ಸಮಸ್ತ ಚಿತ್ರರಂಗಕ್ಕಾಗಿ ವ್ಯಾಕ್ಸಿನ್ ಡ್ರೈವ್ ನಾಳೆಯಿಂದ ಪ್ರಾರಂಭವಾಗುತ್ತಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಲಭ್ಯವಾಗಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ.
ನಾಳೆ ಸೋಮವಾರ ದಿನಾಂಕ 31.5.2021ರಿಂದ ನಿರಂತರವಾಗಿ ಎರಡು ದಿನ ಬೆಳಗ್ಗೆ 10 ಘಂಟೆ ಯಿಂದ ಸಂಜೆ 5.00 ಘಂಟೆಯ ವರೆಗೂ ಚಾಮರಾಜಪೇಟೆ ಎಲ್ಲಿರುವ ನಮ್ಮ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ “ಕೋವಿಶಿಲ್ಡ್” ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಸುಮಾರು 15 ಸಾವಿರ ಮಂದಿಗೆ ವ್ಯಾಕ್ಸಿನ್ ಹಾಕಿಸುವ ಜವಾಬ್ದಾರಿಯನ್ನು ಚಿತ್ರರಂಗದ ಕಡೆಯಿಂದ ನಿರ್ದೇಶಕಿ ರೂಪಾ ಅಯ್ಯರ್ ಅವರು ವಹಿಸಿಕೊಂಡಿದ್ದು, ದಿನಕ್ಕೆ ಸುಮಾರು 200 ಮಂದಿಗೆ ಎನ್ನುವಂತೆ ನಿರಂತರವಾಗಿ ಲಸಿಕೆ ನೀಡಲಿರುವುದಾಗಿ ತಿಳಿಸಿದ್ದಾರೆ.
ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ಕಲಾಬಂಧುಗಳು ಈ ಸದಾವಕಾಶ ಬಳಸಿಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ. ಈ ಸಂದರ್ಭದಲ್ಲಿ ಹಾಜರಾಗುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಆಧಾರ್ ಪತ್ರ ವನ್ನು ತರಬೇಕು, ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ಮೇ 31 ರ ಬೆಳಗ್ಗೆ 11.30ಕ್ಕೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಸಂಸದೆ ಸುಮಲತಾ ಅಂಬರೀಶ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಆರೋಗ್ಯ ಇಲಾಖೆಯ ಪ್ರಮುಖ ಅಧಿಕಾರಿ ಹಾಗೂ ಬಿಬಿಎಂಪಿ ಕಮಿಷನರ್ ಅವರು ಉಪಸ್ಥಿತರಿರುತ್ತಾರೆ ಎಂದು ಸಿನಿಮಾ ಇಂಡಸ್ಟ್ರಿಯ ವ್ಯಾಕ್ಸಿನೇಶನ್ ಡ್ರೈವ್ ನೋಡಲ್ ಅಧಿಕಾರಿ ರೂಪ ಅಯ್ಯರ್ ಶ್ರೀವತ್ಸ ಅವರು ಮಾಧ್ಯಮ ಪ್ರಟಕಣೆಯ ಮೂಲಕ ತಿಳಿಸಿದ್ದಾರೆ
ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಇದ್ದುಕೊಂಡು ವ್ಯಾಕ್ಸಿನ್ ಬಗ್ಗೆ ಮಾಹಿತಿ ಪಡೆಯಬೇಕಾದವರು ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ (+91 7899428449) ಅವರನ್ನು ಸಂಪರ್ಕಿಸಬಹುದಾಗಿದೆ. ಇತರ ಕ್ಷೇತ್ರದಲ್ಲಿರುವವರು ನಿರ್ದೇಶಕಿ ರೂಪ ಅಯ್ಯರ್ (+91 9900999880) ಅವರನ್ನು ಸಂಪರ್ಕಿಸಬಹುದಾಗಿದೆ.