‘ಜಾತಸ್ಯ’ ಲೋಕಾರ್ಪಣೆಗೈದ ರಾಜೇಶ್

ಸಪ್ತ ಸುಗಂಧಗಳ ಊದುಕಡ್ಡಿಗಳು ಸಪ್ತ ಸ್ವರಗಳಿಗೆ ಸಮಾನ ಎಂದು ಹೊಗಳಿದರು ಗಾಯಕ ರಾಜೇಶ್ ಕೃಷ್ಣನ್. ಅವರಿಂದ ಈ ರೀತಿ ಪ್ರಶಂಸೆಗೆ ಒಳಗಾಗಿದ್ದು ‘ಜಾತಸ್ಯ’ ಎನ್ನುವ ಅಗರಬತ್ತಿ ಸಂಸ್ಥೆ.

“ಜಾತಸ್ಯ ತಂಡದವರು ಹೇಳಿದಂತೆ ಇದು ನೈಸರ್ಗಿಕವಾದ ಮಿಶ್ರಣಗಳಿಂದ ತಯಾರಾಗಿದೆ ಎನ್ನುವುದು ಖುಷಿಯ ವಿಚಾರ” ಎಂದರು ರಾಜೇಶ್ ಕೃಷ್ಣನ್. ಯಾಕೆಂದರೆ ಪೂಜೆಯಲ್ಲಿ ಬಳಸುವ ಎಣ್ಣೆಯ ಗುಣಮಟ್ಟ ಅಥವಾ ಊದಿನ ಕಡ್ಡಿಯ ಗಂಧ ಕೂಡ ನಮ್ಮ ಪ್ರಾರ್ಥನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂಥದೊಂದು ಪೂರಕವಾದ ಪರಿಮಳ ಈ ಅಗರಬತ್ತಿಯಿಂದ ಸಿಗುವಂತಾಗಲಿ ಎನ್ನುವು ರಾಜೇಶ್ ಅವರ ಹಾರೈಕೆಯಾಗಿತ್ತು.

ಸಪ್ತ ರೀತಿಯ ಸುಂಗಂಧ ಭರಿತ ಹಾಗೂ ಭಕ್ತಿ ಸಿಂಚನದ ‘ಜಾತಸ್ಯ’ ಅಗರಬತ್ತಿಯನ್ನು ಭಾರತದಲ್ಲಿ ಅದರಲ್ಲೂ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಮಾರುಕಟ್ಟೆಗೆ ತರಲಾಗಿದೆ. ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ‘ಜಾತಸ್ಯ’ ಅಗರಬತ್ತಿ ಜೊತೆಗೆ www.Jatasya.in ವೆಬ್ ಸೈಟ್ ಕೂಡ ಅನಾವರಣ ಮಾಡಲಾಗಿದೆ. ನಿರ್ಮಾಪಕ ಭಾ.ಮ.ಹರೀಶ್ ಅವರು ಈ ವೈಬ್ ಸೈಟ್ ಲೋಕಾರ್ಪಣೆ ಮಾಡಿದ್ದಾರೆ. ಐಟಿ ಹಿನ್ನಲೆಯಿಂದ ಬಂದ ದಾವಣಗೆರೆಯ ಮಂಜುನಾಥ್ ಅವರು ಇಂಥದೊಂದು ಅಗರಬತ್ತಿಯ ತಯಾರಿಕೆಯಲ್ಲಿ ವರ್ಷದ ಪ್ರಯತ್ನ ಇದೆ ಎಂದು ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

ಸಿನಿಮಾ, ಸಂಗೀತ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಬೆಂಗಳೂರಿನ ಪ್ರಖ್ಯಾತ ‘ನೆರಳು ಮೀಡಿಯಾ’ ಸಂಸ್ಥೆ ‘ಜಾತಸ್ಯ’ ಅಗರ ಬತ್ತಿಯ ಪ್ರಚಾರ ಕಾರ್ಯವನ್ನು ಕರ್ನಾಟಕದಾದ್ಯಂತ ಮಾಡಲು ಮುಂದಾಗಿದೆ. ಇದರ ಜೊತೆಗೆ ‘ಜಾತಸ್ಯ’ ಅಗರ ಬತ್ತಿಯ ಬೆಂಗಳೂರಿನ ವಿತರಣೆಯ ಜವಾಬ್ದಾರಿಯನ್ನು ” ನೆರಳು ಮೀಡಿಯ ಸಂಸ್ಥೆಯ ಮುಖ್ಯಸ್ಥರಾದ ಹನುಮೇಶ್ ಪಾಟೀಲ್ ರವರು ವಹಿಸಿಕೊಂಡಿದ್ದಾರೆ.

Recommended For You

Leave a Reply

error: Content is protected !!
%d bloggers like this: