ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಆಸ್ತಿಕನೊ/ನಾಸ್ತಿಕನೋ ಆತನ ಚಿತ್ರವನ್ನು ‘ಶುಭ ಮುಹೂರ್ತ’ದಲ್ಲಿ
‘ಶುಭ ಘಳಿಗೆ’ಯಲ್ಲಿ ಪ್ರಾರಂಭಿಸಿ
ಚಿತ್ರೀಕರಣದ ಮುಕ್ತಾಯಕ್ಕೆ ಕುಂಬಳಕಾಯಿ ಒಡೆದು ದೃಷ್ಟಿ ನಿವಾಳಿಸುವ ಸಂಪ್ರದಾಯವನ್ನು ಪಾಲಿಸುವುದು ವಾಡಿಕೆ..!
ಅದಕ್ಕೆ ಬಹು ಮುಖ್ಯ ಕಾರಣ ಸಿನಿಮಾ ತಯಾರಿಕೆಯಲ್ಲಿ ಹೂಡುವ ಲಕ್ಷಾಂತರ/ಕೋಟ್ಯಂತರ ರೂಪಾಯಿಗಳು (ಪೂರ್ಣವಾಗಿ) ನಿಖರವಾಗಿ ಹಿಂತಿರುಗುತ್ತದೆ ಎಂಬ ಭರವಸೆ ಇರದಿರುವುದೇ ಆಗಿದೆ.
ರಾಶಿ, ಮುಹೂರ್ತ, ಒಳ್ಳೆಯ ಕಾಲ, ಇಂತಹ ಗೊಡ್ಡು ನಂಬಿಕೆಗಳನ್ನು ಪಾಲಿಸದೇ ಇವುಗಳ ವಿರುದ್ದವಾಗಿ ‘ಮುಹೂರ್ತ’ವನ್ನಾಚರಿಸಿ ಗೆದ್ದು ತೋರಿಸುತ್ತೇನೆ ಎಂದು ಹೊರಟು ಅದರಂತೆ ನಿರ್ಮಿಸಿದ ಸಿನಿಮಾ ಫಲಿತಾಂಶದಿಂದ ಅಧೀರರಾಗಿ ಹೋಗಿದ್ದವರು ನಟ, ನಿರ್ಮಾಪಕ, ಸಂಗೀತ ನಿರ್ದೇಶಕ, ನಿರ್ದೇಶಕ ಮನ್ಸೂರ್ ಆಲಿಖಾನ್.
ಸಾಮಾನ್ಯವಾಗಿ ಹಿಂದೂಗಳು ತಮ್ಮ ಮನೆಗಳಲ್ಲಿ ಹುಟ್ಟುವ ಗಂಡು ಸಂತಾನಕ್ಕೆ ರಾಮ ಎಂದು ನಾಮಕರಣ ಮಾಡುತ್ತಾರೆ. ಆದರೆ, ಋಣಾತ್ಮಕ ಕಥಾ ಪಾತ್ರವಾದ ರಾವಣನ ಹೆಸರಿಡಲು ಯೋಚಿಸುತ್ತಾರೆ.
ಅಂಥಾ ನೆಗೆಟಿವ್ ಕ್ಯಾರೆಕ್ಟರ್ ನ ಹೆಸರಾದ ‘ರಾವಣನ್’ ಎಂಬ ಟೈಟಲ್ ನ್ನು ತನ್ನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡು
ರಾಹುಕಾಲದಲ್ಲಿ ವಿಧವಾ ಮಹಿಳೆಯೊಬ್ಬರ ಕೈಯಿಂದ ಕ್ಲ್ಯಾಪ್ ಹೊಡೆಸಿ ಕ್ಯಾಮೆರಾ ಎದುರು ಬೆಕ್ಕುಗಳನ್ನು ಬಿಟ್ಟು….ಮೊದಲ ಶಾಟ್ ಚಿತ್ರೀಕರಿಸುವುದರ ಮೂಲಕ ಚಿತ್ರದ ಚಿತ್ರೀಕರಣ ಪ್ರಾರಂಭ ಸುಲಭವಾಗಿತ್ತು
ಆದರೆ ಪೂರ್ಣವಾಗುವಷ್ಟರಲ್ಲಿ ನಿರ್ದೇಶಕ/ನಿರ್ಮಾಪಕರಿಗೆಲ್ಲಾ ಏಳು ಕೆರೆ ನೀರು ಕುಡಿದಂತಹ ಅನುಭವವಾಗಿತ್ತು.
ಅಂತೂ……ಹಾಗೂ ಹೀಗೂ
ಸಿನಿಮಾ ಬಿಡುಗಡೆ ಆಯಿತು ಫಲಿತಾಂಶ ಮಾತ್ರ ಬಹು ದೊಡ್ಡ ಶಾಕ್ ನೀಡಿತ್ತು.
ತೀರಾ ಅಧೀರರಾದ
ಅದೇ….. ಮನ್ಸೂರಲೀಖಾನ್ ‘ವಾಳ್ಗ ಜನನಾಯಗಂ’ ಎಂಬ ತನ್ನ ಮುಂದಿನ ಚಿತ್ರಕ್ಕೆ ಶುಭ ಘಳಿಗೆಯಲ್ಲಿ
‘ಲಕ್ಕಿ ಹ್ಯಾಂಡ್’ ಎಂದು ನಂಬಲಾದ ವ್ಯಕ್ತಿಯೋರ್ವರ ಮೂಲಕ ಕ್ಲ್ಯಾಪ್ ಹೊಡೆಸಿ
ಕ್ಯಾಮೆರಾ ಮುಂದೆ ನರಿ ಯೊಂದನ್ನು ಬಿಟ್ಟು ಮೊದಲ ಶಾಟ್ ಚಿತ್ರೀಕರಿಸಿದ್ದರು.