡಿದೆ. ಹಾಗಾಗಿ ನನ್ನ ಪಬ್ಲಿಕ್ ಟಾಯ್ಲೆಟ್ ಚಿತ್ರದಲ್ಲಿ ವಿಡಿಯೋ ಮಾಡಿದವನೇ ಪ್ರಮುಖವಾಗಿದ್ದಾನೆ. ಆ ಪಾತ್ರವನ್ನುಕೆಜಿಎಫ್’ ಖ್ಯಾತಿಯ ಪ್ರಶಾಂತ್ ಅವರು ಮಾಡಿದ್ದಾರೆ. ವಿಡಿಯೋ ವೈರಲ್ ಆದಮೇಲೆ ಆತನ ಪ್ರತಿಕ್ರಿಯೆ ಹೇಗೆ ಇರಬಹುದು? ಎನ್ನುವುದನ್ನು ಆಧಾರವಾಗಿಸಿಕೊಂಡು ನಾನು ಇಡೀ ಕತೆಯನ್ನು ಆತನ ಬಗ್ಗೆಯೇ ಬರೆದಿದ್ದೇನೆ. ಆ ವಿಡಿಯೋದಲ್ಲಿ ಕಾಣಿಸಿದವರು ನನ್ನ ಚಿತ್ರದಲ್ಲಿ ಕಾಣಲ್ಲ” ಎಂದು ನಾಗೇಶ್ ಹೆಬ್ಬೂರು ತಿಳಿಸಿದ್ದಾರೆ.

ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶನ ವಿಭಾಗದಲ್ಲಿ ಗುರುತಿಸಿಕೊಂಡವರು ನಾಗೇಶ್ ಹೆಬ್ಬೂರು. ನಾಗ್ತಿಹಳ್ಳಿ ಚಂದ್ರಶೇಖರ್ ಅವರಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ನಾಗೇಶ್ ಮೊದಲ ಬಾರಿಗೆ ತೆರೆಗೆ ತರುತ್ತಿರುವ ಕಿರುಚಿತ್ರ ಇದು. ಈ ಎಲ್ಲ ಕಾರಣಗಳಿಂದ ನಿರೀಕ್ಷೆ ಮೂಡಿಸಿರುವ `ಪಬ್ಲಿಕ್ ಟಾಯ್ಲೆಟ್’ ಶಾರ್ಟ್ ಫಿಲ್ಮ್ ಇಂದು ಸಂಜೆ ಆರು ಗಂಟೆ ಸುಮಾರಿಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.

Recommended For You

Leave a Reply

error: Content is protected !!
%d bloggers like this: