ನಲವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ
ತನ್ನದೇ ಮೊದಲ ಚಿತ್ರವನ್ನು ಇದುವರೆಗೂ ಚಿತ್ರಮಂದಿರದಲ್ಲಿ ವೀಕ್ಷಿಸದೇ ವೈರಾಗ್ಯದಿಂದಿರುವ ಟಿ.ರಾಜೇಂದರ್ ಎಂಬ ತಮಿಳು ನಟ ಸಾಹಿತಿ ನಿರ್ದೇಶಕ ಸಂಗೀತ ನಿರ್ದೇಶಕನಿಗೆ ಆದ ಅವಮಾನದ ಕತೆ ಇದು..
ತಮಿಳು ಚಿತ್ರರಂಗದಲ್ಲಿನ ಮೈಲಿಗಲ್ಲು…ಎಂದೇ ಉಲ್ಲೇಖಿಸಬಹುದಾದ ಚಿತ್ರ 1980ರಲ್ಲಿ ರಿಲೀಸ್ ಆಗಿದ್ದ “ಒರು ತಲೈ ರಾಗಂ”.
ಚಿತ್ರದ ರೂವಾರಿ ಟಿ.ರಾಜೇಂದರ್ ರವರನ್ನು ದೂರವಿಟ್ಟು
ನಿರ್ಮಾಪಕ ಈ.ಎಂ.ಇಬ್ರಾಹಿಂರವರು ಸಿದ್ದವಾದ ಈ ಚಿತ್ರದ ನೂರಾರು ಪ್ರಿವ್ಯೂ ಪ್ರದರ್ಶನಗಳನ್ನೇರ್ಪಡಿಸಿದರೂ ಯಾರೊಬ್ಬರೂ ಹಂಚಿಕೆ ಮಾಡುವ ಧೈರ್ಯ ತೋರದಾದಾಗ…. ಬೇರೆ ದಾರಿ ಕಾಣದೇ ತಾನೇ ಬಿಡುಗಡೆ ಮಾಡುವ ಪ್ರಯತ್ನದಲ್ಲಿ ತೊಡಗಿದರು.
ಆಶ್ಚರ್ಯವೆಂಬಂತೆ….ಕೇವಲ ಒಂದೇ ಚಿತ್ರಮಂದಿರದಲ್ಲಿ ಮಾರ್ನಿಂಗ್ ಶೋನಲ್ಲಿ ಪ್ರದರ್ಶಿತವಾದ ಚಿತ್ರ ಕ್ಕೆ ಒಂದು ವಾರ ಕಳೆಯುವುದರೊಳಗಾಗಿ ಹತ್ತಾರು ಪ್ರಿಂಟ್ಸ್ ಹಾಕಿ ತಮಿಳುನಾಡಿನಾದ್ಯಂತ ಬಿಡುಗಡೆ ಮಾಡಲು ಬಾರೀ ಡಿಮ್ಯಾಂಡ್ ನ್ನು ಕ್ರಿಯೇಟ್ ಮಾಡಿತ್ತು!
ಎರಡನೇ ವಾರದಿಂದ ಬಾರೀ ಪ್ರಚಾರದೊಂದಿಗೆ ಕಿಕ್ಕಿರಿದ ಜನಸಂದಣಿಯಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ….
ವರ್ಷಾನುಗಟ್ಟಲೆ ಕಲ್ಪನೆಮಾಡಿ… ಸಾಕಷ್ಟು ಹೋರಾಟ ಮಾಡಿ ನಿರ್ಮಾಣ ವಾದ ತನ್ನದೇ ಆ ಚಿತ್ರವನ್ನು ವೀಕ್ಷಿಸಲು ಅಂದು ಟಿ.ರಾಜೇಂದರ್ ಜೇಬಲ್ಲಿ ನಯಾ ಪೈಸೆ ಇಲ್ಲಾ.
ಗರಿಗೆದರಿದ ಕೂದಲು ಬಣ್ಣ ಮಾಸಿದ ಮುಖ
ತೋಳಿನಲ್ಲೊಂದು ನೇತಾಡುತ್ತಿರುವ ಬ್ಯಾಗು…ಹೀಗೆ ಥಿಯೇಟರ್ ಮುಂದೆ ಅಂಟಿಸಿರುವ ತನ್ನ ಚಿತ್ರದ ಪೋಸ್ಟರ್ ಕೆಳಗೆ ನಿಂತು ಅದನ್ನೇ ದಿಟ್ಟಿಸುತ್ತಾ ಇಷ್ಟೆಲ್ಲಾ ಕಷ್ಟ ಪಟ್ಟು ಮಾಡಿದ ನನ್ನ ಪ್ರಯತ್ನಕ್ಕೆ “ಪ್ರತಿಫಲ” ದೊರೆಯಲಿಲ್ಲವಲ್ಲಾ…ಎಂದುಕೊಳ್ಳುತ್ತಾ ಕಣ್ಣಂಚಿನ ನೀರನ್ನು ಒರೆಸಿಕೊಳ್ಳುತ್ತಿರುವ
ಟಿ.ರಾಜೇಂದರ್ ರವರನ್ನು ಗುರುತಿಸಿದ ಪರಿಚಯಸ್ಥರೊಬ್ಬರು ಸಮಾಧಾನಪಡಿಸಿ ತಾವೇ ಟಿಕೇಟ್ ಪಡೆದು ಇಬ್ಬರೂ ಚಿತ್ರಮಂದಿರದೊಳಗೆ ಪ್ರವೇಶಿಸುತ್ತಾರೆ….
ಟೈಟಲ್ ಕಾರ್ಡ್ಸ್…..ಆರಂಭವಾಗುತ್ತದೆ,
ಅಂತಿಮವಾದ ಡೈರೆಕ್ಟರ್ ಕಾರ್ಡ್ ತೆರೆಯ ಮೇಲೆ ಪ್ರದರ್ಶನವಾಗುತ್ತಿದ್ದಂತೆ….ದು:ಖ ತಡೆಯಲಾಗದೇ ಬಿಕ್ಕಳಿಸುತ್ತಾ ಚಿತ್ರಮಂದಿರದಿಂದ ಹೊರಬಂದುಬಿಡುತ್ತಾರೆ!
ಚಿತ್ರದ ಕಥೆ, ಚಿತ್ರಕಥೆ ಸಂಭಾಷಣೆ ಸಾಹಿತ್ಯ ಸಂಗೀತ ನಿರ್ದೇಶನ…. ಹೀಗೆ ಎಲ್ಲವನ್ನೂ ತಾವೇ ಮಾಡಿದ್ದರೂ ಹೇಗಾದರೂ ಸರಿಯೇ ಈತನನ್ನು ತುಳಿಯಬೇಕೆಂದು ನಿರ್ಧರಿಸಿದ್ದ ನಿರ್ಮಾಪಕ ಮತ್ತು ಕ್ಯಾಮೆರಾ ಮೆನ್ಸ್…. ಕುತಂತ್ರದಿಂದ
“ಮೂಲ ಕಥೆ” ರಾಜೇಂದ್ರನ್ಎಂಬ ಒಂದು ಕಾರ್ಡ್
“ಸಂಗೀತ ಸಾಹಿತ್ಯ” ರಾಜೇಂದ್ರನ್….ಎಂಬ ಮತ್ತೊಂದು ಕಾರ್ಡ್ ನ್ನು ಕಾಟಾಚಾರಕ್ಕೆ ಎಂಬಂತೆ ನಡು ನಡುವೆ ಸೇರಿಸಲಾಗಿರುವುದರಿಂದ ಅತೀವ ನೋವುಂಡ ಟಿ.ರಾಜೇಂದರ್….ಇಂದಿನ ವರೆಗೂ ಆ ಚಿತ್ರವನ್ನು ಥಿಯೇಟರ್ ನಲ್ಲಿ ವೀಕ್ಷಿಸಿಲ್ಲ..
ಇಂದು, ಮನಸ್ಸು ಮಾಡಿದರೆ… ಆ ಚಿತ್ರದ ನೆಗೆಟಿವ್ ರೈಟ್ಸ್ ನ್ನೇ ಕೊಂಡು… ತನಗಿಷ್ಟ ಬಂದಂತೆ ಟೈಟಲ್ಸ್ ಸೇರಿಸಬಹುದಾದ ಅನುಕೂಲವಿದ್ದರೂ..
ಟಿ.ರಾಜೇಂದರ್ ರವರು ನನ್ನ ಆ ಪ್ರಥಮ ಚಿತ್ರ “ಒರು ತಲೈ ರಾಗಂ” ಚಿತ್ರದ ಯಶಸ್ವಿ 100ನೇ ದಿನದ ಪ್ರದರ್ಶನ ಸಮಾರಂಭದಲ್ಲಿ “ನನ್ನನ್ನು ಮಾತ್ರ ದೂರವಿಟ್ಟು”
ಶೀಲ್ಡ್ ತೆಗೆದುಕೊಂಡವರ್ಯಾರೂ ಇಂದು ಫೀಲ್ಡ್ ನಲ್ಲೇ ಇಲ್ಲ..!
ಹೇಗೋ ನನ್ನ ಚಿತ್ರ ಜೀವನಕ್ಕೆ ಶ್ರೀಕಾರ ಹಾಕಿದ ನಿರ್ಮಾಪಕ
ಈ.ಎಂ. ಇಬ್ರಾಹಿಂರವರನ್ನು ನೆನೆಯುವುದರೊಂದಿಗೆ “ಮಾಷಾ ಅಲ್ಲಾ” ಎಂದು ಸ್ಮರಿಸಿದ ನಂತರವೇ ಊಟಕ್ಕೆ ಕುಳಿತುಕೊಳ್ಳುತ್ತೇನೆ ಎಂದು ವಿನಯಪೂರಕವಾಗಿ ಹೇಳಿಕೊಳ್ಳುತ್ತಾರೆ.