ಪ್ರಿಯಾಂಕಾ ಉಪೇಂದ್ರ ನಟಿಸಿರುವ ಹೊಸ ಸಿನಿಮಾ ‘1980’ರ ಟೀಸರ್ ಬಿಡುಗಡೆಯಾಗಿದೆ.
ಮಲ್ಲೇಶ್ವರದ ಐನಾಕ್ಸ್ ಚಿತ್ರಮಂದಿರದೊಳಗೆ ನಡೆಸ ಮಾಧ್ಯಮಗೋಷ್ಠಿಯಲ್ಲಿ ಪ್ರಿಯಾಂಕಾ ಅವರು ಟೀಸರ್ ಹಾಗೂ ಚಿತ್ರದ ಕುರಿತಾದ ಇತರ ವಿಚಾರಗಳನ್ನು ಹಂಚಿಕೊಂಡರು. “ಇದರಲ್ಲಿ ಇಡೀ ತಂಡದ ಹಾರ್ಡ್ ವರ್ಕ್ ಇದೆ. ನಾನು ನಾವೆಲಿಸ್ಟ್ ಪಾತ್ರ ಮಾಡಿದ್ದೇನೆ. ಚಿತ್ರದ ಪಾತ್ರಕ್ಕಾಗಿ ನನಗೆ ಸೀರೆಗಳನ್ನು ಕೊಲ್ಕತ್ತಾದಿಂದ ತರಿಸಿದ್ದೇವೆ. ಇತ್ತೀಚೆಗೆ ಪ್ರತಿಯೊಂದು ಪಾತ್ರ ಕೂಡ ವಿಭಿನ್ನವಾಗಿ ದೊರಕುತ್ತಿದೆ” ಎಂದರು.
ಇದೊಂದು ಸೈಕಲಾಜಿಕಲ್ ಥ್ರಿಲ್ಲರ್. ಆದರೆ ಆಕ್ಷನ್ ಚಿತ್ರವಲ್ಲ. ನನಗೆ ಇದರ ಕತೆ ಮತ್ತು ಪಾತ್ರ ತುಂಬ ಇಷ್ಟವಾಗಿತ್ತು. ನಿರ್ದೇಶಕ ರಾಜ್ ಕಿರಣ್, ಛಾಯಾಗ್ರಾಹಕ ಜೀವನ್ ತುಂಬ ವರ್ಕ್ ಮಾಡಿದ್ದೇವೆ. ‘ದೇವಕಿ’ಯಲ್ಲಿ ಥ್ರಿಲ್ಲರ್ ಇದ್ದರೂ ಎಮೋಷನ್ಸ್ ಹೆಚ್ಚು ಇತ್ತು. ಇಲ್ಲಿ ಹಾಗಲ್ಲ.
2020ರಲ್ಲಿ ಲೈಫ್ ಈಸ್ ಬ್ಯೂಟಿಫುಲ್ ಕಂಪ್ಲೀಟ್ ಆಗಿದೆ. ನಿನ್ನೆ ತಾನೇ ಕೊಲ್ಕತ್ತಾದಿಂದ ಬಂದೆ. ಎಂಟು ವರ್ಷಗಳ ಗ್ಯಾಪ್ ಬಳಿಕ ಬಂಗಾಳಿ ಸಿನಿಮಾ ಮಾಡುತ್ತಿದ್ದೇನೆ. ಚಿತ್ರಕ್ಕೆ ಸತ್ಯಜಿತ್ ರೇ ಅವರ ಕತೆ ಇರುವುದು ವಿಶೇಷ. ರಾಷ್ಟ್ರ ಪ್ರಶಸ್ತಿ ವಿಜೇತ ಶಾಘ್ನಿಕ್ ಅವರು ನಿರ್ದೇಶಕರು ಎಂದ ಪ್ರಿಯಾಂಕಾ ಉಪೇಂದ್ರ ಅವರ ಜೊತೆ ನನ್ನ ಸಿನಿಮಾಗಳ ಕತೆ ಚರ್ಚೆ ಮಾಡುತ್ತೇನೆ. ಆದರೆ ನಿರ್ಧಾರ ಮಾಡುವುದು ನಾನೇ ಎಂದು ನಕ್ಕರು