ಜೀವನ ಎನ್ನುವುದು ಯಾರಿಗೂ ಸುಲಭವಾಗಿರುವುದಿಲ್ಲ. ಪ್ರತಿ ಸಾಧಕರು ಕೂಡ ಕಷ್ಟಪಟ್ಟೇ ಮೇಲೆ ಬಂದಿರುತ್ತಾರೆ. ಹಿಂದೆಲ್ಲಾ ಪತ್ರಕರ್ತರಿಗೆ ಮೈಕಟ್ಟು ಆಕರ್ಷಕವಾಗಿ ಇರಬೇಕಾದ ಅನಿವಾರ್ಯತೆ ಇರಲಿಲ್ಲ. ಆದರೆ ಇಂದು ದೃಶ್ಯ ಮಾಧ್ಯಮಗಳ ದೆಸೆಯಿಂದಾಗಿ ಮಾಧ್ಯಮ ಪ್ರತಿನಿಧಿಗಳು ಕೂಡ ದೈಹಿಕವಾಗಿ ಆಕರ್ಷಕ ಮೈಕಟ್ಟು ಹೊಂದಿರಬೇಕೆಂದು ಸುದ್ದಿ ಸಂಸ್ಥೆಗಳು ನಿರೀಕ್ಷಿಸುತ್ತವೆ. ಇಂಥ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದ ವಿದ್ಯಾರ್ಥಿನಿಯಾಗಿ ರಂಗ ಪ್ರವೇಶ ಮಾಡಿದ ಭೂಮಿಕಾ ದೈಹಿಕವಾಗಿ ತೂಕ ಕಳೆದುಕೊಳ್ಳಲು ಮಾಡಿದ ಪ್ರಯತ್ನ ಇಂದು ಅವರನ್ನು ಮಾಡೆಲ್ ಆಗುವಂತೆ ಮಾಡಿದೆ. ಈ ಒಂದು ಬದಲಾವಣೆಯ ಹಿಂದಿನ ಕತೆಯನ್ನು ಅವರಲ್ಲಿ ವಿಚಾರಿಸಿದಾಗ ಅವರು ನೀಡಿದ ಮಾಹಿತಿ ಇಲ್ಲಿದೆ.
ಜೀವನದಲ್ಲಿ ಕಷ್ಟದ ಬೆಂಕಿಯಲ್ಲಿ ಬೆಂದು ಬೆಳೆದ ಭೂಮಿಕಾ ಇಂದು ಒಂದಷ್ಟು ಜನಕ್ಕೆ ಸ್ಪೂರ್ತಿಯಾಗಿದ್ದಾರೆ.
ಐದಾರು ವರ್ಷಗಳ ಹಿಂದೆ ಭೂಮಿಕಾ ತುಂಬ ದಪ್ಪಗಿದ್ದರು. ದಪ್ಪಗಿರುವುದು ತಪ್ಪೇನಲ್ಲ. ಆದರೆ ಇವರ ಹೆಚ್ಚಿದ ದೇಹದ ತೂಕದಿಂದಾಗಿ ಕಂಡವರಲ್ಲಿ ಹೆಚ್ಚಿನವರು ಮನಸೋ ಇಚ್ಚೆ ಮಾತನಾಡುತ್ತಿದ್ದುದು ಸುಳ್ಳಲ್ಲ. ಎಲ್ಲೇ ಕೆಲಸಕ್ಕೇ ಹೋದರೂ ಮೂದಲಿಸಿ ನಗುತಿದ್ದರು ಎಂದು ಸ್ವತಃ ಭೂಮಿಕಾ ಅವರೇ ಹೇಳಿಕೊಳ್ಳುತ್ತಾರೆ.
ಆ ಸಂದರ್ಭದಲ್ಲಿ ಭೂಮಿಕಾಗೆ ಮನೆಯಲ್ಲೂ ನೆಮ್ಮದಿ ಇರಲಿಲ್ಲ. ಯಾಕೆಂದರೆ ತನ್ನ ಇಷ್ಟದ ಕೆಲಸ ಮಾಡಲು ಅವಕಾಶವಿಲ್ಲ, ಎಲ್ಲೆಡೆಯೂ ಅವಮಾನ, ನೋವು ಒಟ್ಟಿನಲ್ಲಿ ಜೀವನವೇ ಸಾಕು ಎನ್ನುವಂತಿತ್ತು ‘ಜರ್ನಲಿಸಮ್’ ಓದಿರುವ ಭೂಮಿಕಾಳ ಪರಿಸ್ಥಿತಿ.
ಹತ್ತಾರು ಸ್ನೇಹಿತರಿದ್ದರೂ ಯಾರೂ ಕೂಡ ಸಹಾಯ ಮಾಡುತ್ತಿರಲಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು ಎಂಬ ಹಠ, ಅವರು ಅವಮಾನಿಸಿದಷ್ಟು ಬೆಂಕಿಯ ಕಿಚ್ಚಿನಂತೆ ಹೆಚ್ಚುತಲೇ ಇತ್ತು. ಹಾಗಾಗಿ ಮೊದಲು ತನ್ನಲ್ಲಿರುವ ಮೈನಸ್ ಪಾಯಿಂಟ್ ಗಳನ್ನು ಯೋಚಿಸಿ ಅದನ್ನು ಪಟ್ಟಿ ಮಾಡಿ, ಮೊದಲಿಗೆ ತನ್ನ ದೇಹದ ತೂಕ ಇಳಿಸಲು ಎಷ್ಟೋ ಪ್ರಯತ್ನ ಪಟ್ಟು ಊಟ ಬಿಟ್ಟರೂ ದೇಹದ ತೂಕ ಹೆಚ್ಚುತ್ತಲೇ ಇತ್ತು! ಜೊತೆಗೆ ಕೆಲಸವಿಲ್ಲದೇ ಕುಟುಂಬದ ನಿರ್ವಹಣೆಯೂ ಕಷ್ಟವಾಗಿತ್ತು. ಜೊತೆಗೆ ಆತ್ಮೀಯರು ಎನ್ನುವವರದೇ ಮೂದಲಿಕೆ ಮನಸ್ಸಲ್ಲಿ ಬೇರೂರಿತ್ತು. ಬಹುಶಃ ಈ ಮೂದಲಿಕೆಗಳೇ ಅವರು ತಮ್ಮನ್ನು ಬದಲಾಯಿಸಲು ಪ್ರೇರಣೆ ನೀಡಿರಬೇಕು. ಎಷ್ಟೇ ಕಷ್ಟ ಬಂದರೂ ಬಿಡದೇ ತಾನು ಪ್ರತಿನಿತ್ಯ ಒಂದಷ್ಟು ಆರೋಗ್ಯಕರ ಡಯೆಟ್ ಶುರು ಮಾಡುವ ತೀರ್ಮಾನ ಕೈಗೊಂಡರು.
ದಪ್ಪಕ್ಕಿರುವವರು ಸಣ್ಣಗಾಗುವ ತೀರ್ಮಾನ ಕೈಗಳ್ಳೊವುದು ಎಲ್ಲ ದಿನವೂ ನಡೆಯುತ್ತಿರುತ್ತದೆ. ಆದರೆ ತೀರ್ಮಾನವನ್ನು ಕಾರ್ಯರೂಪಕ್ಕೆ ತರುವಂಥ ಅಪರೂಪದ ಮಂದಿಯಲ್ಲಿ ಭೂಮಿಕಾ ಕೂಡ ಸೇರ್ಪಡೆಯಾಗಿದ್ದು ವಿಶೇಷ.
ಕೇವಲ 6 ತಿಂಗಳಲ್ಲಿ ತೂಕ ಇಳಿಸಿಕೊಂಡು ಎಲ್ಲರನ್ನೂ ಸೆಳೆಯುವಂತೆ ಮಾಡಿದರು. ಮೂದಲಿಸುತ್ತಿದ್ದ ಗೆಳೆಯರು, ಸಂಬಂಧಿಕರು ಬಾಯಿಯ ಮೇಲೆ ಬೆರಳು ಇಟ್ಟಕೊಂಡು ಚಪ್ಪಾಳೆ ತಟ್ಟುವಂತೆ ಬದಲಾವಣೆ ಮಾಡಿಕೊಂಡರು.
ಮೊದಲು ನಟನೆಯ ಅವಕಾಶಕ್ಕಾಗಿ ಅಲೆಯುತ್ತಿದ್ದ ಭೂಮಿಕಾಳನ್ನು ಅವಕಾಶಗಳೇ ಹುಡುಕಿ ಬರುವಂತಾಯಿತು. ಸಿನಿಮಾ, ಧಾರಾವಾಹಿ, ಆಲ್ಬಂ ಸಾಂಗ್, ಹೀಗೆ ಬಿಡುವಿಲ್ಲದಂತೆ ಬ್ಯುಸಿ ಆದರು. ಅಂದು ಕೆಲಸಕ್ಕಾಗಿ ಪರದಾಡುತ್ತಿದ್ದವರು ಇಂದು ಯಾವ ಕೆಲಸ ಮಾಡಲು ಎಂದು ಯೋಚಿಸುವಷ್ಟು ಬೆಳೆದಿದ್ದಾರೆ.
ಅದರ ಜೊತೆಗೆ ಮಾಡಲಿಂಗ್ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತನ್ನಂತೆ ದೇಹದ ತೂಕವನ್ನು ಆರೋಗ್ಯವಾದ ವಿಧಾನಗಳಿಂದ ಇಳಿಸಿಕೊಳ್ಳಲು- ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಉತ್ತಮ ಕೋಚ್ ಆಗಿ ಯಾವುದೇ ತೊಂದರೆ ಇಲ್ಲದಂತೆ ನೂರಕ್ಕೂ ಹೆಚ್ಚಿನ ಗ್ರಾಹಕರನ್ನೂ ಹೊಂದಿದ್ದಾರೆ. ಇವರ ಈ ಅದ್ಭುತವಾದ ಬದಲಾವಣೆ ಎಷ್ಟೋ ಜನರಿಗೆ ಸ್ಫೂರ್ತಿಯಾಗಿದೆ.
ಅಂದಹಾಗೆ ಭೂಮಿಕಾ ಈಗ ಯಶಸ್ಸು ಕಂಡುಕೊಂಡಿದ್ದಾರೆ ಅವರ ಮುಂದಿನ ಜೀವನ ಕೂಡ ಯಶಸ್ಸಿನಿಂದ ಕೂಡಿರಲಿ. ನೀವು ಕೂಡ ದೇಹದ ತೂಕ ಇಳಿಸಿಕೊಳ್ಳಲು ಅಥವಾ ಹೆಚ್ಚಿಸಿಕೊಳ್ಳಲು ಅಂದವಾಗಿ ಕಾಣಲು ಬಯಸುವುದಾದರೆ ಭೂಮಿಕಾರನ್ನು ಸಂಪರ್ಕಿಸಬಹುದು.
ಇನ್ಸ್ಟಾಗ್ರಾಮ್ ನಲ್ಲಿ :
https://instagram.com/coach_with_bhumi?utm_medium=copy_link
ಮತ್ತು
Bhumika27_official
ಪೇಜಲ್ಲಿ ಸಂಪರ್ಕಿಸಬಹುದು
Face book : Bhumika Manjunath.