`ತುಘಲಕ್’ 86ನೇ ಪ್ರದರ್ಶನ

ನಮ್ಮ ದೇಶದ ಶ್ರೇಷ್ಠ ನಾಟಕಗಳಲ್ಲೊಂದಾಗಿ ಗುರುತಿಸಲ್ಪಟ್ಟಂಥ ನಾಟಕ ತುಘಲಕ್'. ಗಿರೀಶ್ ಕಾರ್ನಾಡರು ರಚಿಸಿರುವ ಈ ನಾಟಕದ 86ನೇ ಪ್ರದರ್ಶನವನ್ನುಸಮುದಾಯ’ ನಾಟಕ ತಂಡವು ಇದೇ ಶುಕ್ರವಾರ ಪ್ರದರ್ಶಿಸುತ್ತಿದೆ.

ಇತಿಹಾಸದ ನೆರಳಿನಲ್ಲಿ ಸಮಕಾಲೀನ ವಿಚಾರಗಳನ್ನು ಪ್ರಸ್ತುತ ಪಡಿಸುವ ತುಘಲಕ್'ನಾಟಕವು ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನು ಒಳಗೊಂಡಿದೆ. ಈ ನಾಟಕದ ಹಲವಾರು ಪ್ರಮುಖ ಪ್ರಯೋಗಗಳನ್ನು ಕನ್ನಡ ಸೇರಿದಂತೆ ನಾಡಿನ ಅನೇಕ ಭಾಷೆಗಳಲ್ಲಿ ರಂಗದ ಮೇಲೆ ಪ್ರದರ್ಶಿಸಲಾಗಿದೆ. ತುಘಲಕ್ ತನ್ನ ರಾಜ್ಯದ ಉಜ್ವಲ ಭವಿಷ್ಯದ ಕನಸು ಕಂಡಂಥ ಮಹತ್ವಾಕಾಂಕ್ಷಿ. ಆದರೆ ಆತನ ಸಾಮ್ಯಾಜ್ಯದ ಅವನತಿಯಲ್ಲಿ ರಾಜಕಾರಣ ಮತ್ತು ಧರ್ಮಕಾರಣಗಳನ್ನು ಎತ್ತಿ ತೋರಿಸುವ ಕೆಲಸವನ್ನು ಈ ನಾಟಕ ಮಾಡಿದೆ. ಹಾಗಾಗಿ ಇದು ಒಂದು ಅಪ್ಪಟ ರಾಜಕೀಯ ನಾಟಕವಾಗಿ ರೂಪುಗೊಂಡಿದೆ. ಇಂದಿನ ಸಮಕಾಲೀನ ರಾಜಕೀಯದ ವಸ್ತುಸ್ಥಿತಿಗೆ ಕನ್ನಡಿ ಹಿಡಿಯುವಂಥಸಮುದಾಯ’ದ ಈ ಪ್ರಯತ್ನವನ್ನು ರಂಗಪ್ರೇಮಿಗಳು ಮಾತ್ರವಲ್ಲ ಎಲ್ಲ ವಿಧವಾದ ಪ್ರೇಮಿಗಳು ಕೂಡ ಖಂಡಿತವಾಗಿ ಬೆಂಲಿಸುತ್ತಾರೆ! ಯಾಕೆಂದರೆ ಇದರಲ್ಲಿ ಒಂದು ಸತ್ಯ ಅಡಗಿದೆ.

ಡಾ.ಸ್ಯಾಮ್ ಕುಟ್ಟಿ ಪಟ್ಟಂಕರಿ ನಿರ್ದೇಶನದ ಈ ನಾಟಕಕ್ಕೆ ಡಾ. ಶ್ರೀಪಾದ್ ಭಟ್ ಸಹನಿರ್ದೇಶನವಿದೆ. ನಾಳೆ ಎಂದರೆ ಫೆಬ್ರವರಿ 19ರ ಸಂಜೆ ಏಳು ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.

Recommended For You

Leave a Reply

error: Content is protected !!
%d bloggers like this: