ನಿರ್ದೇಶಕ ಮಸ್ತಾನ್ ನಿಧನರಾಗಿದ್ದಾರೆ. ಕೋವಿಡ್ 19 ಕಾರಣದಿಂದ ಕನ್ನಡ ಚಿತ್ರರಂಗದ ಪಾಲಿಗೆ ಉಂಟಾಗಿರುವ ನಷ್ಟದಲ್ಲಿ ಮಸ್ತಾನ್ ಅವರ ಸಾವು ಕೂಡ ಸೇರಿಕೊಂಡಿರುವುದು ವಿಪರ್ಯಾಸ.
ಕೊರೊನಾ ಪಾಸಿಟಿವ್ ಆಗಿ ಗುರುತಿಸಿಕೊಂಡಿದ್ದ ನಿರ್ದೇಶಕ ಮಸ್ತಾನ್ ಅವರನ್ನು ಹೆಸರು ಘಟ್ಟ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಮಸ್ತಾನ್ ಅವರಿಗೆ 63 ವರ್ಷ ವಯಸ್ಸಾಗಿದ್ದು ಸುಮಾರು ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಕಲಾನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಸುಮಾರು ಎರಡು ಸಾವಿರ ಸಿನಿಮಾಗಳಿಗೆ ಆರ್ಟ್ ಡಿಸೈನರ್ ಆಗಿದ್ದ ಅವರು ಮೂರು ಸಿನಿಮಾಗಳಿಗೆ ನಿರ್ದೇಶಕರಾಗಿಯೂ ಹೆಸರು ಮಾಡಿದ್ದರು. ಮೋಹನ್ ನಟನೆಯ “ಶುಕ್ಲಾಂಬರಧರಂ” ಸೇರಿದಂತೆ “ಕಲ್ಲೇಶಿ ಮಲ್ಲೇಶಿ” ಮತ್ತು ನೀತು ಶೆಟ್ಟಿ, ನೇಹಾ ಪಾಟೀಲ್ ನಟನೆಯ ‘ಸಿತಾರ’ ಅವರ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರಗಳಾಗಿವೆ.