
ನವ ನಿರ್ದೇಶಕ ಶ್ರೀಧರ್ ಶಾಸ್ತ್ರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚಿತ್ರ ‘ಟೆನೆಂಟ್’ ನ ಮೊದಲ ಶೆಡ್ಯೂಲ್ ಪೂರ್ತಿಯಾಗಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನಲ್ಲಿ ಕಳೆದ ಒಂದುವಾರದಿಂದ ಭರದಿಂದ ಚಿತ್ರೀಕರಣ ನಡೆದಿದ್ದು ಬುಧವಾರ ಮೊದಲ ಶೆಡ್ಯೂಲ್ ಪೂರ್ತಿಯಾಗಲಿದೆ. ಶೀರ್ಷಿಕೆ ಹಾಗೂ ಚಿತ್ರದ ಥೀಮ್ ಪೋಸ್ಟರ್ ಕಾರಣದಿಂದಲೇ ಗಮನ ಸೆಳೆಯುತ್ತಿರುವ ಸಿನಿಮಾ ಇದು. ನವೆಂಬರ್ ನಲ್ಲಿ ಮುಂದಿನ ಶೆಡ್ಯೂಲ್ ಯೋಜನೆ ಹಾಕಲಾಗಿದೆ.

ಈಗಾಗಲೇ ‘ಅನ್ ಲಾಕ್’ ಎನ್ನುವ ಕಿರುಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಶ್ರೀಧರ್ ಶಾಸ್ತ್ರಿ ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಜವಾಬ್ದಾರಿ ಕೂಡ ಶ್ರೀಧರ್ ಶಾಸ್ತ್ರಿಯವರದೇ ಆಗಿದೆ. ಧರ್ಮ ಕೀರ್ತಿರಾಜ್, ತಿಲಕ್ ಶೇಖರ್, ಸೋನು ಗೌಡ, ರಾಕೇಶ್ ಮಯ್ಯ, ಉಗ್ರಂ ಮಂಜು ಮೊದಲಾದ ಯುವ ನಟರು ಚಿತ್ರದ ತಾರಾಬಳಗಲ್ಲಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ನಡೆಯುವ ಕ್ರೈಂ ಥ್ರಿಲ್ಲರ್ ಸಿನಿಮಾ ಟೆನೆಂಟ್. ಬಾಡಿಗೆದಾರ ಹಾಗೂ ಮಾಲೀಕನ ನಡೆಯುವ ಕಥೆ ಚಿತ್ರದಲ್ಲಿದೆ.
ಮನೋಹರ್ ಜೋಶಿ ಛಾಯಾಗ್ರಹಣ, ಗಿರೀಶ್ ಒತ್ತೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಮಾಸ್ಟರ್ ಚಾಯ್ಸ್ ಕ್ರಿಯೇಷನ್ ಬ್ಯಾನರ್ ನಡಿ ಟಿ.ನಾಗಾರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
