ಅಭಿಷೇಕ್ ಜೊತೆಗೆ ರಚಿತಾ ರಾಮ್

ದುನಿಯಾ ಸೂರಿ ನಿರ್ದೇಶನದಲ್ಲಿ ಅಂಬರೀಷ್ ಪುತ್ರ ಅಭಿಷೇಕ್ ನಾಯಕರಾಗಿ ನಟಸುತ್ತಿರುವ ಬ್ಯಾಡ್ ಮ್ಯಾನರ್ಸ್' ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಕಳೆದ ತಿಂಗಳು ಮೈಸೂರಿನಲ್ಲಿ ಚಿತ್ರೀಕರಣ ಶುರು ಮಾಡಿದಬ್ಯಾಡ್ ಮ್ಯಾನರ್ಸ್’ ತಂಡ ಈಗಲೂ ಮಂಡ್ಯದಲ್ಲಿ ಚಿತ್ರೀಕರಣ ನಿರತವಾಗಿದೆ. ರಚಿತಾ ಜೊತೆಗೆ ಚಿತ್ರಕ್ಕೆ ಮತ್ತೋರ್ವ ನಾಯಕಿಯಾಗಿ ನವನಟಿ ಪ್ರಿಯಾಂಕಾ ಕೂಡ ಅಭಿನಯಿಸಲಿದ್ದಾರೆ ಎಂದು ತಿಳಿದು ಬಂದಿದೆ.

ರಚಿತ ರಾಮ್ ಅವರು ಪ್ರಸ್ತುತ ಸಕಲೇಶಪುರದಲ್ಲಿ ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ನಾನು ಚಿತ್ರದಲ್ಲಿ ಪಕ್ಕದ್ಮನೆ ಹುಡುಗಿಯ ಪಾತ್ರ ಮಾಡುತ್ತಿದ್ದೇನೆ. ಅದು ತುಂಬ ಸಂಪ್ರದಾಯಬದ್ಧ ಹುಡುಗಿಯ ಪಾತ್ರ ಮಾಡುತ್ತಿದ್ದೇನೆ. ನನಗೆ ಪಾತ್ರದ ಜೊತೆಗೆ ಸೂರಿಯವರ ನಿರ್ದೇಶನದಲ್ಲಿ ನಟಿಸುವ ಅವಕಾಶ ದೊರಕಿರುವುದು ಖುಷಿ ನೀಡಿದೆ. ಇದೇ ತಿಂಗಳ 18ರ ಬಳಿಕ ನಾನು ತಂಡದ ಜೊತೆಗೆ ಸೇರಲಿದ್ದೇನೆ' ಎನ್ನುವ ಮಾಹಿತಿಯನ್ನು ಅವರು ಮಾಧ್ಯಮದ ಜೊತೆಗೆ ಹಂಚಿಕೊಂಡಿದ್ದಾರೆ. ಮತ್ತೋರ್ವ ನಾಯಕಿಯಾಗಿ ಕಾಣಿಸುತ್ತಿರುವ ಪ್ರಿಯಾಂಕಾಕೃಷ್ಣ ತುಳಸಿ’ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಿತೆ. ಮೂಲತಃ ಮೈಸೂರಿನವರಾದ ಈ ಚೆಲುವೆ ಚಿತ್ರದಲ್ಲಿ ಒಂದು ಪ್ರಧಾನ ಪಾತ್ರವನ್ನೇ ಮಾಡುತ್ತಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಪ್ರಿಯಾಂಕಾ ತಮಿಳು ಧಾರಾವಾಹಿಗಳ ಮೂಲಕವೂ ಗುರುತಿಸಿಕೊಂಡವರು.

Recommended For You

Leave a Reply

error: Content is protected !!
%d bloggers like this: