ಬಿಗ್ ಬಾಸ್ ವಿಜೇತ ಸಿದ್ದಾರ್ಥ್ ಶುಕ್ಲ ನಿಧನ

ಸಿದ್ದಾರ್ಥ್ ಶುಕ್ಲ ಕಳೆದೊಂದು ದಶಕದಿಂದ ಹಿಂದಿ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟ. ಕಳೆದ ಸೀಸನ್ ಬಿಗ್ ಬಾಸ್ ವಿಜೇತರಾಗಿಯೂ ಸುದ್ದಿ ಮಾಡಿದ್ದ ಸಿದ್ದಾರ್ಥ್ ಇಂದು ಮುಂಜಾನೆ ಎರಡು ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬಾಲಿವುಡ್ ನ ಯುವನಟ ಸಿದ್ದಾರ್ಥ್ ಶುಕ್ಲ ಇನ್ನಿಲ್ಲ ಎನ್ನುವುದು ಅವರ ಅಭಿಮಾನಿಗಳಿಗೆ ಈಗಲೂ ನಂಬಲಾಗದ ಸುದ್ದಿ. ಆದರೆ ರಾತ್ರಿ ಎದೆನೋವಿಗೊಳಗಾದ ಸಿದ್ದಾರ್ಥ್ ಅವರನ್ನು ಮುಂಬೈನ ಕೂಪರ್ ಆಸ್ಪತ್ರೆಗೆ ಕೊಂಡೊಯ್ಯುವ ಹೊತ್ತಿಗೆ ಅವರ ಉಸಿರು ನಿಂತುಹೋಗಿತ್ತು. 40 ವರ್ಷ ವಯಸ್ಸಿನ ಅವರು ವಿವಾಹವಾಗಿರಲಿಲ್ಲ. ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದ ‘ಬಾಲಿಕಾ ವಧು’ ‘ಸಿ ಐಡಿ’ ಮೊದಲಾದ ಧಾರಾವಾಹಿಗಳಲ್ಲಿ, ‘ಜಲಕ್ ದಿಕ್ ಲಾಜಾ’ ರಿಯಾಲಿಟಿ ಶೋ ಸ್ಪರ್ಧಿಯಾಗಿ, ‘ಇಂಡಿಯಾಸ್ ಗಾಟ್ ಟ್ಯಾಲೆಂಟ್ ‘ ನಿರೂಪಕನಾಗಿ,’ಖತರೋಂಕಿ ಕಿಲಾಡಿ’ಯ ಹಾಗೂ ಬಿಗ್ ಬಾಸ್ ನ ವಿಜೇತರಾಗಿ ಗುರುತಿಸಿಕೊಂಡಿದ್ದ ಸಿದ್ದಾರ್ಥ್ ಶುಕ್ಲಾ ನಿಜಕ್ಕೂ ಪ್ರತಿಭೆಯ ಮೂಲಕವೇ ಗಮನ ಸೆಳೆದಿದ್ದರು.

Recommended For You

Leave a Reply

error: Content is protected !!