ಹಿರಿಯ ಸಂಗೀತ ನಿರ್ದೇಶಕ ದಿ.ಎಂ.ಎಸ್.ವಿಶ್ವನಾಥನ್ ರವರೇ “ಅಂದ ಏಳು ನಾಟ್ಕಳ್” (ಕನ್ನಡದ “ಲವ್ ಮಾಡಿ ನೋಡು”) ಚಿತ್ರದ ಕಥಾನಾಯಕನ ಪಾತ್ರಕ್ಕೆ ಸ್ಪೂರ್ತಿಯಾಗಿದ್ದರು!!!
ಪ್ರಥಮ ರಾತ್ರಿಯ ಕೋಣೆಯಲ್ಲಿ ವರನ ಮುಂದೆ ನಿಂತ ನವ ವಧು...ನಾನು ಈಗಾಗಲೇ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಅವನನ್ನು ಮರೆಯಲು ಸಾಧ್ಯವಾಗುತ್ತಿಲ್ಲಾ….ಎಂದು ಹೇಳಿದರೆ ಆ ವರನ ಪರಿಸ್ಥಿತಿ ಏನಾಗಿರಬೇಡ?!
ಒಂದು ಕಾಲದ ತಮಿಳು ಹಾಸ್ಯನಟ ಚಂದ್ರಬಾಬು ರವರ ನಿಜ ಜೀವನದಲ್ಲಿ ನಡೆದ ಈ ಒಂದು ಘಟನೆಯ ಸ್ಪೂರ್ತಿಯಿಂದ ಕಥೆ ಯನ್ನೇ ಸಿದ್ದಪಡಿಸದೇ…. ನೇರವಾಗಿ ಹಾಡುಗಳ ಧ್ವನಿಮುದ್ರಣಕ್ಕೆ ಕುಳಿತಿದ್ದರು ಕಥಾಲೇಖಕ/ನಿರ್ದೇಶಕ ಕೆ.ಭಾಗ್ಯರಾಜ್.
ಕಂಪೋಸಿಂಗ್ ನಲ್ಲಿ…….ತೆಲುಗು ಭಾಷೆ ಸ್ಪಷ್ಟವಾಗಿ ಬಾರದ ಎಂ.ಎಸ್. ವಿಶ್ವನಾಥನ್ ಮತ್ತು ತಮಿಳು ಭಾಷೆ ಸ್ಪಷ್ಟವಾಗಿ ಬಾರದ ತಬಲ ವಾದಕನ ನಡುವೆ ನಡೆಯುತ್ತಿದ್ದ ಹಾಸ್ಯಾಸ್ಪದ ವಾದವಿವಾದಗಳನ್ನು ಅಬ್ಸರ್ವ್ ಮಾಡಿದ ನಿರ್ದೇಶಕ ಕೆ.ಭಾಗ್ಯರಾಜ್ ರವರು ಅದೇ ಸ್ಪೂರ್ತಿಯಿಂದ
ಲವ್ ಮಾಡಿ ನೋಡು(ಅಂದ ಏಳು ನಾಟ್ಕಳ್) ಚಿತ್ರದ
ಮಂಗಳೂರು ಮಂಜುನಾಥ ಮತ್ತು ಆತನ ಶಿಷ್ಯನ ಪಾತ್ರವನ್ನು ಸೃಷ್ಟಿಸಿ…. ಸ್ಕ್ರೀನ್ ಪ್ಲೇ ಮಾಡಿದ್ದರು.
ಒಂದು ಅತ್ಯುತ್ತಮವಾದ “ಚಿತ್ರಕಥೆ” ಎಂಬುದು ಹೇಗಿರಬೇಕೆಂದು ನಾನು ಕಲಿತದ್ದೇ ಈ “ಅಂದ ಏಳು ನಾಟ್ಕಳ್”ಚಿತ್ರದಿಂದ ಎಂದು ನಿರ್ದೇಶಕ ಮಣಿರತ್ನಂ ಹೇಳಿಕೊಂಡಿದ್ದರು