ನಿರ್ದೇಶಕ ಗಿರಿರಾಜ್ ಗೆ ಪಿತೃ ವಿಯೋಗ

ಜನಪ್ರಿಯ ನಿರ್ದೇಶಕ ಬಿ.ಎಮ್ ಗಿರಿರಾಜ್ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಉಸಿರಾಟದ ಸಮಸ್ಯೆಗೊಳಗಾಗಿದ್ದ ಮಹದೇವ ಮಲ್ಲ (65) ಅವರು ನಿಧನರಾಗಿರುವ ಬಗ್ಗೆ ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿದ ಗಿರಿರಾಜ್ ಅವರ ತಿಳಿಸಿದ್ದಾರೆ.

ಗಿರಿರಾಜ್ ಅವರ ತಂದೆ ಮಹದೇವ ಮಲ್ಲ ಅವರಿಗೆ
“ಯಾವುದೇ ಅನಾರೋಗ್ಯಗಳಿರದೆ ಗಟ್ಟಿಮುಟ್ಟಾಗಿದ್ದ ತಂದೆ ಕೊರೊನ ಬಗ್ಗೆ ಅತಿಯಾದ ಎಚ್ಚರಿಕೆ ವಹಿಸಿದ್ದರು. ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದರು. ಮನೆ ಒಳಗೆ ಬರುವಾಗ ಸ್ಯಾನಿಟೈಸ್ ಮಾಡಿ, ಹಾಕಿದ್ದ ಬಟ್ಟೆ ಒಗೆದು ಸ್ನಾನ ಮಾಡುತ್ತಿದ್ದರು. ಅಷ್ಟೊಂದು ಚೆನ್ನಾಗಿದ್ದ ಅವರಿಗೆ ಕೋವಿಡ್ 19 ಇದೆ ಎಂದರೆ ಅಚ್ಚರಿ ಅನಿಸುವಂತಿತ್ತು. ಅದರಂತೆ ಪರೀಕ್ಷೆ ಮಾಡಿದಾಗ ಅವರಿಗೆ ಕೋವಿಡ್ ಇರಲಿಲ್ಲ. ಆದರೆ ಉಸಿರಾಟದ ಸಮಸ್ಯೆ ಎದುರಿಸಿದ್ದ ಅವರು ಇಂದು ಸಂಜೆ 4.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು” ಎಂದು ಭಾವುಕರಾದರು ಗಿರಿರಾಜ್.

ಅವರು ಉಸಿರಾಟದ ತೊಂದರೆ ಶುರುವಾದ ಬಳಿಕ ಆಸ್ಪತ್ರೆಯಲ್ಲಿ ಬೆಡ್ ದೊರಕಬೇಕಾದರೆ ಎರಡು ದಿನಗಳ ಕಾಲ ಹೋರಾಡಬೇಕಾಯಿತು. ಇದೀಗ ಆಸ್ಪತ್ರೆ‌ ದೊರಕಿಯೂ‌ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವ ನೋವು ಗಿರಿರಾಜ್ ಅವರದ್ದಾಗಿದೆ. ಇತ್ತೀಚೆಗೆ ಸಾವಿಗೆ ವ್ಯಕ್ತಿಯ ಅನಾರೋಗ್ಯಕ್ಕಿಂತ ನಮ್ಮ ವ್ಯವಸ್ಥೆಯೇ ಕಾರಣವಾಗುತ್ತಿರುವುದು ಸುಳ್ಳಲ್ಲ.

ನಿರ್ದೇಶಕ ಗಿರಿರಾಜ್ ಅವರ ನಿರ್ದೇಶನದಲ್ಲಿ ವಿ ರವಿಚಂದ್ರನ್ ಅವರ ನಾಯಕತ್ವದ ‘ಕನ್ನಡಿಗ’ ಚಿತ್ರ ತೆರೆಗೆ ಬರಬೇಕಿದೆ.

Recommended For You

Leave a Reply

error: Content is protected !!