ಜಗ್ಗೇಶ್ -ಅದಿತಿ ವೈಭೋಗ ಐಸಿರಿ..!

ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಾಗಿದೆ. ಆದರೆ ಚಿತ್ರೀಕರಣ ಎಷ್ಟು ಚೆನ್ನಾಗಿ ನಡೆಯುತ್ತಿದೆ ಎನ್ನುವುದರ ವಿವರ ಫೊಟೊ ಸಮೇತ ಇಲ್ಲಿದೆ.

ತೋತಾಪುರಿ‌ ಚಿತ್ರದಲ್ಲಿ ಜಗ್ಗೇಶ್ ಅವರಿಗೆ ಅದಿತಿ ಪ್ರಭುದೇವ ಜೋಡಿ. ಅದಿತಿಯವರು ಮುಸ್ಲಿಂ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ರೈತ ಜಗ್ಗೇಶ್ ಮತ್ತು ಮಸಲ್ಮಾನ ಹುಡುಗಿಯ ನಡುವಿನ ಸಂಬಂಧವೇನು ಎನ್ನುವುದು ಚಿತ್ರ ತೆರೆಕಂಡ ಮೇಲೆ ಅನಾವರಣಗೊಳ್ಳಲಿದೆ. ಆದರೆ ಇಂದು ಜಗ್ಗೇಶ್ ಜೊತೆಗೆ ಸುಮನ್ ರಂಗನಾಥ್, ಅದಿತಿ ಪ್ರಭುದೇವ ದತ್ತಣ್ಣ ಮೊದಲಾದವರು ಪಾಲ್ಗೊಂಡಿರುವಂಥ ಅದ್ದೂರಿ ದೃಶ್ಯದ ಚಿತ್ರೀಕರಣ ನಡೆದಿದೆ.

ಚಿತ್ರವನ್ನು ಕೆ ಎ ಸುರೇಶ್ ನಿರ್ಮಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಇರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ‌ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬರಲಿದ್ದು, ಎರಡೂ ಭಾಗದ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಕನ್ನಡದ ಮಟ್ಟಿಗೆ ಹೀಗೆ ಎರಡು ಭಾಗಗಳನ್ನು ಒಂದೇ ಬಾರಿ ಚಿತ್ರೀಕರಿಸಿರುವುದು ಇದೇ ಪ್ರಥಮ ಎನ್ನಬಹುದು. ಇಂದು ಜಗ್ಗೇಶ್ ಮತ್ತು ಅದಿತಿಯವರ ವಿವಾಹದ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು ಇನ್ನು ಒಂದೆರಡು ದಿನಗಳ ಶೂಟಿಂಗ್ ಬಳಿಕ ಕುಂಬಳಕಾಯಿ ಒಡೆಯಲಿದ್ದಾರೆ ಎಂದು ಸಿನಿಕನ್ನಡದ ಜೊತೆಗೆ ಮಾತನಾಡಿದ ಅದಿತಿ ಪ್ರಭುದೇವ ತಿಳಿಸಿದ್ದಾರೆ.

Recommended For You

Leave a Reply

error: Content is protected !!