ಏಕಲವ್ಯ ಎನ್ನುವ ಯುವ ಸಾಹಸ ಪ್ರತಿಭೆಯ ಮೂಲಕ ಸುದ್ದಿಯಾದ ಚಿತ್ರ ಕಲಿವೀರ. ಥಿಯೇಟರ್ ಸಮಸ್ಯೆಯ ನಡುವೆಯೇ ತೆರೆಕಂಡ ಈ ಸಿನಿಮಾವನ್ನು ಸಮಸ್ಯೆಗಳೆಲ್ಕಮುಗಿದ ಮೇಲೆ ಮತ್ತೊಮ್ಮೆ ತೆರೆಗೆ ತರುವ ಯೋಜನೆ ಇದೆ ಎಂದು ಚಿತ್ರತಂಡ ತಿಳಿಸಿದೆ.
ರಾಣೆಬೆನ್ನೂರಿನ ಹುಡುಗ ಏಕಲವ್ಯ ಹೆಸರಿಗೆ ತಕ್ಕಂತೆ ಸಾಹಸ ಕಲೆಗಳನ್ನು ಕಂಡೇ ಕಲಿತವನು. ಚಿತ್ರ ನೋಡಿದವರು ನಾಯಕನ ಅದ್ಭುತ ಸಾಹಸ ಕಂಡು ಅಚ್ಚರಿಗೊಂಡಿದ್ದಾರೆ. ಆದರೆ ಚಿತ್ರ ಎಲ್ಲರಿಗೂ ತಲುಪಿಸಲು ಸಾಧ್ಯವಾಗಿಲ್ಲ. ಆದರೆ ಪೈರಸಿಯ ಮೂಲಕ ಹರಿದಾಡಿರುವುದಕ್ಕೆ ಕೊರತೆ ಇಲ್ಲ ಎಂದು ನಿರ್ದೇಶಕ ಅವಿ ಅಭಿಪ್ರಾಯ ಪಟ್ಟಿದ್ದಾರೆ.
ನಾಯಕ ಏಕಲವ್ಯ ಮಾತನಾಡಿ ನಾನು
ಚಿತ್ರದ ಪೋಸ್ಟರ್ ಅಂಟಿಸುವ ಕೆಲಸವನ್ನೂ ಮಾಡಿದ್ದೇನೆ.
ಸುಮಾರು ಎರಡು ಸಾವಿರ ಪೋಸ್ಟರ್ ನಾನೊಬ್ಬನೇ ಅಂಟಿಸಿದ್ದೇನೆ! ಚಿತ್ರ ನೋಡಿದವರು ಮೆಚ್ಚಿದ್ದಾರೆ. ಹೆಚ್ಚು ಜನರಿಗೆ ತಲುಪಿಲ್ಲ ಎಂದು ನೋವು ತೋಡಿಕೊಂಡರು.
ನಿರ್ಮಾಪಕ ಕೆಎಮ್ ಪಿ ಶ್ರೀನಿವಾಸ್ “ಈ ಚಿತ್ರಕ್ಕೆ ಹೂಡಿದ ಬಂಡವಾಳ ವಾಪಾಸು ಬಂದಿದೆ. ಆದರೆ ಚಿತ್ರಕ್ಕಾಗಿ ವಿನಿಯೋಗಿಸಿದ ಮೂರು ವರ್ಷದ ಶ್ರಮ ಗುರುತಿಸಲ್ಪಟ್ಟಿಲ್ಲ. ಅದಕ್ಕಾಗಿ ಸದ್ಯದಲ್ಲೇ ಮತ್ತೊಮ್ಮೆ ಚಿತ್ರವನ್ನು ಬಿಡುಗಡೆಗೊಳಿಸುವ ಯೋಜನೆ ಇದೆ” ಎಂದಿದ್ದಾರೆ. ಚಿತ್ರದ ಛಾಯಾಗ್ರಹಕ ಹಾಲೇಶ್ ಸೇರಿದಂತೆ ಭಾ.ಮ ಹರೀಶ್, ಭಾ.ಮ ಗಿರೀಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.