
ಮನರಂಜನಾ ಕ್ಷೇತ್ರಕ್ಕೆ ಅರ್ಗಸ್ ಎಂಟರ್ಟೇನ್ಮೆಂಟ್ ಕಾಲಿಟ್ಟಿದೆ. ಮನರಂಜನಾ ಕ್ಷೇತ್ರದ ಮರುವ್ಯಾಖ್ಯಾನವೇ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ಇದರ ಉದ್ಘಾಟನಾ ಸಮಾರಂಭ ಶನಿವಾರ ಸಂಜೆ ನೆರವೇರಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಮ್ಮ ಕಡೆಯಿಂದ ಸಹಕಾರ ಇರಲಿದೆ ಎಂದು ಶುಭಕೋರಿದರು. “ಪರರಾಜ್ಯಗಳಲ್ಲಿ, ಪರದೇಶಗಳಲ್ಲಿ ಚಿತ್ರೀಕರಣಕ್ಕೆ ಹೋದಾಗ ಚಿತ್ರ ತಂಡದ ಪಾಸ್ ಪೋರ್ಟ್ ತೆಗೆದಿರಿಸಿ ಸೆಟ್ಲ್ ಮೆಂಟ್ ಮಾಡಿಸುವಂಥ ಸಂದರ್ಭ ಇರುತ್ತದೆ. ಕರ್ನಾಟಕದಲ್ಲಿ ನಾವು ಏನೇ ಹೆಸರು ಮಾಡಿದ್ದರೂ ಹೊರಗಡೆ ನಮ್ಮದೇನೂ ನಡೆಯುವುದಿಲ್ಲ. ಅಂಥ ಸಂದರ್ಭದಲ್ಲಿ ನಿಮ್ಮ ಮೂಲಕ ಚಿತ್ರೀಕರಣಕ್ಕೆ ಸಹಕಾರ ಸಿಗಲಿದೆ ಎನ್ನುವುದು ಖುಷಿಯ ವಿಚಾರ” ಎಂದರು ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು. ಆದರೆ ಸದ್ಯಕ್ಕೆ ಅರ್ಗಸ್ ಕಡೆಯಿಂದ ವಿದೇಶೀ ಚಿತ್ರೀಕರಣ ಸಹಕಾರದ ಯೋಜನೆಗಳು ಇಲ್ಲ ಎನ್ನುವುದುನ್ನು ನೆನಪಿಸಿದ ನಿರ್ಮಾಪಕರ ಸಂಘದ ಗೌರವ ಕಾರ್ಯದರ್ಶಿ ಕೆ ಮಂಜು, ಆದರೆ ಮುಂದೆ ಅದು ಕೂಡ ಕಾರ್ಯಗತವಾಗಲಿ ಹಾರೈಸಿದರು.
ಜನಪ್ರಿಯ ಸಿನಿಮಾ ನಿರ್ದೇಶಕ ನಾಗಣ್ಣ ಕೂಡ ವಿದೇಶೀ ಚಿತ್ರೀಕರಣದ ಸಮಸ್ಯೆಗಳನ್ನು ತಾವು ಕೂಡ ಎದುರಿಸಿದ್ದು, ಅದನ್ನು ನಿವಾರಿಸುವ ಸಂದರ್ಭ ಬರಲಿ ಎಂದು ಬಯಸಿದರು.
ಒಟ್ಟಿನಲ್ಲಿ ಸಂಸ್ಥೆಯು ಬೆಂಗಳೂರಿನ ಮನರಂಜನಾ ಕ್ಷೇತ್ರದಲ್ಲಿ ಲಕ್ಷಾಂತರ ವ್ಯಕ್ತಿಗಳಿಗೆ ಭರವಸೆಯ ವೇದಿಕೆಯನ್ನು ಒದಗಿಸಲು ಮುಂದಾಗಿದೆ. ಅರ್ಗಸ್ ಎಂಟರ್ಟೇನ್ಮೆಂಟ್ಸ್ ಸಂಸ್ಥೆಯ ಸ್ಥಾಪಕ ಸುದಿಪ್ತೊ ಚಟರ್ಜಿ, ಸಹ ಸ್ಥಾಪಕ ಜೈ ರಾಜ್ ಸಿಂಗ್ ಶೇಖಾವತ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಋಷಿರಾಜ್ ಸಿಂಗ್ ಶೇಖಾವತ್ ಹರ್ಷ ವ್ಯಕ್ತಪಡಿಸಿದ್ದಾರೆ.
ಅರ್ಗಸ್ ಎಂಟರ್ಟೇನ್ಮೆಂಟ್ ಸಂಸ್ಥೆಯ ಸ್ಥಾಪಕರಾದ ಸುದಿಪ್ತೋ ಚಟರ್ಜಿ ಉದ್ಘಾಟನಾ ಭಾಷಣದಲ್ಲಿ “ಮನರಂಜನಾ ಕ್ಷೇತ್ರದಲ್ಲಿ ಹಿಂದೆ ಉಳಿದವರಿಗೆ ಪ್ರೋತ್ಸಾಹ ನೀಡುವ ಏಕೈಕ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು. ಸವಲತ್ತು ಇರುವವರು ಹಾಗೂ ಹಿಂದುಳಿದವರನ್ನು ಒಂದೇ ಸೂರಿನಲ್ಲಿ ತರುವ ಯೋಜನೆ ಇದೆ ಎಂದರು. ಸಮಾರಂಭದಲ್ಲಿ ನಿರ್ಮಾಪಕ ಎನ್ ಎಂ ಸುರೇಶ್, ಶೇಖಾವತ್ ಅರ್ಗಸ್ ಎಂಟರ್ಟೈನೆಂಟ್ ಸಹ ಸ್ಥಾಪಕ ಜೈ ರಾಜ್ ಸಿಂಗ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅರ್ಗಸ್ ಎಂಟರ್ಟೇನ್ಮೆಂಟ್ ಸಂಸ್ಥೆಯು ಮುಂದೆ ಉತ್ಸವ ‘ಡೈನೋಶಿಯ’ ಹಾಗೂ ಸೌಂದರ್ಯ ಸ್ಪರ್ಧೆ ‘ಅರ್ಗಸ್ ಎಂಜಲಿಕ್’ ಹಮ್ಮಿಕೊಂಡಿದ್ದು ಅದರ ಬಗ್ಗೆ ಟೀಸರ್ ತೋರಿಸಲಾಯಿತು. ಸಂಸ್ಥೆಯು ಒಟಿಟಿ ಕ್ಷೇತ್ರಕ್ಕೂ ಸಹ ಲಗ್ಗೆ ಇಡಲಿದೆ. ಇಂದಿನ ಹಾಗೂ ಮುಂದಿನ ಪೀಳಿಗೆಯು ಒ ಟಿ ಟಿ ಕ್ಷೇತ್ರಕ್ಕೆ ಮನಸ್ಸು ಮಾಡಿದೆ. ಅವರ ಕನಸುಗಳನ್ನು ನನಸು ಮಾಡುವ ಗುರಿ ಆರ್ಗಸ್ ನದ್ದಾಗಿದೆ. ಇದರೊಂದಿಗೆ ಮನರಂಜನಾ ಕ್ಷೇತ್ರದ ಎಲ್ಲ ವಿಭಾಗಗಳಿಗೆ ಈ ಆನ್ ಲೈನ್ ಸಂಪರ್ಕ ಸೇತುವೆ ತೊಡಗಿಕೊಳ್ಳಲಿದೆ. ಸಿನಿಮಾ ಚಿತ್ರೀಕರಣ ಸ್ಥಳ ಆಗಲಿ, ಕ್ಯಾಮೆರಾ ಅಗಲಿ, ಚಿತ್ರೀಕರಣದ ಉಪಕರಣಗಳ ವಿಚಾರದಲ್ಲಿಯೂ ಅರ್ಗಸ್ ಎಂಟರ್ಟೇನ್ಮೆಂಟ್ ಆನ್ಲೈನ್ ಸ್ಪಂದಿಸಿ ಸಹಕಾರ ನೀಡಲಿದೆ ಎಂದು ಸಂಸ್ಥೆಗೆ ಸಂಬಂಧಿಸಿದವರು ತಿಳಿಸಿದ್ದಾರೆ.