‘ಎಲ್ಲಾ ನಿನಗಾಗಿ’ ಧನ್ಯ..!

ಧನ್ಯಾ ರಾಮ್ ಕುಮಾರ್ ಮತ್ತೆ ಬಂದಿದ್ದಾರೆ. ಕಳೆದ ವಾರವಷ್ಟೇ ‘ಜಡ್ಜ್ ಮೆಂಟಲ್’ ಚಿತ್ರದ ಮುಹೂರ್ತದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಧನ್ಯಾ ರಾಮ್ ಕುಮಾರ್. ಇದೀಗ ಮತ್ತೊಂದು ಹೊಸ ಚಿತ್ರ ‘ಎಲ್ಲಾ ನಿನಗಾಗಿ’ಗೂ ನಾಯಕಿಯಾಗಿದ್ದಾರೆ‌

ವಿದ್ಯಾ ಶ್ರೀಮುರಳಿ ಅರ್ಪಿಸುವ, F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ‘ಎಲ್ಲಾ ನಿನಗಾಗಿ’ ಎನ್ನುವ ಈ ನೂತನ ಚಿತ್ರ ಆರಂಭವಾಗಿದೆ‌. ರಾಹುಲ್ ಆರ್ಕಾಟ್ ಈ ಚಿತ್ರದಲ್ಲಿ ಧನ್ಯ ರಾಮಕುಮಾರ್ ಅವರಿಗೆ ಜೋಡಿ. ಕಾಶಿ ನಿರ್ದೇಶಿಸುತ್ತಿದ್ದಾರೆ.

ಇತ್ತೀಚೆಗೆ ಈ ನೂತನ ಚಿತ್ರದ‌ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ದೇವಸ್ಥಾನದಲ್ಲಿ ನೆರವೇರಿತು. ಖ್ಯಾತ ನಟ ಶ್ರೀಮುರಳಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಮೇ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Recommended For You

Leave a Reply