ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್ ಟಿ.ಆರ್ ಪನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುವಿನಲ್ಲಿ ರವಿತೇಜ ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್ ಟೈಟಲನ್ನು ಲೋಕಾರ್ಪಣೆ ಮಾಡಲಾಗಿದೆ.
ಸದ್ಯ ಕನ್ನಡದ ಶೀರ್ಷಿಕೆಯನ್ನು ತಂಡವು ರಿವೀಲ್ ಮಾಡಿರುವುದಿಲ್ಲ. ಪ್ರಚಾರದ ಸಲುವಾಗಿ ಸೋಮವಾರ ಲಿರಿಕಲ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಮದುವೆ ಸಂಭ್ರಮದಲ್ಲಿ ನವ ಜೋಡಿಗಳ ಎದುರು ’ಮಹರೆ ಜೈಲಾ ಅಲ್ಲಾ ಅಲ್ಲಾ ಎಲ್ಲಾ ಎಲ್ಲಾ’ ಹಾಡಿನಲ್ಲಿ ನಾಯಕ ಮತ್ತು ನಾಯಕಿ ತಂಡದೊಂದಿಗೆ ಹೆಜ್ಜೆ ಹಾಕುವ ಗೀತೆ ಇದಾಗಿದೆ. ಮದನ್‌ಕರ್ಕಿ ಸಾಹಿತ್ಯಕ್ಕೆ ಸಂಗೀತ ಸಂಯೋಜಕ ಯುವನ್ ಶಂಕರ್ ರಾಜ ಹಾಡಿಗೆ ಧ್ವನಿಯಾಗಿದ್ದು, ಇವರೊಂದಿಗೆ ರಿಜ್ವಾನ್,ರಾಜ ಭವತಾರಿಣಿ ಸೇರಿಕೊಂಡಿದ್ದಾರೆ.
ಪೊಲಿಟಿಕಲ್ ಡ್ರಾಮ ಕತೆ ಹೊಂದಿರುವ ಚಿತ್ರಕ್ಕೆ ರಚನೆ-ನಿರ್ದೇಶನ ವೆಂಕಟ್‌ಪ್ರಭು, ರಿಚರ್ಡ್ ಎಂ.ನಾಥನ್, ಸಂಕಲನ ಪ್ರವೀಣ್.ಕೆ.ಎಲ್, ಸಾಹಸ ಸ್ವಂಟ್‌ಶಿವ, ನೃತ್ಯ ರಾಜು ಸುಂದರಂ ಅವರದ್ದಾಗಿದೆ. ಸುರೇಶ್ ಅವರು 'ವಿ ಹೌಸ್ ಪ್ರೊಡಕ್ಷನ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್ ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ಎಸ್.ಜೆ ಸೂರ್ಯ ಉಳಿದಂತೆ ವೈ ಜಿ ಮಹೇಂದ್ರನ್, ವಾಗಿ ಚಂದ್ರಶೇಖರ್, ಅಂಜನಕೀರ್ತಿ, ಎಸ್.ಎ.ಚಂದ್ರಶೇಖರ್, ಉದಯ, ಮನೋಜ್ ಕೆ.ಭಾರತಿ, ಪ್ರೇಮ್ ಜಿ ಅಮರನ್, ಡ್ಯಾನಿಯೆಲ್, ಕರುಣಾಕರನ್ ಮುಂತಾದವರು ನಟಿಸುತ್ತಿದ್ದಾರೆ.